Coronavirus pandemic Updates : ಭಾರತದಲ್ಲಿ ಕೊರೊನಾ ನಾಗಾಲೋಟ ನಿಲ್ಲುವಂತೆ ಕಾಣುತ್ತಿಲ್ಲ. ಈ ಬಾರಿಯಂತೂ ದೈನದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 2,64,202 ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಇದರ ಜೊತೆಯಲ್ಲಿ ಕಳೆದೊಂದು ದಿನದಲ್ಲಿ 1,09,345 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ದೇಶದಲ್ಲಿ ರಿಕವರಿ ಪ್ರಮಾಣ 95.20 ಪ್ರತಿಶತಕ್ಕೆ ಬಂದು ತಲುಪಿದೆ. ಇಲ್ಲಿಯವರೆಗೆ ದೇಶದಲ್ಲಿ 3,48,24,706 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 12,72,073 ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ ಇಂದಿಗೆ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ 6.7 ಪ್ರತಿಶತ ಏರಿಕೆ ಕಂಡಿದೆ. ನಿನ್ನೆಗಿಂತ ಇಂದು 2,47,417 ಹೆಚ್ಚುವರಿ ಕೊರೊನಾ ಪ್ರಕರಣಗಳು ವರದಿಯಾಗಿದೆ.
ದೇಶದಲ್ಲಿ ಕೊರೊನಾದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 4,85,350 ಆಗಿದೆ. 2020ರ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಮೊದಲ ಕೊರೊನಾ ಸಾವು ಸಂಭವಿಸಿತ್ತು. ದೈನಂದಿನ ಪಾಸಿಟಿವಿಟಿ ಪ್ರಮಾಣ ಇಂದಿಗೆ 14.78 ಪ್ರತಿಶತಕ್ಕೆ ಬಂದು ತಲುಪಿದೆ.
ಇನ್ನು ಇಂದು ಕೊರೊನಾ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 5753ಕ್ಕೆ ಏರಿಕೆ ಕಂದಿದೆ. ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ಒಂದು ಓಮಿಕ್ರಾನ್ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಐಸಿಎಂಆರ್ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ 69,90,99,084 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 17,87,457 ಸ್ಯಾಂಪಲ್ಗಳನ್ನು ಗುರುವಾರ ಪರೀಕ್ಷೆ ಮಾಡಲಾಗಿದೆ.
Coronavirus pandemic Updates: 2.64 lakh new cases, 315 deaths reported in last 24hrs; positivity rate at 14.7%
ಇದನ್ನು ಓದಿ : Split by Partition Brothers met: ಭಾರತ ಪಾಕ್ ವಿಭಜನೆಯಲ್ಲಿ ಬೇರ್ಪಟ್ಟ ಸೋದರರು ವೃದ್ಧಾಪ್ಯದಲ್ಲಿ ಒಂದಾದರು! ಓದಿ ಹೃದಯಂಗಮ ಜೀವಗಾಥೆ
ಇದನ್ನೂ ಓದಿ : Nannamma Super Star samanvi : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ