ಭಾನುವಾರ, ಏಪ್ರಿಲ್ 27, 2025
HomeCorona UpdatesBBMP New Guidelines : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ...

BBMP New Guidelines : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ ಹೊಸ ಗೈಡ್‌ಲೈನ್ಸ್‌

- Advertisement -

ಬೆಂಗಳೂರು : ಎಲ್ಲೆಡೆ ನಿಧಾನಕ್ಕೆ ಏರಿಕೆಯಾಗುತ್ತಿರುವ ಕೋರೋನ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿಸಿದಂತೆ ಸಭೆ ನಡೆದಿದ್ದು ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತರು ಡಾ. ತ್ರಿಲೋಕ್ ಚಂದ್ರರವರು ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (PHANA) ಮತ್ತು ಅನೇಕ ಪ್ರಮುಖ ಖಾಸಗಿ ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs), ವರ್ತಕರ ಸಂಘಗಳು, ಮಾಲ್ ಗಳು, ಹೋಟೆಲ್ ಗಳು, ಚಿತ್ರಮಂದಿರಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದು ಹೊಸ ಗೈಡ್ ಲೈನ್ಸ್ (BBMP New Guidelines ) ಬಿಡುಗಡೆ ಮಾಡಿದ್ದಾರೆ.

ಹೊಸ ಗೈಡ್ಸ್ ಲೈನ್ಸ್ ಹಾಸ್ಪಿಟಲ್ ಗಳು, ಮನೋರಂಜನಾ ಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು, ಹೊಟೇಲ್ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಗಳಿಗೆ ನೀಡಲಾದ ಸೂಚನೆಗಳು ಇಲ್ಲಿವೆ.

  1. ಹೊರ ರೋಗಿಗಳ ವಿಭಾಗ(OPD)ಗಳಲ್ಲಿ ಎಲ್ಲಾ ILI/ SARI ಪ್ರಕರಣಗಳನ್ನು ಪರೀಕ್ಷಿಸಿ. ಒಳರೋಗಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಿ.
  2. ICMR ಪೋರ್ಟಲ್ ನಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಎಲ್ಲಾ ಪರೀಕ್ಷಾ ವಿವರಗಳನ್ನು ಅಪ್ಲೋಡ್ ಮಾಡಿ. CT ವ್ಯಾಲ್ಯು 30 ಕ್ಕಿಂತ ಕಡಿಮೆ ಇರುವ ಎಲ್ಲಾ ಪಾಸಿಟಿವ್ ಪ್ರಕರಣಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸಲು ಸೂಚಿಸಲಾಗಿದೆ.
  3. ಖಾಸಗಿ ಆಸ್ಪತ್ರೆಯ ಹಾಸಿಗೆ ಗಳನ್ನು ಕಾಯ್ದಿರಿಸುವ ಕುರಿತು ಚರ್ಚಿಸಲಾಯಿತು ಮತ್ತು ಶೇ. 10 ಮೀಸಲಾತಿಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಹಿಂದಿನ ಆದೇಶವು ಇನ್ನೂ ಪ್ರಸ್ತುತವಾಗಿದೆ ಮತ್ತು ಆಸ್ಪತ್ರೆಗಳು ಅದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬಹುದು ಎಂದು ಪುನರುಚ್ಚರಿಸಲಾಯಿತು.
  4. ಖಾಸಗಿ ಆಸ್ಪತ್ರೆಯ ಹಾಸಿಗೆ ಗಳಿಗಾಗಿ ರಿಯಲ್ ಟೈಮ್ ಬೆಡ್ ಲಭ್ಯತೆ ಪೋರ್ಟಲ್ ಅನ್ನು ತಕ್ಷಣವೇ ಸಕ್ರಿಯಗೊಳಿಸಬೇಕು.

ಇನ್ನೂ ಸಿನಿಮಾ ಹಾಲ್ ಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಹೋಟೆಲ್ ಗಳು, ವ್ಯಾಪಾರಿ ಒಕ್ಕೂಟಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಿಗೆ ಈ ಕೆಳಗಿನ ಸೂಚನೆ ನೀಡಲಾಗಿದೆ.

  1. ಹೋಟೆಲ್ ಗಳು, ಮಾಲ್ ಗಳು, ಅಂಗಡಿಗಳು, ಚಿತ್ರಮಂದಿರಗಳು ಇತ್ಯಾದಿ ವಾಣಿಜ್ಯ ಸ್ಥಳಗಳಲ್ಲಿ ಕೋವಿಡ್ ಸಮುಚಿತ ನಡವಳಿಕೆಯನ್ನು(CAB) ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
  2. ಸಿನಿಮಾ ಹಾಲ್ ಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಹೋಟೆಲ್ ಗಳಿಗೆ ಪ್ರವೇಶಕ್ಕಾಗಿ ಡಬಲ್ ಡೋಸ್ ವ್ಯಾಕ್ಸಿನೇಷನ್ ಅನ್ನು ಕಟ್ಟುನಿಟ್ಟಾಗಿ ಕಡ್ಡಾಯಗೊಳಿಸಬೇಕು.
  3. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಿನ ಜಾರಿ ಮತ್ತು ಪ್ರವೇಶ ದ್ವಾರಗಳಲ್ಲಿ ತಾಪಮಾನ ತಪಾಸಣೆ.
  4. ಎಲ್ಲಾ ಸಿಬ್ಬಂದಿಗಳ ಲಸಿಕಾಕರಣವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವರನ್ನು ಆಗಾಗ್ಗೆ ಪರೀಕ್ಷೆಗೊಳಪಡಿಸುವುದು.
  5. ಹೆಚ್ಚಿನ ಪ್ರಕರಣಗಳಿರುವ ಪ್ರದೇಶಗಳಿಂದ ಬರುವವರ, ಅದರಲ್ಲೂ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ಜಾಗರೂಕರಾಗಿರುವುದು.
  6. ಹೆಚ್ಚು ಜನರು ಸೇರುವ ವ್ಯಾಪಾರ ಪ್ರದೇಶಗಳಲ್ಲಿ ಮಾರ್ಷಲ್ ಗಳು ಗಸ್ತು ತಿರುಗಬೇಕು ಮತ್ತು ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು.

ಇನ್ನು ಬಿಬಿಎಂಪಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ(RWAs) ನೀಡಲಾದ ಸೂಚನೆಗಳು ಇಂತಿವೆ

  1. ಹೆಚ್ಚಿನ ಕಣ್ಗಾವಲು ಚಟುವಟಿಕೆಗಳಿಗೆ ಸಹಕಾರ ನೀಡಬೇಕು.
  2. ಮುನ್ನೆಚ್ಚರಿಕೆ ಡೋಸ್ ಕವರೇಜ್ ಮತ್ತು ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ RWA ಮಟ್ಟದಲ್ಲಿ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಬೇಕು.
  3. ಎಲ್ಲಾ ವಯೋಮಾನದವರೂ ಶೇ. 100 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು RWA ಗಳಲ್ಲಿ ಶಿಬಿರಗಳನ್ನು ಆಯೋಜಿಸಬೇಕು.
  4. ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಿಂದ ಜೀನೋಮಿಕ್ ಕಣ್ಗಾವಲಿಗಾಗಿ ಸೀವೇಜ್ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.
  5. ಚಾಲ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಕಾರ RWA ಗಾಗಿ ಪರಿಷ್ಕೃತ ಸಲಹೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಅದನ್ನು ಹಂಚಿಕೊಳ್ಳಬೇಕು.
  6. ಉಗುಳುವಿಕೆ ವಿರುದ್ಧ ಆಂದೋಲನ ಮತ್ತು ಮಾಸ್ಕ್ ಧಾರಣೆ ಅಭಿಯಾನದ ಪುನರಾರಂಭವನ್ನು NGO ಪಾಲುದಾರರು ಪ್ರಸ್ತಾಪಿಸಿದರು.
  7. ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಪರೀಕ್ಷಿಸಬೇಕು.

ಬಿಬಿಎಂಪಿ ಹೊಸ ಗೈಡ್ ಲೈನ್ಸ್ ಜಾರಿಯಾಗುತ್ತಿದ್ದಂತೆ ಜನರಲ್ಲಿ ಆತಂಕ ಕೂಡ ಹೆಚ್ಚಿದ್ದು ಮತ್ತೊಮ್ಮೆ ಶಾಲಾ ಕಾಲೇಜುಗಳ ಆರಂಭದ ವೇಳೆಗೆ ಕೊರೋನಾ ಮಹಾಮಾರಿ ತನ್ನ ರೌದ್ರಾವತಾರ ತೋರುವ ಆತಂಕ ಎದುರಾಗಿದೆ.

ಇದನ್ನೂ ಓದಿ : ಕರ್ತವ್ಯಕ್ಕೆ ಮರಳಿದ ದಿನವೇ ಹೆಡ್​ಕಾನ್​​ಸ್ಟೇಬಲ್​ ಆತ್ಮಹತ್ಯೆ

ಇದನ್ನೂ ಓದಿ : ಬಿಸಿಲಿನ ಬೇಗೆ ನೀಗಿಸಲು ಉತ್ತಮ ತಂಪು ತಂಪು ಎಳನೀರು ಮತ್ತು ಮಜ್ಜಿಗೆ!

Corona Vaccine, Mask Compulsory, Marshall Patrol: BBMP New Guidelines

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular