(Omicron BF.7 Health Tips)ಹೆಚ್ಚುತ್ತಿರುವ ಹೊಸ ರೂಪಾಂತರ ತಳಿಯ ವಿರದ್ದ ನಮ್ಮ ದೇಹ ಹೋರಾಡುವುದಕ್ಕೆ ರೋಗನಿರೋಧಕ ಅತಿ ಮುಖ್ಯ . ಇದನ್ನು ಹೆಚ್ಚಿಸಿಕೊಳ್ಳಲು ಆಹಾರ ಪಾಲನೆಯ ಕ್ರಮವು ಅತಿ ಮುಖ್ಯವಾಗುತ್ತದೆ.ಇತ್ತೀಚಿನ ದಿನಗಳಲ್ಲಿ ನಾವು ಪಾಲನೆ ಮಾಡುವಂತಹ ಜೀವನ ಕ್ರಮ ಆರೋಗ್ಯ ಕೆಡುವುದಕ್ಕೆ ಕಾರಣವಾಗುತ್ತಿದೆ. ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಕೆಲವು ಆಹಾರವನ್ನು ರೂಡಿಸಿಕಕೊಳ್ಳುವುದು ಉತ್ತಮ. ಕೋವಿಡ್ ಹೊಸ ತಳಿಯಿಂದ ದೂರ ಇರಲು ಯಾವ ಆಹಾರ ಕ್ರಮವನ್ನು ಪಾಲನೆ ಮಾಡಬೇಕು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳಿ.
(Omicron BF.7 Health Tips)ಪ್ರತಿದಿನ ಹಣ್ಣುಗಳನ್ನು ಸೇವನೆ ಮಾಡಿ
ಅತಿ ಹೆಚ್ಚು ಹಣ್ಣನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತಡೆಯುವಂತಹ ಗುಣಗಳಿವೆ ಹಾಗಾಗಿ ಇದನ್ನು ಸೇವನೆ ಮಾಡಿದರೆ ಉತ್ತಮ. ಪೇರಳೆ, ಸೇಬು, ಬಾಳೆಹಣ್ಣು, ಸ್ಟ್ರಾಬೆರಿ, ಕಲ್ಲಂಗಡಿ, ದ್ರಾಕ್ಷಿಹಣ್ಣು, ಅನಾನಸ್, ಪಪ್ಪಾಯಿ, ಕಿತ್ತಳೆ ಹಣ್ಣುಗಳನ್ನು ಪ್ರತಿದಿನ ತಿನ್ನುವುದರಿಂದ ರೋಗನೀರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ . ಈಗ ಬಂದಿರುವ ಹೊಸ ರೂಪಾಂತರ ತಳಿಯ ವಿರುದ್ದ ಹೊರಾಡುವುದಕ್ಕೆ ಸಹಾಯ ಮಾಡುತ್ತದೆ.
ತರಕಾರಿ, ಸೊಪ್ಪು ಮತ್ತು ದಾನ್ಯಗಳನ್ನು ಸೇವನೆ ಮಾಡಿ
ತರಕಾರಿ, ಸೊಪ್ಪು ಮತ್ತು ದಾನ್ಯಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಫೈಬರ್ ಅಂಶವನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಬಿಟ್ರೋಟ್, ಬೀನ್ಸ್ ,ಮೆಂತ್ಯೆ ಸೊಪ್ಪು , ಪಾಲಕ್ ಅನ್ನು ಅತಿ ಹೆಚ್ಚು ಸೇವನೆ ಮಾಡುವುದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಾಗಿ, ಗೋಧಿ, ಮೆಂತ್ಯೆ, ಹೆಸರುಕಾಳನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಮತ್ತು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ.
ಮೀತವಾಗಿ ಮಾಂಸವನ್ನು ಸೇವಿಸಿ
ಕೆಲವರು ಪ್ರತಿದಿನ ಮಾಂಸದ ಆಹಾರವನ್ನು ಸೇವನೆ ಮಾಡುತ್ತಾರೆ. ಆದಷ್ಟು ಚಿಕೆನ್ ತಿನ್ನುವುದನ್ನು ಕಡಿಮೆ ಮಾಡಿ .ತಿಂಗಳಲ್ಲಿ ಮೂರು ಬಾರಿ ತಿನ್ನುವ ಹವ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯಕ್ಕೆ ಉತ್ತಮ . ಆದಷ್ಟು ತರಕಾರಿ ಮತ್ತು ಹಣ್ಣನ್ನು ಸೇವನೆ ಮಾಡಿ ಇದು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ಅತಿಯಾದ ಬೆಯಿಸಿದ ಆಹಾರ ಸೇವನೆ ಕಡಿಮೆ ಮಾಡಿ
ಅಂಗಡಿಗಳಲ್ಲಿ ಸಿಗುವಂತಹ ಆಹಾರವನ್ನು ಹೆಚ್ಚು ಬೆಯಿಸಲಾಗುತ್ತದೆ ಹಾಗಾಗಿ ಇಂತಹ ಆಹಾರ ಸೇವನೆಯನ್ನು ಕಡಿಮೆ ಮಾಡಿ. ಪಪ್ಸ್, ಸ್ಯಾಂಡ್ ವಿಚ್ ಅನ್ನು ಪದೇ ಪದೇ ಬಿಸಿ ಮಾಡುವುದರಿಂದ ಇದನ್ನು ನೀವು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಕೆಡುತ್ತದೆ.
ಇದನ್ನೂ ಓದಿ:Omicron BF.7: ನೀವು ಖರೀದಿಸುವ ಮಾಸ್ಕ್ ಎಷ್ಟು ಸೇಪ್ ?
ಇದನ್ನೂ ಓದಿ:Broccoli Health Tips :ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ ಬ್ರೊಕೋಲಿಯಿಂದ ದೂರವಿರಿ
ಅತಿಹೆಚ್ಚು ನೀರು ಮತ್ತು ಜ್ಯೂಸ್ ಕುಡಿಯಿರಿ
ಅತಿಹೆಚ್ಚು ನೀರು ಕುಡಿಯುವುದರಿಂದ ನಿಮ್ಮನ್ನು ಯಾವಾಗಲು ಹೈಡ್ರೆಟ್ ಆಗಿರುವಂತೆ ಮಾಡುತ್ತದೆ. ಮತ್ತು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹವನ್ನು ಹೈಡ್ರೆಟ್ ಆಗಿರಲು ಸಹಾಯ ಮಾಡುವುದಲ್ಲದೇ ,ಇದರಲ್ಲಿರುವ ಅಂಶ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡಿ ಕಾಯಿಲೆಯ ವಿರುದ್ದ ಹೋರಾಡುವುದಕ್ಕೆ ಸಹಾಯ ಮಾಡುತ್ತದೆ.
Omicron BF.7 Health Tips Follow this diet to keep covid away from you