ಬೆಂಗಳೂರು : ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿದ್ದು ಇಂದೂ ಕೂಡ ರಾಜ್ಯದಲ್ಲಿ 23 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 1079ಕ್ಕೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿಗೆ ಶನಿವಾರ ಕೊರೊನಾ ಶಾಕ್ ಕೊಟ್ಟಿದ್ದು, ಒಂದೇ ದಿನ ಬರೋಬ್ಬರಿ 14 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೌಸ್ ಕೀಪರ್ ನಿಂದಲೇ 14 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಇನ್ನು ಹಾಸನದಲ್ಲಿ 3, ದಾವಣಗೆರೆ 1, ಮಂಡ್ಯ 1, ಧಾರವಾಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಮಂಡ್ಯದಲ್ಲಿ ಅಂತರ್ಜಿಲ್ಲಾ ಪ್ರಯಾಣದಿಂದ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಹಸಿರು ವಲಯದಲ್ಲಿರುವ ಹಾಸನದಲ್ಲಿ ಮುಂಬೈನಿಂದ ಬಂದಿದ್ದ ಮೂವರಿಗೆ ಮಹಾಮಾರಿ ಒಕ್ಕರಿಸಿದೆ.

ಇನ್ನು ಉಡುಪಿಯಲ್ಲಿ ವಿದೇಶದಿಂದ ಬಂದಿದ್ದ ದಂಪತಿಯ ಮಗುವಿಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ.