ಬೆಂಗಳೂರು : ದಿನ ಕಳೆದಂತೆ ಕೊರೊನಾ ವೈರಸ್ ಸೋಂಕಿನ ಪ್ರಕರಣ ಏರಿಕೆ ಕಾಣುತ್ತಲೇ ಇದೆ. ಕರ್ನಾಟಕದಲ್ಲಿಂದು ಮತ್ತೆ ಕೊರೊನಾ ಸ್ಪೋಟ ಸಂಭವಿಸಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ 34047 ಹೊಸ ಕೋವಿಡ್ (Karnataka 34047 Covid-19 Cases) ಪ್ರಕರಣ ದೃಢಪಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 21 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ರೆ, ಮೈಸೂರು, ಹಾಸನ, ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಸಾವಿರದ ಗಡಿದಾಟಿದೆ. ಅಲ್ಲದೇ ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕು ಆರ್ಭಟಿಸಿದೆ.
ಕರ್ನಾಟಕದಲ್ಲಿಹೊಸದಾಗಿ 34047 ಕೋವಿಡ್ ಪ್ರಕರಣ ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 3220087ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ 13 ಮಂದಿಯನ್ನು ಬಲಿ ಪಡೆದಿದೆ. ಈ ಮೂಲಕ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 38431ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 197982 ಸಕ್ರೀಯ ಕೊರೊನಾ ಸೋಂಕಿತ ಪ್ರಕರಣಗಳಿವೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದೂ ಕೂಡ ಹೊಸದಾಗಿ 21,071 ಕೋವಿಡ್ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ 1416807ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಸಕ್ರೀಯ ಪ್ರಕರಣ ಸಂಖ್ಯೆ 146200ಕ್ಕೆ ತಲುಪಿದಿದೆ. ಅಲ್ಲದೇ ಇಂದು ಕೊರೊನಾ 5 ಮಂದಿಯನ್ನು ಬಲಿ ಪಡೆದಿದೆ. ದಿನೇ ದಿನೇ ಬೆಂಗಳೂರಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದು ಆತಂಕ ಮೂಡಿಸುತ್ತಿದೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ಅದ್ರಲ್ಲೂ ತುಮಕೂರು, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಇಂದು ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ರೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಕೋಲಾರ, ಮಂಡ್ಯ, ಉಡುಪಿ ಜಿಲ್ಲೆಗಳಲ್ಲಿ 500ಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಮಕ್ಕಳನ್ನು ಅಷ್ಟಾಗಿ ಬಾಧಿಸಿರಲಿಲ್ಲ. ಆದ್ರೆ ಈ ಬಾರಿ ಶಾಲೆ, ಕಾಲೇಜುಗಳು ಎಂದಿನಂತೆಯೇ ನಡೆಯುತ್ತಿದ್ದು, ಮಕ್ಕಳು ಸೋಂಕಿಗೆ ತುತ್ತಾಗುತ್ತಿದ್ದಾರೆ.
Positivity rate nears 20% in the State as cases rise in Rest of Karnataka:
— Dr Sudhakar K (@mla_sudhakar) January 16, 2022
◾New cases in State: 34,047
◾New cases in B’lore: 21,017
◾Positivity rate in State: 19.29%
◾Discharges: 5,902
◾Active cases State: 1,97,982 (B’lore- 146k)
◾Deaths:13 (B’lore- 05)
◾Tests: 1,76,470
ರಾಜ್ಯದಲ್ಲಿ ಫೆಬ್ರವರಿ ಆರಂಭದಲ್ಲಿಯೇ ಕೊರೊನಾ ವೈರಸ್ ಸೋಂಕು ಮಹಾಸ್ಪೋಟ ಸಂಭವಿಸುವ ಸಾಧ್ಯತೆಯಿದೆ ಎಂದು ಖುದ್ದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಕೋವಿಡ್ ತಾಂತ್ರಿಕ ಸಮಿತಿ ಹಾಗೂ ತಜ್ಞರು ನೀಡಿದ ಮಾಹಿತಿಯ ಪ್ರಕಾರ ಕೋವಿಡ್ ಸೋಂಕು ಫೆಬ್ರವರಿ ಮೊದಲ ವಾರದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಅಂತ್ಯದ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದಿದ್ದಾರೆ. ಆದರೆ ಸದ್ಯದ ಸ್ಥಿತಿಯನ್ನು ನೋಡಿದ್ರೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಶಾಲೆಗಳೇ ಕಾರಣ : ಖಾಸಗಿ ಒತ್ತಡ, ಶಾಲೆ ಬಂದ್ ಮಾಡಲು ಸಚಿವರೇ ಅಡ್ಡಿ
ಇದನ್ನೂ ಓದಿ : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ
( Karnataka today found 34047 new Covid-19 Cases, Bangalore 21,071 cases)