New Covid variant ‘Deltacron’ :ಡೆಲ್ಟಾ ರೂಪಾಂತರಿಯ ಭಯದಲ್ಲಿ ಇರುವಾಗಲೇ ಆಫ್ರಿಕಾದಲ್ಲಿ ಹುಟ್ಟಿದ ಓಮಿಕ್ರಾನ್ ರೂಪಾಂತರಿಯು ದೇಶವನ್ನು ವಕ್ಕರಿಸಿದೆ. ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಓಮಿಕ್ರಾನ್ ರೂಪಾಂತರಿಯು ಸೋಂಕಿನ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಲೇ ಇದೆ. ಓಮಿಕ್ರಾನ್ ಭಯ ಹಾಗೂ ಮೂರನೇ ಅಲೆಯ ಆತಂಕ ಮುಂದಿರುವಾಗಲೇ ಇದೀಗ ಸೈಪ್ರಸ್ನ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕರೊಬ್ಬರು ಕೋವಿಡ್ 19 ಹೊಸ ತಳಿಯೊಂದನ್ನು ಪತ್ತೆ ಮಾಡಿದ್ದಾರೆ.
ಸೈಪ್ರಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಜೈವಿಕ ತಂತ್ರಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಮಾಧ್ಯಮ ವರದಿಗಳಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಸ್ತುತ ವಿಶ್ವದಲ್ಲಿ ಓಮಿಕ್ರಾನ್ ಹಾಗೂ ಡೆಲ್ಟಾ ಎಂಬ ಕೊರೊನಾ ವೈರಸ್ ರೂಪಾಂತರಿಗಳು ಇವೆ. ಇವುಗಳ ಸಂಯೋಜನೆಯ ಇನ್ನೊಂದು ತಳಿಯನ್ನು ನಾವು ಕಂಡು ಹಿಡಿದಿದ್ದೇವೆ.2 ಡೆಲ್ಟಾ ಜಿನೋಮ್ಗಳೊಂದಿಗೆ ಓಮಿಕ್ರಾನ್ ತರಹದ ಅನುವಂಶಿಕ ಅಂಶಗಳನ್ನು ಹೊಂದಿರುವ ಈ ತಳಿಗೆ ನಾವು ಡೆಲ್ಟಾಕ್ರಾನ್ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದರು.
25 ಡೆಲ್ಟಾಕ್ರಾನ್ ಪ್ರಕರಣ ವರದಿ..?
ಮಾಧ್ಯಮಗಳ ವರದಿಯ ಪ್ರಕಾರ ಲಿಯೊಂಡಿಯೋಸ್ ಕೊಸ್ಟ್ರಿಕಿಸ್ ಹಾಗೂ ಅವರ ತಂಡವು ಸೈಪ್ರಸ್ನಲ್ಲಿ ಇದುವರೆಗೆ 25 ಡೆಲ್ಟಾಕ್ರಾನ್ ಪ್ರಕರಣಗಳನ್ನು ಪತ್ತೆ ಮಾಡಿದೆ ಎನ್ನಲಾಗಿದೆ.
ಸಂಶೋಧಕರು ತಮ್ಮ ಸಂಶೋಧನಾ ವರದಿಗಳನ್ನು ಜನವರಿ 7 ರಂದು ವೈರಸ್ಗಳನ್ನು ಪತ್ತೆ ಮಾಡುವ ಅಂತಾರಾಷ್ಟ್ರೀಯ ಡೇಟಾಬೇಸ್ GISAID ಗೆ ಕಳುಹಿಸಿಕೊಟ್ಟಿದ್ದಾರೆ. ಡೆಲ್ಟಾಕ್ರಾನ್ ರೂಪಾಂತರಿಯನ್ನು ಯಾವುದೇ ಅಂತಾರಾಷ್ಟ್ರೀಯ ಪ್ರಾಧಿಕಾರವು ಗುರುತಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
‘ಪ್ರತಿಯೊಂದು ರೂಪಾಂತರವೂ ಆತಂಕಕಾರಿಯಲ್ಲ’
ಕೋವಿಡ್ -19 ವಿರುದ್ಧದ ಜಾಗತಿಕ ಹೋರಾಟದ ಮೇಲೆ ‘ಡೆಲ್ಟಾಕ್ರಾನ್’ ಯಾವುದೇ ಪರಿಣಾಮ ಬೀರಬಹುದು ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಡೆಲ್ಟಾಕ್ರಾನ್ ಅನ್ವೇಷಕ ಲಿಯೊಂಡಿಯೋಸ್ ಕೊಸ್ಟ್ರಿಕಿಸ್ ಪ್ರಕಾರ, ಹೊಸ ತಳಿಯು ಸಾಂಕ್ರಾಮಿಕ ಓಮಿಕ್ರಾನ್ ರೂಪಾಂತರದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ.
New Covid variant ‘Deltacron’ detected in Cyprus? Here’s what we know so far
ಇದನ್ನು ಓದಿ : Private Hospital Corona Treatment : ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು
ಇದನ್ನೂ ಓದಿ : Mekedatu Padayatra : ಡಿಕೆಶಿಗೆ ನಿಯಮ ಉಲ್ಲಂಘನೆ ನೊಟೀಸ್ : ಬಿಜೆಪಿ ನೊಟೀಸ್ ಗೆ ಹೆದರಲ್ಲ ಅಂದ್ರು ಕನಕಪುರ ಬಂಡೆ