ಇನ್ನೇನು ಕೊರೊನಾ ಕಾಯಿಲೆ ಮುಗೀತು ಎಂದುಕೊಳ್ತಿರುವಾಗಲೇ ಒಮಿಕ್ರಾನ್ ರೂಪಾಂತರಿಯು (Omicron Variant) ವಿಶ್ವಾದ್ಯಂತ ಹೊಸ ಕಳವಳವನ್ನೇ ಸೃಷ್ಟಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ರೂಪಾಂತರಿಯಿದೆ ಎಂದುಕೊಳ್ತಿರುವಾಗಲೇ ಇದೀಗ ರಾಜ್ಯದಲ್ಲೇ ಒಮಿಕ್ರಾನ್ನ 2 ರೂಪಾಂತರಿಗಳು ಪತ್ತೆಯಾಗಿರೋದು ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ರೂಪಾಂತರಿಯು ಡೆಲ್ಟಾ ರೂಪಾಂತರಿಗೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದು ಹೆಚ್ಚು ಸೋಂಕನ್ನು ಹರಡುತ್ತದೆ. ಇದೇ ಕಾರಣಕ್ಕಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆ ಕಾಣುತ್ತಿದೆ.
ಒಮಿಕ್ರಾನ್ ಲಕ್ಷಣಗಳು :
- ಗಂಟಲು ತುರಿಸುವಿಕೆ( ಹಿಂದಿನ ಕೋವಿಡ್ 19 ಸೋಂಕುಗಳಂತೆ ಗಂಟಲು ನೋವಲ್ಲ)
- ಮೈ ಕೈ ನೋವು, ತಲೆನೋವು, ಆಯಾಸ
- ದೇಹದ ಉಷ್ಣತೆ ಹೆಚ್ಚುವಿಕೆ(ಎಲ್ಲರಲ್ಲೂ ಕಂಡು ಬರುವುದಿಲ್ಲ)
- ಪದೇ ಪದೇ ಕೆಮ್ಮುವುದು( ಎಲ್ಲರಲ್ಲೂ ಕಂಡು ಬರೋದಿಲ್ಲ
- ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಕಳೆದುಕೊಳ್ಳುವುದು( ಎಲ್ಲರಲ್ಲೂ ಕಂಡು ಬರುವುದಿಲ್ಲ)
- ಜ್ವರ, ಸುಸ್ತು, ವಾಂತಿ ಹಾಗೂ ಪಲ್ಸ್ ರೇಟ್ನಲ್ಲಿ ಏರಿಕೆ
ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ?
ಒಮಿಕ್ರಾನ್ ರೂಪಾಂತರಿಯ ವಿರುದ್ಧ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿದೆಯಾ ಅಥವಾ ಇಲ್ಲವಾ ಎಂಬುದಕ್ಕೆ ಇಷ್ಟು ಬೇಗನೇ ಉತ್ತರ ನೀಡಲಾಗದು. ಈ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ ಬಳಿಕವೇ ಈ ಪ್ರಶ್ನೆಗೆ ಉತ್ತರ ನೀಡಬಹುದಾಗಿದೆ.
ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗೋದಿಲ್ಲವೇ ?
ಆರ್ಟಿ ಪಿಸಿಆರ್ ಪರೀಕ್ಷೆಯು ಕೋವಿಡ್ 19 ಸೋಂಕನ್ನು ಪತ್ತೆ ಮಾಡಲೆಂದೇ ವಿನ್ಯಾಸಗೊಳಿಸಾಗಿದೆ. ಆದರೆ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ಸಾರ್ಸ್ ಕೋವಿ 2ನ ಅಂತಿಮ ಎರಡು ತಳಿಗಳನ್ನು ಪತ್ತೆ ಮಾಡುತ್ತದೆ. ಆದರೆ ಒಮಿಕ್ರಾನ್ ಎಸ್ ಜೀನ್ ಪತ್ತೆ ಸ್ವಲ್ಪ ಕಷ್ಟದ ಕೆಲಸವಾಗಿದೆ.
ಮುಂಜಾಗ್ರತಾ ಕ್ರಮಗಳೇನು..?
ಒಮಿಕ್ರಾನ್ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಹಾಗೆಂದ ಮಾತ್ರಕ್ಕೆ ಇದು ಕೈಕಟ್ಟಿ ಕೂರುವ ಸಮಯವೂ ಅಲ್ಲ. ಕೊರೊನಾ ಲಸಿಕೆಯ ವೇಗವನ್ನು ಹೆಚ್ಚಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಇದನ್ನು ಓದಿ : ಬೆಂಗಳೂರಿನ ಇಬ್ಬರು ವೈದ್ಯರಿಗೆ ಓಮಿಕ್ರಾನ್ ದೃಢ : ಇಬ್ಬರೂ ಕೂಡ ವಿದೇಶಿ ಪ್ರಯಾಣ ಮಾಡಿಲ್ಲ !
How is Omicron Variant detected ? What is S-gene dropout? Symptoms, all you need to know