ಸೋಮವಾರ, ಏಪ್ರಿಲ್ 28, 2025
HomeCorona Updatessemi lockdown : ರಾಜ್ಯದಲ್ಲಿ ಜಾರಿಯಾಗೋದು ಲಾಕ್ ಡೌನ್ ಅಥವಾ ಸೆಮಿಲಾಕ್ ಡೌನ್ : ಸಂಜೆ...

semi lockdown : ರಾಜ್ಯದಲ್ಲಿ ಜಾರಿಯಾಗೋದು ಲಾಕ್ ಡೌನ್ ಅಥವಾ ಸೆಮಿಲಾಕ್ ಡೌನ್ : ಸಂಜೆ ಸಿಗಲಿದೆ ಉತ್ತರ

- Advertisement -

ಬೆಂಗಳೂರು : ನೋಡ ನೋಡುತ್ತಲೇ ರಾಜ್ಯದಲ್ಲಿ ಮತ್ತೊಮ್ಮೆ ಕೊರೋನಾ ಆತಂಕ ಎದುರಾಗಿದ್ದು, ಪ್ರತಿನಿತ್ಯವೂ ಜಿಲ್ಲೆಗಳಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಲಾರಂಭಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಮತ್ತೊಮ್ಮೆ ಲಾಕ್ ಡೌನ್ ಅಸ್ತ್ರ ಬಳಕೆಯಾಗಲಿದೆ ಎಂಬ ಮಾತು ಸರ್ಕಾರದ ಮಟ್ಟದಲ್ಲಿ ಕೇಳಿಬರುತ್ತಿದೆ. ರಾಜ್ಯದಲ್ಲಿ ಏರಿಕೆ ಯಾಗುತ್ತಿರುವ ಕೊವೀಡ್, ಓಮೈಕಾನ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಮಂಗಳವಾರ) ಸಂಜೆ 6:30ಕ್ಕೆ ಸಿಎಂ ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೊರೋನಾ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ( semi lockdown in Karnataka ) ನಿಯಮಗಳು ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ.

ಇನ್ನು ರಾಜ್ಯದಲ್ಲಿ ಪ್ರತಿನಿತ್ಯ ಏರಿಕೆಯಾಗುತ್ತಿರುವ ಕೊವೀಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿಎಂ ತಜ್ಞರಿಂದ ಶಿಫಾರಸ್ಸುಗಳನ್ನು ಕೇಳಿದ್ದು, ತಜ್ಞರ ಸಮಿತಿ ಸದ್ಯದ ಪರಿಸ್ಥಿತಿ, ‌ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಈಗಾಗಲೇ ವರದಿ ಸಿದ್ಧಪಡಿಸಿ ಸಿಎಂಗೆ ನೀಡಿದೆ. ಇಂದು ನಡೆಯಲಿರುವ ಸಭೆಯಲ್ಲಿ ಲಾಕ್ ಡೌನ್ ಭವಿಷ್ಯ ನಿರ್ಧಾರ ಆಗಲಿದ್ದು ಮತ್ತೊಮ್ಮೆ ತಜ್ಞರ ಅಭಿಪ್ರಾಯ ಪಡೆದ ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಅಂತಿಮ ನಿರ್ಣಯವನ್ನು ಸರ್ಕಾರ ಪ್ರಕಟಿಸಲಿದೆ.

ಇನ್ನು ಸರ್ಕಾರ ಲಾಕ್ಡೌನ್ ಅಥವಾ ಕಠಿಣ ರೂಲ್ಸ್ ಜಾರಿಯ ಮಾರ್ಗ ಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಒಂದೇ ಸಲಕ್ಕೆ ಲಾಕ್ ಡೌನ್ ಘೋಷಣೆ ಜನರನ್ನು ಸಂಕಷ್ಟಕ್ಕೆ ದೂಡುವುದರಿಂದ ಹಂತ ಹಂತವಾಗಿ ಕಠಿಣ ನಿಯಮಗಳ ಮೂಲಕ ಲಾಕ್ ಡೌನ್ ಜಾರಿಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ತಜ್ಞರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಮುಖ ಶಿಫಾರಸ್ಸುಗಳು ಏನೆಂಬುದನ್ನು ಗಮನಿಸೋದಾದರೇ,

1. ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ 50% ಕಾರ್ಯಾಚರಣೆ ಅವಕಾಶ

2. ಬಸ್, ಮೆಟ್ರೋದಲ್ಲಿ 50% ಸೀಟು ಮಾತ್ರ ತುಂಬಲು ಅವಕಾಶ ನೀಡಬೇಕು.

3.ಕಾರ್ಖಾನೆಗಳು, ಐಟಿ-ಬಿಟಿ ಕಂಪನಿಗಳಿಗೆ 50% ಕಾರ್ಯಾಚರಣೆ ಅಥವಾ ವರ್ಕ್ ಫ್ರಮ್ ಹೋಂಗೆ ಸೂಚನೆ ನೀಡಬೇಕು.

4.ಸರ್ಕಾರಿ ಕಚೇರಿಗಳು, ಖಾಸಗೀ ಕಚೇರಿಗಳಲ್ಲಿ 50% ಕಾರ್ಯಾಚರಣೆ ಉಳಿದ 50% ವರ್ಕ್ ಫ್ರಮ್ ಹೋಂ ಜಾರಿಯಾಗಬೇಕು.

ಇದನ್ನು ಹೊರತುಪಡಿಸಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆಯಿದ್ದು ಇದರಲ್ಲು ಸೆಮಿ‌ಲಾಕ್ ಡೌನ್ ಮಾದರಿಯ ಕ್ರಮ ಜಾರಿಯಾಗಲಿದೆ ಎನ್ನಲಾಗುತ್ತಿದೆ.

ಸಿಲಿಕಾನ್ ಸಿಟಿ ಸೆಮಿ ಲಾಕ್ಡೌನ್ ಆದರೆ ಯಾವುದರ ಮೇಲೆ ನಿರ್ಬಂಧ ಹೇಳಲಾಗುತ್ತದೆ ಅನ್ನೋದನ್ನು ಗಮನಿಸೋದಾದರೇ,
1. ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ ಬಹುತೇಕ ಖಚಿತ.

2.ಮಾಲ್, ಸಿನಿಮಾ ಹಾಲ್ ಗೆ 50% ಮಾತ್ರ ಅನುಮತಿ ನೀಡಬಹುದು

3.ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ನಿಷೇಧ ಹೇರಲಾಗುತ್ತದೆ.

4. ಬಾರ್, ಪಬ್, ಹೊಟೇಲ್ 50% ಕಾರ್ಯಾಚರಣೆಗೆ ಅವಕಾಶ ಸಾಧ್ಯತೆ

5.ಸಾರ್ವಜನಿಕ ಸಾರಿಗೆ ಬಳಸಲು ಎರಡು ಡೋಸ್ ಕಡ್ಡಾಯ ( ಬಸ್, ಮೆಟ್ರೋ ಬಳಕೆಗೆ)

6. ಪಾರ್ಕ್ ಗಳಲ್ಲಿ ವಾಕಿಂಗ್ ಗೆ ಸಮಯ ನಿಗಧಿ ಮಾಡುವ ಸಾಧ್ಯತೆ

7.ಮಾರುಕಟ್ಟೆ, ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರಕ್ಕೆ ಸಮಯ ನಿಗಧಿ ಸಾಧ್ಯತೆ

8. ಜಿಮ್, ಕ್ರೀಡಾ ಸಂಕೀರ್ಣಗಳಿಗೆ 50% ಕಾರ್ಯಾಚರಣೆಗೆ ಅವಕಾಶ ಸಾಧ್ಯತೆ ಇದೆ. ಒಟ್ಟಿನಲ್ಲಿ ‌ರಾಜ್ಯದಲ್ಲಿ ಯಾವೆಲ್ಲ ನಿಯಮ ಜಾರಿಯಾಗುತ್ತೆ ಅನ್ನೋದಕ್ಕೆ ಸಂಜೆ ವೇಳೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ : lockdown Decision : ರಾಜ್ಯದಲ್ಲಿ ಮತ್ತೆ 10 ಜನರಿಗೆ ಓಮೈಕ್ರಾನ್‌ : ಗುರುವಾರ ನಿರ್ಧಾರವಾಗಲಿದೆ ಲಾಕ್ ಡೌನ್ ಭವಿಷ್ಯ

ಇದನ್ನೂ ಓದಿ : 87 doctors test positive : ಮೆಡಿಕಲ್​ ಕಾಲೇಜಿನ 87 ವೈದ್ಯರಿಗೆ ಕೊರೊನಾ ಪಾಸಿಟಿವ್​​

( lockdown or semi lockdown in Karnataka implementation, evening get answer)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular