Covid-19 cases : ಭಾರತದಲ್ಲಿ ಮೂರು ಲಕ್ಷ ಗಡಿ ದಾಟಿದ್ದ ಕೋವಿಡ್ ದೈನಂದಿನ ಪ್ರಕರಣಗಳಲ್ಲಿ ಕೊಂಚ ನಿಯಂತ್ರಣ ಸಾಧಿಸಿರುವಂತೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,55,874 ಹೊಸ ಕೋವಿಡ್ ಪ್ರಕರಣಗಳು ಧೃಡಪಟ್ಟಿವೆ. ಈ ಮೂಲಕ ದೇಶದಲ್ಲಿ ಪಾಸಿಟಿವಿಟಿ ದರವು 15.52 ಪ್ರತಿಶತಕ್ಕೆ ಕುಸಿದಿದೆ. ಜನವರಿ 20ರಿಂದ ದೇಶದಲ್ಲಿ ದೈನಂದಿನ ಪ್ರಕರಣಗಳು ಮೂರು ಲಕ್ಷದ ಗಡಿ ದಾಟಿದ್ದವು. ಜನವರಿ 20ರಂದು ದೇಶದಲ್ಲಿ 3,17,532 ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ನಿನ್ನೆ ದೇಶದಲ್ಲಿ 3,06,064 ಹೊಸ ಕೋವಿಡ್ ಪ್ರಕರಣಗಳು ಧೃಡಪಟ್ಟಿದ್ದವು.
ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 614 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 2,67,753 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ರಿಕವರಿ ಪ್ರಮಾಣವು 93.15 ಪ್ರತಿಶತಕ್ಕೆ ತಲುಪಿದೆ. ದೇಶದಲ್ಲಿ ಈವರೆಗೆ 3,70,71,898 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿ ಪ್ರಸ್ತುತ 22,36,842 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ. ದೇಶಾದ್ಯಂತ ಈವರೆಗೆ 162.92 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ದೇಶದಲ್ಲಿ ಒಟ್ಟು 71.88 ಕೋಟಿ ಕೊರೊನಾ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ 16,49,108 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
India reports less than 3 lakh daily Covid-19 cases after 5 days, positivity rate at 15.52%
ಇದನ್ನು ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್ ಆಂಡ್ ಫಿಟ್ ಆದ ರೋಹಿತ್ ಶರ್ಮಾ
ಇದನ್ನೂ ಓದಿ :Vamika’s pics : ವೈರಲ್ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ