ಬೆಂಗಳೂರು :Green pass for vaccinated people :ರಾಜ್ಯದಲ್ಲಿ ಕೋವಿಡ್ 19 ಮೂರನೇ ಅಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ರಾಜ್ಯ ಸರ್ಕಾರವು ವಿವಿಧ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸಿದೆ. ಕೋವಿಡ್ ಸೋಂಕನ್ನು ತಡೆಗಟ್ಟಲು ಕೋವಿಡ್ ಲಸಿಕೆಯನ್ನು ಸ್ವೀಕರಿಸುವುದು ನಿಜಕ್ಕೂ ಮುಖ್ಯವಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟಿರುವ ರಾಜ್ಯ ಸರ್ಕಾರ ಲಸಿಕೆ ಪಡೆದವರಿಗೆ ಗ್ರೀನ್ ಪಾಸ್ ನೀಡುವ ಬಗ್ಗೆ ಚಿಂತನೆ ನಡೆಸಿದ ಎನ್ನಲಾಗಿದೆ.
ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಭೆಯನ್ನು ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಸಂಭವನೀಯ ಕೊರೊನಾ ಮೂರನೇ ಅಲೆಯನ್ನು ಸೂಕ್ತವಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದೇವೆ. ಕೋವಿಡ್ ನಿಯಂತ್ರಣ ಮಾಡುವ ಸಂಬಂಧ ಅಧಿಕಾರಿಗಳಿಗೆ ಹಲವು ರೀತಿಯಲ್ಲಿ ಹೊಣೆಗಾರಿಕೆಗಳನ್ನು ನೀಡಲಾಗಿದೆ. ಕೊರೊನಾ ಎರಡನೆ ಅಲೆಯಲ್ಲಿ ಉಂಟಾದಂತಹ ಯಾವುದೇ ಸಮಸ್ಯೆಗಳು ಈ ಅಲೆಯಲ್ಲಿ ಉಂಟಾಗದಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಕೊರೊನಾ 2 ಡೋಸ್ ಲಸಿಕೆಗಳ ಮಹತ್ವದ ಬಗ್ಗೆಯೂ ಮಾತನಾಡಿದ ಅವರು ಓಮಿಕ್ರಾನ್ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಓಮಿಕ್ರಾನ್ ಗಂಭೀರ ಲಕ್ಷಣಗಳನ್ನು ಹೊಂದಿರದೇ ಇದ್ದರೂ ಸಹ ಹರಡುತ್ತಿರುವ ವೇಗ ಅತ್ಯಂತ ಭೀಕರವಾಗಿದೆ. ಓಮಿಕ್ರಾನ್ ರೂಪಾಂತರಿಯ ವಿರುದ್ಧ ಹೋರಾಡಲು ಕೋವಿಡ್ ಲಸಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ . ಹೀಗಾಗಿ ಎಲ್ಲರೂ 2 ಡೋಸ್ ಲಸಿಕೆಗಳನ್ನು ಪಡೆಯಲೇಬೇಕು. ಅಲ್ಲದೇ ಕೊರೊನಾ 2ಡೋಸ್ ಲಸಿಕೆಗಳನ್ನು ಸ್ವೀಕರಿಸುವವರಿಗೆ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಹೇಳಿದರು.
ಕೊರೊನಾ 2 ಡೋಸ್ ಲಸಿಕೆಗಳನ್ನು ಸ್ವೀಕರಿಸಿದವರಿಗೆ ಇಂತಹದ್ದೊಂದು ಪಾಸ್ ನೀಡಲು ನಿರ್ಣಯ ಮಾಡಲಾಗುತ್ತಿದೆ. ಇದರಿಂದ ಬಸ್ಗಳಲ್ಲಿ, ಶಾಪಿಂಗ್ ಮಾಲ್, ರೆಸ್ಟಾರೆಂಟ್, ಹೋಟೆಲ್ ಹೀಗೆ ಸಾರ್ವಜನಿಕ ಪ್ರದೇಶಗಳಲ್ಲಿ ಕೊರೊನಾ ಲಸಿಕೆ ಪಡೆಯದವರನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದರು.
government planning to give green pass for fully vaccinated people
ಇದನ್ನು ಓದಿ : namma metro : ಕೊರೋನಾ ನಿಯಮಕ್ಕೆ ಡೋಂಟ್ ಕೇರ್ : ಒಂದು ವರ್ಷದಲ್ಲಿ 1 ಕೋಟಿ ದಂಡ ಸಂಗ್ರಹಿಸಿದ ನಮ್ಮಮೆಟ್ರೋ
ಇದನ್ನೂ ಓದಿ : Curfew Relaxation : ಕಾಂಗ್ರೆಸ್ ಗಾಗಿ ಕರ್ಪ್ಯೂ ಸಡಿಲಿಕೆ : ರೆಸಾರ್ಟ್, ರೆಸ್ಟೋರೆಂಟ್ ಗೆ ಅವಕಾಶ ಕೊಟ್ಟ ಸರ್ಕಾರ