daily covid cases :ದೇಶದಲ್ಲಿ ಇಂದು ಕೂಡ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ನಾಲ್ಕು ತಿಂಗಳಿನಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನು ದೇಶ ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 37,379 ಕೊರೊನಾ ಪ್ರಕರಣಗಳು ವರದಿಯಾಗಿದೆ. ಒಂದು ದಿನದಲ್ಲಿ 124 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,49,60,261 ಕ್ಕೆ ಏರಿಕೆ ಕಂಡಿದೆ. ಪ್ರಸ್ತುತ ದೇಶದಲ್ಲಿ 1,71,830 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿಯವರೆಗೆ ಒಟ್ಟು 4,82,017 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ.
ದೇಶದಲ್ಲಿ ರಿಕವರಿ ರೇಟ್ 98.13 ಪ್ರತಿಶತದಲ್ಲಿದೆ. ದೇಶದಲ್ಲಿ ಈವರೆಗೆ 3,43,06,414 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾದ ಮರಣ ಪ್ರಮಾಣವು 1.38 ಪ್ರತಿಶತದಷ್ಟಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ನಿನ್ನೆಯಿಂದ ದೇಶದಲ್ಲಿ 15 ರಿಂದ 18 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು ನಿನ್ನೆ ರಾತ್ರಿ 8 ಗಂಟೆ ವೇಳೆಗೆ ದೇಶದಲ್ಲಿ 41 ಲಕ್ಷ ಮಂದಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸೋಮವಾರ ರಾತ್ರಿ 10:15ರ ವೇಳೆಗೆ ದೇಶದಲ್ಲಿ 98 ಲಕ್ಷ ಲಸಿಕೆಯ ಡೋಸ್ಗಳನ್ನು ಒಂದು ದಿನದಲ್ಲಿ ನೀಡಲಾಗಿದ್ದು ಈ ಮೂಲಕ ಒಟ್ಟು 146.61 ಕೋಟಿ ಡೋಸ್ ಲಸಿಕೆಯನ್ನು ದೇಶದಲ್ಲಿ ನೀಡಿದಂತಾಗಿದೆ.
ಇದರ ಜೊತೆಯಲ್ಲಿ ದೇಶದಲ್ಲಿ ಒಟ್ಟು 1892 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಇದರಲ್ಲಿ 766 ಮಂದಿ ಈಗಾಗಲೇ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 568 ಪ್ರಕರಣಗಳು ವರದಿಯಾಗಿವೆ. ಇನ್ನುಳಿದಂತೆ ದೆಹಲಿಯಲ್ಲಿ 382, ಕೇರಳದಲ್ಲಿ 185, ಗುಜರಾತ್ನಲ್ಲಿ 152, ತಮಿಳುನಾಡಿನಲ್ಲಿ 121 ಹಾಗೂ ರಾಜಸ್ಥಾನದಲ್ಲಿ ಒಟ್ಟು 174 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
India reports highest daily covid cases in 4 months
ಇದನ್ನು ಓದಿ : corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್
ಇದನ್ನೂ ಓದಿ : semi lockdown : ರಾಜ್ಯದಲ್ಲಿ ಜಾರಿಯಾಗೋದು ಲಾಕ್ ಡೌನ್ ಅಥವಾ ಸೆಮಿಲಾಕ್ ಡೌನ್ : ಸಂಜೆ ಸಿಗಲಿದೆ ಉತ್ತರ