Corona virus End : ಕೊರೋನಾ ಆತಂಕಕ್ಕೆ ಎದುರಾಯ್ತು ಅಂತ್ಯ: ಆರೋಗ್ಯ ಸಚಿವರು ಕೊಟ್ರು ಸಿಹಿಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಆರ್ಭಟ ಕೊನೆಗೊಳ್ಳುವ ಮುನ್ಸೂಚನೆ ಸಿಕ್ಕಿದ್ದು ಫೆಬ್ರವರಿ ಎರಡನೇ ವಾರದ ವೇಳೆಗೆ ಕೊರೋ‌ನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದ್ದು ( Corona virus End ) ಈಗಲೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬ ಮಾಹಿತಿ ಸರ್ಕಾರದಿಂದ ಹೊರಬಿದ್ದಿದ್ದು, ಕೊರೋನಾದಿಂದ ಆತಂಕಕ್ಕೊಳಗಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿ ಒಟ್ಟಾರೆ ಕೊರೋನಾ ಕೇಸ್ ಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಆದರೂ ಕೊರೋನಾ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಸರ್ಕಾರ ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿದೆ.

ಕೋವಿಡ್ ಸಂಖ್ಯೆ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ ಗಳ ಸಂಖ್ಯೆ ಕಳೆದ ವಾರಕ್ಕಿಂತ 10 % ಹೆಚ್ಚಾಗಿದೆ. ಆದರೆ ಕೊರೋನಾ ಪಾಸಿಟಿವ್ ಆಗಿದ್ದರೂ ರೋಗಲಕ್ಷಣಗಳು ಉಲ್ಬಣಿಸಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಾತಿ ಸಂಖ್ಯೆ ಕಡಿಮೆ ಇದೆ. ಸದ್ಯ ರಾಜ್ಯದಲ್ಲಿ ಕೊರೋನಾ ಪೀಡಿತರ ಪೈಕಿ 3442 ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನು 1788 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೋಗಿಗಳಲ್ಲೂ ಸೋಂಕಿನ ಗುಣ ಲಕ್ಷಣ ಕಡಿಮೆ ಇದೆ.

ಹೀಗಾಗಿ ಈ ಭಾರಿ ಕೊರೋನಾ ಮೂರನೆ ಅಲೆಯ ಕಾರಣಕ್ಕೆ ಯಾರು ಆತಂಕ ಪಡೋ ಅಗತ್ಯವಿಲ್ಲ. ಆದರೆ ಕೊರೋನಾದ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸುಧಾಕರ್ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರವೂ ಕೊರೋನಾ ಬಗ್ಗೆ ಸಿಹಿಸುದ್ದಿ‌ನೀಡಿದ್ದು, ಫೆಬ್ರವರಿ ಎರಡು ಮೂರನೇ ವಾರಕ್ಕೆ ಕಡಿಮೆ ಆಗಲಿದೆ ಎಂಬ ಮಾಹಿತಿ ನೀಡಿದೆ. ಹೀಗಾಗಿ ನಾವು ಇನ್ನೊಂದು ಎರಡು ಮೂರು ವಾರ ಹೆಚ್ಚು ಜಾಗೃತಿ ವಹಿಸಬೇಕು.

ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಡೋಸ್ ವಾಕ್ಸಿನ್ ಆಗಿರೋದರಿಂದ ಕೊರೋನಾ ಬಾಧಿಸಿದರೂ ಅದರ ತೀವ್ರತೆ ಹೆಚ್ಚಿರೋದಿಲ್ಲ. ಜನರಿಗೆ ರೋಗನಿರೋಧಕ ಶಕ್ತಿ ಬಂದಿದೆ. ಹೀಗಾಗಿ ಯಾವುದೇ ಪ್ರಬೇಧ ಬಂದರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸುಧಾಕರ್‌ಮಾಹಿತಿ ನೀಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶಾಲೆಗಳು ಪುನರಾರಂಭವಾಗಿದ್ದು ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷಾ ಸಿದ್ಧತೆಗಳಯ ಆರಂಭಗೊಂಡಿದೆ. ಹೀಗಾಗಿ ಪೋಷಕರು ಇನ್ನೆರಡು ಮೂರು ವಾರಗಳ ಕಾಲ ಹೆಚ್ಚು ಕಾಳಜಿ ವಹಿಸಬೇಕಿದೆ.

ಇದನ್ನೂ ಓದಿ : ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್​ 1

ಇದನ್ನೂಓದಿ : Covid-19 cases : ಐದು ದಿನಗಳ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ

( Corona virus End shortly, health minister give good news)

Comments are closed.