ಬೆಂಗಳೂರು : ಆಫ್ರಿಕಾ ದೇಶಗಳಲ್ಲಿ ಆತಂಕ ಮೂಡಿಸಿದ್ದ ಓಮಿಕ್ರಾನ್ ಇದೀಗ ಕರ್ನಾಟಕಕ್ಕೆ ಕಾಲಿಟ್ಟಿದೆ. ಅದ್ರಲ್ಲೂ ರಾಜ್ಯವೇ ಬೆಚ್ಚಿ ಬೀಳಿಸುವ ಸ್ಪೋಟಕ ಮಾಹಿತಿಯೊಂದು ಪತ್ತೆಯಾಗಿದೆ. ರಾಜ್ಯದಲ್ಲಿ ಓಮಿಕ್ರಾನ್ ಪತ್ತೆಯಾದವರು (DOCTORS OMICRON) ಬೆಂಗಳೂರಿನ ವೈದ್ಯರಾಗಿದ್ದಾರೆ. ಇಬ್ಬರೂ ಯಾವುದೇ ವಿದೇಶಿ ಪ್ರಯಾಣವನ್ನು ಮಾಡಿರಲಿಲ್ಲ ಅನ್ನೋದು ಬಯಲಾಗಿದೆ. ಹೀಗಾಗಿ ಇಬ್ಬರೂ ವೈದ್ಯರಿಗೂ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಪ್ರಸಿದ್ದ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ವರದಿ ಮಾಡಿದೆ.
ಬೊಮ್ಮನಹಳ್ಳಿ ಹಾಗೂ ಬಸವನಗುಡಿಯ ೨೬ ಹಾಗೂ ೪೯ ವರ್ಷದ ಇಬ್ಬರು ವೈದ್ಯರಿಗೆ ಇದೀಗ ಓಮಿಕ್ರಾನ್ ದೃಢಪಟ್ಟಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನವೆಂಬರ್ ೧೯, ೨೦ ಮತ್ತು ೨೧ರಂದು ಕಾನ್ಪರೆನ್ಸ್ ನಡೆದಿತ್ತು. ಈ ಕಾನ್ಪರೆನ್ಸ್‌ನಲ್ಲಿ ಭಾಗಿಯಾದ ನಂತರದಲ್ಲಿ ಇಬ್ಬರಿಗೂ ಕೂಡ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ಗಂಟಲು ದ್ರವದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು. ಇದೀಗ ಇಬ್ಬರು ವೈದ್ಯರ ಪರೀಕ್ಷಾ ವರದಿಯಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿದೆ.
ಕಾನ್ಪರೆನ್ಸ್‌ನಲ್ಲಿ ಭಾಗಿಯಾದ ನಂತರದಲ್ಲಿ ಇಬ್ಬರೂ ವೈದ್ಯರಲ್ಲಿ ಕೊರೊನಾ ಸೋಂಕಿನ ಲಕ್ಷಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರು ಕೂಡ ಮನೆಯಲ್ಲಿ ಐಸೋಲೇಷನ್‌ಗೆ ಒಳಪಟ್ಟಿದ್ದರು. ಆದ್ರೀಗ ಓಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನೂ ಕೂಡ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಬ್ಬರು ವೈದ್ಯರ ಪೈಕಿ ಬೊಮ್ಮನಹಳ್ಳಿಯ ವೈದ್ಯರು ಕಾನ್ಪರೆನ್ಸ್ ನಂತರದಲ್ಲಿ ತನ್ನ ಕ್ಲಿನಿಕ್‌ಗೆ ಹೋಗಿದ್ದು, ನೂರಾರು ಜನರಿಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಇಬ್ಬರು ವೈದ್ಯರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವನ್ನು ಹೊಂದಿದವರ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ. ಇನ್ನೊಂದೆಡೆಯಲ್ಲಿ ಕಾನ್ಪರೆನ್ಸ್‌ನಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನೋ ಕುರಿತ ಮಾಹಿತಿಯನ್ನು ಕಲೆ ಹಾಕುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ವಿದೇಶಿ ಪ್ರಯಾಣ ಮಾಡದ ವೈದ್ಯರಲ್ಲಿ ಇದೀಗ ಆಫ್ರಿಕಾದ ವೈರಸ್ ಪತ್ತೆಯಾಗಿರುವುದು ಆತಂಕವನ್ನು ಉಂಟು ಮಾಡಿದೆ. ಓಮಿಕ್ರಾನ್ ಸದ್ದಿಲ್ಲದೇ ರಾಜ್ಯದಾದ್ಯಂತ ವ್ಯಾಪಿಸಿದ್ಯಾ ಅನ್ನೋ ಭಯ ಶುರುವಾಗಿದೆ. ಬಿಬಿಎಂಪಿ ಇದೀಗ ಓಮಿಕ್ರಾನ್ ಭೀತಿ ಇರುವ ರಾಜ್ಯಗಳಿಂದ ವಾಪಾಸಾಗಿರುವವರ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ.
ಇದನ್ನೂ ಓದಿ : ಓಮಿಕ್ರಾನ್ ಭೀತಿ : ಡಿ.15ರ ನಂತರ ಕರ್ನಾಟಕ ಲಾಕ್‌ಡೌನ್ !
ಇದನ್ನೂ ಓದಿ : ಕರ್ನಾಟಕಕ್ಕೆ ಕಾಲಿಟ್ಟ ಓಮಿಕ್ರಾನ್ ವೈರಸ್ : ಇಬ್ಬರಲ್ಲಿ ಸೋಂಕು ದೃಢ
(Omicron confirmed to two Bangalore doctors: both are not international travel history)