ಬೆಂಗಳೂರು : ಕೊರೊನಾ ವೈರಸ್ ಸೋಂಕಿ ಭೀತಿ ಇದೀಗ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರರಾವ್ ಅವರಿಗೂ ತಟ್ಟಿದೆ. ಕಾರು ಚಾಲಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಬೆಂಗಳೂರು ನಗರದಲ್ಲಿಯೇ ಬರೋಬ್ಬರಿ 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಸಾಮೂಹಿಕವಾಗಿ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪೈಕಿ ಭಾಸ್ಕರ್ ರಾವ್ರ ಕಾರು ಚಾಲಕನ ವರದಿ ಪಾಸಿಟಿವ್ ಬಂದಿದೆ.

ಬೆಂಗಳೂರಿನಲ್ಲಿ ಕರೊನಾ ಚೈನ್ ಲಿಂಕ್ ಕತ್ತರಿಲು ಸರ್ಕಾರ, ಬಿಬಿಎಂಪಿ, ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜಧಾನಿಯನ್ನು ಕಂಪ್ಲೀಟ್ ಲಾಕ್ಡೌನ್ ಮಾಡಲಾಗಿದ್ದು, ಜನರು ಅನಗತ್ಯವಾಗಿ ರಸ್ತೆಗಿಳಿಯದಂತೆ ಎಲ್ಲ ವಾರ್ಡ್ನಲ್ಲೂ ಪೊಲೀಸ್ ಕಣ್ಗಾವಲಿದೆ.

ಸದ್ಯ ತಮ್ಮ ಕಾರು ಚಾಲಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿರುವ ಭಾಸ್ಕರರಾವ್ ಅವರು ಮನೆಯಿಂದಲೇ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿಗೆ ಅಗತ್ಯ ನಿದರ್ಶನ ನೀಡಲಿದ್ದಾರೆ.