ಕೋಟ : ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಉಡುಪಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಕೋಟ ಸಮೀಪ ದಲ್ಲಿರುವ ಇಸಿಆರ್ (ECR GROUP of Institutions) ಕಾಲೇಜಿನಲ್ಲಿ ಓಣಂ ಆಚರಣೆಯ ನೆಪದಲ್ಲಿ ಕೊರೊನಾ ರೂಲ್ಸ್ ಗಾಳಿಗೆ ತೂರಲಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಮಾಸ್ಕ್, ಸಾಮಾಜಿಕ ಅಂತರ ಮರೆತು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಕೇರಳದ ವಿದ್ಯಾರ್ಥಿಗಳಿಂದಲೇ ತುಂಬಿರುವ ಕಾಲೇಜು ಕೊರೊನಾ ಹಾಟ್‌ಸ್ಪಾಟ್ ಆಗುತ್ತಾ ಅನ್ನೋ ಆತಂಕ ಎದುರಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಗಳನ್ನು ನಡೆಸೋದಕ್ಕೂ ಉಡುಪಿ ಜಿಲ್ಲಾಡಳಿತ ಹಿಂದೆ ಮುಂದೆ ನೋಡಿತ್ತು. ಅದ್ರಲ್ಲೂ ಕೇರಳದಿಂದ ಬರುವ ವಿದ್ಯಾರ್ಥಿ ಗಳಿಗೆ ಕಡ್ಡಾಯ ಕ್ವಾರಂಟೈನ್ ನಿಯಮ ಜಾರಿಗೆ ತಂದಿದೆ. ಆದರೆ ಉಡುಪಿ ಜಿಲ್ಲೆಯ ಕೋಟ ಸಮೀಪದಲ್ಲಿರುವ ಇಸಿಆರ್ ಕಾಲೇಜಿನಲ್ಲಿ ಬಹುತೇಕ ಕೇರಳದ ವಿದ್ಯಾರ್ಥಿಗಳೇ ವ್ಯಾಸಾಂಗ ಮಾಡುತ್ತಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈ ಕಾಲೇಜು ಸರಕಾರದ ನಿಯಮವನ್ನೇ ಗಾಳಿಗೆ ತೂರಿದೆ.
ಯಾವುದೇ ಸಭೆ ಸಮಾರಂಭಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿಯನ್ನು ನಿರಾಕರಿಸಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿ ಕೋಣೆಯೊಳಗೆ ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಬೇಕು. ಮಾಸ್ಕ್ ಧರಿಸದ, ಕೊರೊನಾ ನಿಯಮ ಪಾಲನೆ ಮಾಡದ ಕಾಲೇಜುಗಳ ವಿರುದ್ದ ಕಠಿಣ ಕ್ರಮೈಗೊಳ್ಳುವುದಾಗಿ ರಾಜ್ಯ ಸರಕಾರ ಮೊದಲೇ ಎಚ್ಚರಿಕೆಯನ್ನು ನೀಡಿತ್ತು. ಇನ್ನು ಉಡುಪಿ ಜಿಲ್ಲಾಡಳಿತ ಮಾಸ್ಕ್ ಮರೆತವರಿಗೆ ಕಡ್ಡಾಯ ಕೊರೊನಾ ಟೆಸ್ಟ್ ನಡೆಸುವುದಾಗಿ ಎಚ್ಚರಿಸಿದೆ. ಆದ್ರೆ ಓಣಂ ಆಚರಣೆಯ ವೇಳೆಯಲ್ಲಿ ಯಾವುದೇ ವಿದ್ಯಾರ್ಥಿ, ಉಪನ್ಯಾಸಕರು, ಸಿಬ್ಬಂಧಿಗಳು ಮಾಸ್ಕ್ ಧರಿಸಿಲ್ಲ.
ನೂರಾರು ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಾ ಮೈ ಮರೆತಿದ್ದಾರೆ. ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಕಾಲೇಜಿನಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸ ಮಾಡುತ್ತಿ ದ್ದಾರೆ. ಹೀಗಾಗಿ ಸ್ಥಳೀಯವಾಗಿಯೂ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಜನಸಾಮಾನ್ಯರಿಗೆ ಕಠಿಣ ರೂಲ್ಸ್ ಜಾರಿ ಮಾಡುವ ಉಡುಪಿ ಜಿಲ್ಲಾಧಿಕಾರಿಗಳು ಕೊರೊನಾ ನಿಯಮ ಉಲ್ಲಂಘಿಸಿರುವ ಕಾಲೇಜು ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊರೊನಾ ಭೀತಿಯಿಂದಾಗಿ ಶಾಲೆ, ಕಾಲೇಜು ಆರಂಭಿಸಲು ಸರಕಾರ ಹಿಂದೆ ಮುಂದೆ ನೋಡುತ್ತಿದೆ. ಕಾಲೇಜುಗಳು ಆರಂಭವಾದ ನಂತರ ಕೊರೊನಾ ನಿಯಮ ಪಾಲನೆ ಆಗುತ್ತಿದೆಯಾ ಅನ್ನೋ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಹೆಮ್ಮಾರಿ ಆರ್ಭಟ ದಿನೇ ದಿನೇ ಹೆಚ್ಚುತ್ತಿದ್ದು, ಅಪಾಯ ಎದುರಾಗುವ ಮುನ್ನವೇ ಎಚ್ಚರವಹಿಸೋದು ಒಳಿತು.
ಇದನ್ನೂ ಓದಿ : ಜ್ವರ, ಶೀತ, ಕೆಮ್ಮದ ಲಕ್ಷಣವಿದ್ರೆ ಕೊರೊನಾ ಟೆಸ್ಟ್ ಕಡ್ಡಾಯ : ಉಡುಪಿ ಡಿಸಿ
ಇದನ್ನೂ ಓದಿ : ಉಡುಪಿ : MASK ಇಲ್ಲದಿದ್ರೆ ಕೊರೊನಾ ಟೆಸ್ಟ್ : ಮಾಸ್ಕ್ ಮರೆತೀರಾ ಹುಷಾರ್ !