ಸೋಮವಾರ, ಏಪ್ರಿಲ್ 28, 2025
HomeCorona UpdatesIndia Corona Updates : ಭಾರತದಲ್ಲಿ ತಗ್ಗಿದ ಕೊರೊನಾ ಅಬ್ಬರ : 24,354 ಹೊಸ ಕೋವಿಡ್-19...

India Corona Updates : ಭಾರತದಲ್ಲಿ ತಗ್ಗಿದ ಕೊರೊನಾ ಅಬ್ಬರ : 24,354 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲು

- Advertisement -

ನವದೆಹಲಿ : ದೇಶದಲ್ಲಿ ಕೊರೊನಾ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 24,354 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಾಗಿದೆ. ಇದು ನಿನ್ನೆಗಿಂತ ಶೇಕಡಾ 8.9 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ ದೇಶದ ಪ್ರಕರಣಗಳ ಸಂಖ್ಯೆ 3,37,91,061 ಕ್ಕೆ ಏರಿಕೆಯಾಗಿದೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳ ಪೈಕಿ ಕೇರಳ ಅತೀ ಹೆಚ್ಚು ಕೊರೊನಾ ಸೋಂಕು ದಾಖಲಾಗಿದ್ದು, ಕೇರಳದಲ್ಲಿ 13,834, ಮಹಾರಾಷ್ಟ್ರ 3,105 ಪ್ರಕರಣ, ಮಿಜೋರಾಂ 1,626 ಪ್ರಕರಣ, ತಮಿಳುನಾಡು 1,597 ಪ್ರಕರಣಗಳನ್ನು ಹೊಂದಿದೆ ಮತ್ತು ಆಂಧ್ರಪ್ರದೇಶ 809 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: Covid -19: ಮಕ್ಕಳಿಗೆ 10,000 ಕೋವಿಡ್ ಕಿಟ್‌ ಉಚಿತ ವಿತರಣೆ : 3 ಅಲೆ ತಡೆಗೆ ಕೇಂದ್ರದ ಸಿದ್ದತೆ

ಕಳೆದ 24 ಗಂಟೆಗಳಲ್ಲಿ 24,354 ಹೊಸ ಪ್ರಕರಣಗಳು ಮತ್ತು 234 ಸಾವುಗಳು ಸಂಭವಿಸಿವೆ ಎಂದು ಭಾರತ ವರದಿ ಮಾಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,73,889ಕ್ಕೇ ಏರಿಕೆಯಾಗಿದೆ. ಇದು 197 ದಿನಗಳಲ್ಲಿ ಅತ್ಯಂತ ಕಡಿಮೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಇದನ್ನೂ ಓದಿ: India Corona Report : ಭಾರತದಲ್ಲಿ ಕೊರೊನಾ ಕಣ್ಣಾಮುಚ್ಚಾಲೆ : 23,529 ಹೊಸ ಕೊರೊನಾ ಪ್ರಕರಣ ದಾಖಲು

RELATED ARTICLES

Most Popular