NeoCov :2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ್ ಸೋಂಕಿನ ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಜಗತ್ತಿನಲ್ಲಿ ಏನೇನಾಗಿದೆ ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಕೋವಿಡ್ ಸೋಂಕು ವಿಶ್ವದಲ್ಲಿ ರುದ್ರ ನರ್ತನವನ್ನು ಮಾಡಿ ಎರಡು ವರ್ಷಗಳ ಬಳಿಕ ವುಹಾನ್ನ ಸಂಶೋಧಕರು ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಹೌದು..! ವುಹಾನ್ನ ವಿಜ್ಞಾನಿಗಳು ಕೊರೊನಾ ವೈರಸ್ನ ಹೊಸ ರೂಪಾಂತರಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಿಯೋಕೋವ್ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ರಷ್ಯಾದ ಸುದ್ದಿಸಂಸ್ಥೆಯಾದ ಸ್ಪುಟ್ನಿಕ್ ನೀಡಿರುವ ವರದಿಯ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದು ಕೊರೊನಾ ವೈರಸ್ಗಿಂತಲೂ ಅತ್ಯಂತ ವೇಗವಾಗಿ ಹರಡಬಲ್ಲದು ಹಾಗೂ ಅತೀ ಹೆಚ್ಚಿನ ಸಾವಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಂದಹಾಗೆ ಸ್ಪುಟ್ನಿಕ್ ನೀಡಿರುವ ಮಾಹಿತಿಯ ಪ್ರಕಾರ ನಿಯೋಕೋವ್ ಹೊಸ ವೈರಸ್ ಏನಲ್ಲ. ಇದು 2012 ಹಾಗೂ 2015ರಲ್ಲಿಯೂ ಕಾಣಿಸಿಕೊಂಡಿತ್ತು. ಮಧ್ಯ ಪ್ರಾಚ್ಯ ದೇಶಗಳಲ್ಲಿ ನಿಯೋಕೋವ್ ಕಾಣಿಸಿಕೊಂಡಿತ್ತು. ಇದು ಅತೀ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ಅಂದರೆ ನಿಯೋಕೋವ್ ಸೋಂಕಿಗೆ ಒಳಗಾದ ಮೂವರಲ್ಲಿ ಒಬ್ಬರು ಸಾಯುವುದು ಪಕ್ಕಾ ಎನ್ನಲಾಗಿದೆ. ಜನರ ದೇಹದಲ್ಲಿರುವ ಆ್ಯಂಟಿಬಾಡಿ ಅಥವಾ ಪ್ರೋಟಿನ್ಗಳಿಂದ ನಿಯೋಕೋವ್ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಇನ್ನು ವುಹಾನ್ನಲ್ಲಿ ನಡೆದ ಸಂಶೋಧನೆಯನ್ನು ಅನುಸರಿಸಿ ರಷ್ಯಾದ ರಾಜ್ಯ ವೈರಾಲಜಿ ಹಾಗೂ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದ ತಜ್ಞರು ನಿಯೋಕೋವ್ನ ಸಂಭಾವ್ಯ ಅಪಾಯಗಳನ್ನು ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ.
ನಿಯೋಕೋವ್ ಕೊರೊನಾ ವೈರಸ್ ಕುರಿತಂತೆ ಚೀನಾ ಸಂಶೋಧಕರಿಂದ ಡೇಟಾವನ್ನು ಪಡೆಯಲಾಗಿದೆ. ಪ್ರಸ್ತುತ ಸಮಯದಲ್ಲಿ ಇದು ಮಾನವರಲ್ಲಿ ಸಕ್ರಿಯವಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ ಎಂದು ರಷ್ಯಾದ ಸಂಶೋಧಕರು ಹೇಳಿಕೆ ನೀಡಿದ್ದಾರೆ.
NeoCov: Wuhan Scientists Warn of New Coronavirus Strain With High Death, Infection Rate
ಇದನ್ನು ಓದಿ : Coronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್ ಪ್ರಕರಣಗಳು ವರದಿ
ಇದನ್ನೂ ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ