ಬುಧವಾರ, ಜೂನ್ 18, 2025
HomeCorona Updatesisolation medical kit : ಹೋಂ ಐಸೋಲೆಟೇಡ್ ರೋಗಿಗಳಿಗೆ ಸಿದ್ಧವಾಯ್ತು 6 ಮೆಡಿಸಿನ್ ಒಳಗೊಂಡ ಕಿಟ್

isolation medical kit : ಹೋಂ ಐಸೋಲೆಟೇಡ್ ರೋಗಿಗಳಿಗೆ ಸಿದ್ಧವಾಯ್ತು 6 ಮೆಡಿಸಿನ್ ಒಳಗೊಂಡ ಕಿಟ್

- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜನರು ಮತ್ತೆ ಮತ್ತೆ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆದರೆ ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಗೆ ಹೋಲಿಸಿದರೇ ಮೂರನೇ ಅಲೆಯ ಆರಂಭದಲ್ಲಿ ಕೊರೋನಾ ಸೋಂಕಿನಿಂದ ಉಸಿರಾಟದ ಸಮಸ್ಯೆ, ಆಸ್ಪತ್ರೆಗೆ ದಾಖಲು ಹಾಗೂ ವೆಂಟಿಲೇಟರ್ ಅಗತ್ಯದ ಪ್ರಕರಣಗಳ ಸಂಖ್ಯೆ‌ ಕಡಿಮೆಯಾಗಿದೆ. ಇದೀಗ ಆರೋಗ್ಯ ಇಲಾಖೆ ಐಸೋಲೇಟೆಡ್‌ ಆಗಿರುವ ರೋಗಿಗಳಿಗಾಗಿ ಮೆಡಿಸಿನ್‌ ಕಿಟ್‌ (isolation medical kit) ಬಿಡುಗಡೆ ಮಾಡಿದೆ.

ಇನ್ನು ಈ ಭಾರಿ ಜನರು ಇನ್ನಷ್ಟು ಪ್ರಜ್ಞಾವಂತರಾಗಿದ್ದು, ಕೊರೋನಾ ಟೆಸ್ಟ್ ಬಳಿಕ ಪಾಸಿಟಿವ್ ಬಂದಲ್ಲಿ ಮನೆಯಲ್ಲೇ ಹೋಂ ಕ್ವಾಂರಟೈನ್, ಹೋಂ ಐಸೋಲೇಟೆಡ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ಯಾನಿಕ್ ಆಗಿ ಆಸ್ಪತ್ರೆಗಳತ್ತ ಓಡುತ್ತಿಲ್ಲ. ಈ ಮಧ್ಯೆ ಬಿಬಿಎಂಪಿ ಹಾಗೂ ಸರ್ಕಾರ ಕೂಡ ಹೋಂ ಐಸೋಲೇಶನ್ ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ತೀವ್ರ ಉಸಿರಾಟದ ಸಮಸ್ಯೆ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸಿದೆ.

ಇನ್ನು ಹೋಂ ಐಸೋಲೇಟೆಡ್ ರೋಗಿಗಳಿಗಾಗಿ ಆರೋಗ್ಯ ಇಲಾಖೆ ಪ್ರತ್ಯೇಕ ಕಿಟ್ ಸಿದ್ಧಪಡಿಸಿದೆ. 6 ಮೆಡಿಸನ್‌ಗಳನ್ನು ಹೊಂದಿರೋ ಐಸೋಲೇಷನ್ ಕಿಟ್‌ಗಳು ರೋಗಿಗಳಿಗೆ ವಿತರಣೆ ಯಾಗಲಿದ್ದು, ಚೇತರಿಕೆಗೆ ಸಹಾಯ ಮಾಡಲಿದೆ. ತಜ್ಞರ ವೈದ್ಯರ ಸಲಹೆ ಮೇರೆಗೆ 6 ಮೆಡಿಸನ್ ಬಳಸಲು ನಿರ್ಧಾರಿಸಲಾಗಿದೆ. 5 ಮಾತ್ರೆಗಳು ಹಾಗೂ ಒಂದು ಕಾಫ್ ಸಿರಪ್‌ ನ್ನು ಈ ಮೆಡಿಕಲ್ ಕಿಟ್ ಒಳಗೊಂಡಿರುತ್ತದೆ. ಕೊರೋನಾಕ್ಕೆ ತುತ್ತಾದ ರೋಗಿಗಳಲ್ಲಿ ಕೆಮ್ಮು ಹೆಚ್ಚಾಗಿ ಕಂಡು ಬರ್ತಿರೋ ಹಿನ್ನೆಲೆ ಕಾಫ್ ಸಿರಪ್‌ಗೆ ನೀಡಲು ನಿರ್ಧರಿಸಲಾಗಿದೆ.ಹಾಗಾದ್ರೆ ತಜ್ಞರು ಸೂಚಿಸಿರೋ ಆ 6 ಮೆಡಿಸನ್‌ಗಳು ಯಾವುದು ಅನ್ನೋದನ್ನು ಗಮನಿಸೋದಾದರೇ,

  1. ಪ್ಯಾರಸಿಟಮಾಲ್ 500mg ಮಾತ್ರೆಗಳು
  2. ವಿಟಮಿನ್ ಸಿ 500mg ಮಾತ್ರೆಗಳು
  3. ಝಿಂಕ್ ಸಲ್ಫೈಟ್ 50mg ಮಾತ್ರೆಗಳು
  4. ಲೆವೋಟ್ರೈಸೈನ್ 10mg ಮಾತ್ರೆಗಳು
  5. ಪಾಂಟಪ್ರೋಝೋಲ್ 40mg ಮಾತ್ರೆಗಳು
  6. ಆ್ಯಂಟಿ ಟುಸಿವ್ ಕಾಫ್ ಸಿರಪ್

6 ಮೆಡಿಸನ್‌‌ಗಳ ಜೊತೆ ಮೂರು ಲೇಯರ್ ನ 10 ಫೇಸ್ ಮಾಸ್ಕ್ ಹಾಗೂ 50 ಗ್ರಾಂ ನ ಸ್ಯಾನಿಟೈಸರ್ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಹೋಂ ಐಸೋಲೇಶನ್ ಕಿಟ್ ಗಳ ವಿತರಣೆ ಆರಂಭವಾಗಿದೆ. ಮೆಡಿಕಲ್ ಗಳಿಂದ ಕಿಟ್ ಪಡೆದು ಕೊರೋನಾ ಟೆಸ್ಟ್ ಗೆ ಒಳಗಾಗುತ್ತಿದ್ದ ಜನರಿಂದಾಗಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಇಷ್ಟು ದಿನ ಹೋಂ ಐಸೋಲೇಟೆಡ್ ಗಳ ಸಂಖ್ಯೆ ಪತ್ತೆ ಹಚ್ಚುವುದು ತಲೆನೋವಾಗಿತ್ತು. ಹೀಗಾಗಿ ಆ ಟೆಸ್ಟ್ ಕಿಟ್ ಮಾರಾಟದ ಮೇಲೂ ಗಮನ ಇಟ್ಟಿರುವ ಆರೋಗ್ಯ ಇಲಾಖೆ ಟೆಸ್ಟ್ ಕಿಟ್ ಪಡೆಯುವವರ ಮಾಹಿತಿ ಸಂಗ್ರಹಿಸಲು ಮೆಡಿಕಲ್ ಗಳಿಗೆ ಸೂಚಿಸಿದೆ.

ಇದನ್ನೂ ಓದಿ : ಓಮೈಕ್ರಾನ್ ಸಾಮಾನ್ಯ ಶೀತವಲ್ಲ, ಕಾಳಜಿ ವಹಿಸಿ: ಆರೋಗ್ಯ ಸಚಿವ ಸುಧಾಕರ್ ಮನವಿ

ಇದನ್ನೂ ಓದಿ : 11 ಬಾರಿ ಕೊರೊನಾ ಲಸಿಕೆ ಸ್ವೀಕರಿಸಿದ್ದ ವೃದ್ಧನಿಗೆ ಬಿಗ್​ ರಿಲೀಫ್​​

( isolation medical kit : Department of Health Care for Home Isolated Patients, Prepared 6 Kit featuring Medicine )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular