ಮುಂಬೈ : ಕೊರೊನಾ ವೈರಸ್ ಸೋಂಕಿನ ಆರ್ಭಟ ಜೋರಾಗಿದೆ. ಕೊರೊನಾ ಲಸಿಕೆ ತೆಗೆದುಕೊಂಡಿದ್ದರೂ ಕೂಡ ಡೆಲ್ಟಾ ಫ್ಲಸ್ ಮಾರಕವಾಗಿ ಪರಿಣಮಿಸುತ್ತಿದ್ದು, ಮುಂಬೈನಲ್ಲಿ ಕೊರೊನಾ ಎರಡೂ ಲಸಿಕೆ ತೆಗೆದುಕೊಂಡಿದ್ದ ವೃದ್ದೆಯೋರ್ವರು ಡೆಲ್ಟಾ ಫ್ಲಸ್ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಡೆಲ್ಟಾ ಫ್ಲಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಲಾಕ್‌ಡೌನ್ ತೆರವಾಗುತ್ತಿದ್ದಂತೆಯೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದೆ. ಪ್ರಮುಖವಾಗಿ ಕೊರೊನಾ ಎರಡು ಡೋಸ್ ಲಸಿಕೆ ಪಡೆದುಕೊಡಿದ್ದ 63 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಇದು ಮುಂಬೈನಲ್ಲಿ ಡೆಲ್ಟಾ ಫ್ಲಸ್‌ಗೆ ಬಲಿಯಾದ ಮೊದಲ ಪ್ರಕರಣವಾಗಿದೆ. ವೃದ್ದೆ ಡೆಲ್ಟಾ ಫ್ಲಸ್ ಜೊತೆಗೆ ಇತರ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಇದುವರೆಗೆ 65 ಮಂದಿಗೆ ಡೆಲ್ಟಾ ಫ್ಲಸ್ ಇರುವುದು ದೃಢಪಟ್ಟಿದೆ. ಅದ್ರಲ್ಲೂ ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಡೆಲ್ಟಾ ಫ್ಲಸ್ ರೂಪಾಂತರಿಗೆ ತುತ್ತಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿನ ಅಂಕಿ ಅಂಶಗಳನ್ನು ನೋಡಿದ್ರೆ 60 ವರ್ಷ ಮೇಲ್ಪಟ್ಟ 8 ಮಂದಿಗೆ ಡೆಲ್ಟಾ ಫ್ಲಸ್ ಕಾಣಿಸಿಕೊಂಡಿದ್ರೆ, 19 ರಿಂದ 45 ವರ್ಷ 33 ಮಂದಿ, 46 ರಿಂದ 60 ವರ್ಷದ 17 ಮಂದಿ, 18 ವರ್ಷದ ಒಳಗಿನ 7 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಮುಂಬೈನಲ್ಲಿಯೂ ಡೆಲ್ಟಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ.
ಇದನ್ನೂ ಓದಿ : Kerala Corona : ಕೇರಳದಲ್ಲಿ ಹೆಚ್ಚುತ್ತಿದೆ ಹೆಮ್ಮಾರಿ : ಲಸಿಕೆ ಪಡೆದ 40 ಸಾವಿರ ಮಂದಿಗೆ ಸೋಂಕು

ಮಹಾರಾಷ್ಟ್ರದಲ್ಲಿ ಕೊರೊನಾ, ಡೆಲ್ಟಾ ಪ್ರಕರಣ ಹೆಚ್ಚುತ್ತಿದ್ದರೂ ಕೂಡ ಇದೀಗ ಸರಕಾರ ಲಾಕ್‌ಡೌನ್ ನಿಯಮದಲ್ಲಿ ಸಡಿಲಿಕೆಯನ್ನು ಮಾಡುತ್ತಿದೆ. ಆದರೆ ಇದೀಗ ಡೆಲ್ಟಾ ಸಾವು ದಾಖಲಾಗುತ್ತಿದ್ದಂತೆಯೇ ಆರೋಗ್ಯ ಇಲಾಖೆಯೂ ಎಚ್ಚೆತ್ತುಕೊಂಡಿದೆ. ಅಲ್ಲದೇ ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯೂ ಇದೆ.