ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿರುವ ಬೆನ್ನಲ್ಲೇ ಇದೀಗ ಎರಡನೇ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಮತ್ತೆ ಸೋಂಕು ದೃಢಪಡುತ್ತಿದೆ.

ಅದ್ರಲ್ಲೂ ಕರೊನಾ ಸೋಂಕಿನ ಎರಡನೇ ಅಲೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದು, ಇದೀಗ ಆ ಕುರಿತ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಶೇಷವೆಂದರೆ, ಆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೇ ಪ್ರತಿಕ್ರಿಯಿಸಿದ್ದಾರೆ.

ಸೋಂಕಿನಿಂದ ಒಮ್ಮೆ ಗುಣವಾದವರು ಮತ್ತೆ ಸೋಂಕು ತಗುಲುವ ಭಯದಿಂದ ಮುಕ್ತರಲ್ಲ. ಭಾರತ ಮಾತ್ರವಲ್ಲದೆ ಜಗತ್ತಿನ ಇತರ ಭಾಗಗಳಲ್ಲೂ ಒಮ್ಮೆ ಸೋಂಕುಮುಕ್ತರಾದವರೂ ಮತ್ತೆ ಸೋಂಕಿಗೆ ಒಳಗಾದ ಪ್ರಕರಣಗಳು ವರದಿಯಾಗಿವೆ.

ಅದಾಗ್ಯೂ ಅಂಥ ಪ್ರಕರಣಗಳು ನಗಣ್ಯ ಎಂಬ ಪ್ರಮಾಣದಲ್ಲಿ ಇರುವುದರಿಂದ ಆ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಕೋವಿಡ್ ರೋಗಿಯ ವರದಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗುತ್ತಿದೆ. ಪುನಃ ಸೋಂಕು ತಗುಲುವ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಂಥ ರಿಸ್ಕ್ಗಳು ಕಡಿಮೆ ಇವೆ ಎಂದು ಸಚಿವರು ಹೇಳಿದ್ದಾರೆ.