ಸೋಮವಾರ, ಏಪ್ರಿಲ್ 28, 2025
HomeCorona Updatesschool reopen : ಶಾಲೆಗಳ ಪುನಾರಂಭ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಸಚಿವ ಬಿ.ಸಿ ನಾಗೇಶ್​

school reopen : ಶಾಲೆಗಳ ಪುನಾರಂಭ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಸಚಿವ ಬಿ.ಸಿ ನಾಗೇಶ್​

- Advertisement -

ಬೆಂಗಳೂರು : ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿಗಳನ್ನು ಬಂದ್​ ಮಾಡಲಾಗಿತ್ತು. ಶಾಲೆಗಳನ್ನು ಪುನಾರಂಭ ಮಾಡುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಸಾಕಷ್ಟು ಮಹತ್ವದ ಮಾಹಿತಿಯನ್ನು (school reopen) ನೀಡಿದ್ರು.

ಬೆಂಗಳೂರು ನಗರದಲ್ಲಿ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಶಿಕ್ಷಣ ಇಲಾಖೆ ಯೋಚನೆ ನಡೆಸುತ್ತಿದೆ. 10,11 ಹಾಗೂ 12ನೇ ತರಗತಿ ಮಕ್ಕಳಿಗೆ ತರಗತಿಗಳು ನಡೆಸುತ್ತಾ ಇದ್ದೇವೆ. ಮಕ್ಕಳಲ್ಲಿ ಪಾಸಿಟಿವಿಟಿ ದರ ಕಡಿಮೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಎಲ್ಲಾ ವಿಚಾರಗಳನ್ನು ಸಿಎಂ ಮುಂದೆ ಇಡಲಿದ್ದೇನೆ. ಬಳಿಕ ತಜ್ಞರ ಅಭಿಪ್ರಾಯವನ್ನೂ ಸ್ವೀಕರಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ರು.

ಶಾಲೆಗಳಲ್ಲಿ ಕೊರೊನಾ ಪ್ರಕರಣ ಕಂಡು ಬರುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬರುತ್ತದೆಯೋ ಅಲ್ಲಿ ಸಂಪೂರ್ಣ ಶಾಲೆಗೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ತುಂಬಾ ಜಾಸ್ತಿ ಮಂದಿಗೆ ಕೊರೊನಾ ಪಾಸಿಟಿವ್​ ಬಂದರೆ ಅಂತಹ ಶಾಲೆಗಳನ್ನು ಏಳು ದಿನ ಬಂದ್​ ಮಾಡುತ್ತೇವೆ. ಮೈಸೂರು ನಗರ, ಶಿವಮೊಗ್ಗ ನಗರ ಸೇರಿದಂತೆ ಹಲವೆಡೆ ಈಗಾಗಲೆ ಇಂತಹ ಕ್ರಮ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಸಂಪೂರ್ಣ ಜಿಲ್ಲೆಯ ಶಾಲೆಗಳನ್ನು ಬಂದ್​ ಮಾಡುವ ಬಗ್ಗೆ ಯೋಚಿಸಿಯೂ ಇಲ್ಲ. ಆಯಾ ಶಾಲೆಗಳ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೊರೊನಾ ಮೂರನೆ ಅಲೆ ಹಿನ್ನೆಲೆಯಲ್ಲಿ ಶಾಲೆಗಳು ಬಂದ್​ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ತಜ್ಞರು ಹೇಳುವ ಪ್ರಕಾರ ಮಕ್ಕಳು ಶಾಲೆಯಲ್ಲಿ ಇದ್ದರೆ ಹೆಚ್ಚು ಸುರಕ್ಷಿತರಾಗಿ ಇರುತ್ತಾರೆ. ಏಕಂದರೆ ಶಾಲೆಗಳಲ್ಲಿ ಲಕ್ಷಣಗಳು ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಲಾಗುತ್ತದೆ. ಮನೆಯಲ್ಲಿ ಇದ್ದರೆ ಹಾಗಲ್ಲ. ಇವೆಲ್ಲವನ್ನೂ ಸರ್ಕಾರ ಮುಂದೆ ಹೇಳುತ್ತೇವೆ ಎಂದು ಹೇಳಿದರು.

ಇದನ್ನು ಓದಿ : supporters fighting : ಬಿ.ಕೆ.ಹರಿಪ್ರಸಾದ್‌ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್‌ ಗರಂ

ಇದನ್ನೂ ಓದಿ : Karnataka school collage close : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

education minister b.c nagesh statment about school reopen in Bengaluru

RELATED ARTICLES

Most Popular