Coronavirus pandemic : ದೇಶದಲ್ಲಿ ಕೊರೊನಾ ರೌದ್ರಾವತಾರ ಇಂದೂ ಕೂಡ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,37,704 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಅಲ್ಲದೇ ಒಂದು ದಿನದಲ್ಲಿ 488 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಒಟ್ಟು 2,42,676 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ರಿಕವರಿ ದರ 93.50 ಪ್ರತಿಶತವಾಗಿದೆ.
ದೇಶದಲ್ಲಿ ಕೋವಿಡ್ 19ನ ಒಟ್ಟು ಸಕ್ರಿಯ ಪ್ರಕರಣಗಳು 21,13,365ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4,88,884 ಆಗಿದೆ . 2020ರ ಮಾರ್ಚ್ ತಿಂಗಳಿನಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ದೇಶದಲ್ಲಿ ಸಾವನ್ನಪ್ಪಿದ್ದರು.
ಈ ನಡುವೆ ದೇಶದಲ್ಲಿ ಓಮಿಕ್ರಾನ್ ಪ್ರಕರಣವು 10,050ಕ್ಕೆ ತಲುಪಿದೆ. ನಿನ್ನೆಗಿಂತ ಇಂದಿಗೆ ದೇಶದಲ್ಲಿ 3.69 ಪ್ರತಿಶತ ಹೆಚ್ಚಿಗೆ ಕೋವಿಡ್ ಪ್ರಕರಣ ವರದಿಯಾಗಿದೆ. ದೈನಂದಿನ ಕೋವಿಡ್ ಪಾಸಿಟಿವ್ ದರವು 17.22 ಪ್ರತಿಶತವಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಈವರೆಗೆ 71,34,99,892 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 19,60,954 ಸ್ಯಾಂಪಲ್ಗಳನ್ನು ಶುಕ್ರವಾರದಂದು ಪರೀಕ್ಷಿಸಲಾಗಿದೆ.
Coronavirus pandemic Updates: India adds 3.37 lakh new cases with positivity rate at 17.22%; 488 fatalities
ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ
ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು