ಬೆಂಗಳೂರು: (Omicron sub-variant XXB.1.5) ದೇಶ, ವಿದೇಶ ಹಾಗೆ ರಾಜ್ಯದಲ್ಲಿ ಕೊರೊನಾ ಬಿಎಫ್ 7 ಭೀತಿ ಹೆಚ್ಚಳವಾಗುತ್ತಿರುವ ಆತಂಕದ ನಡುವೆಯೂ ರಾಜ್ಯಕ್ಕೆ ಮತ್ತೊಂದು ಒಮಿಕ್ರಾನ್ ರೂಪಾಂತರಿ ತಳಿ ಕಾಲಿಟ್ಟಿದ್ದು, ರಾಜ್ಯದಲ್ಲಿ ಮೊದಲ ಒಮಿಕ್ರಾನ್ ರೂಪಾಂತರಿ XXB.1.5 ಕೇಸ್ ಪತ್ತೆಯಾಗಿದೆ.
ಈ ಹಿಂದೆ ಗುಜರಾತ್ನಲ್ಲಿ ಮೊದಲ ಕೇಸ್ (Omicron sub-variant XXB.1.5) ಪತ್ತೆಯಾಗಿತ್ತು. ದೇಶ, ವಿದೇಶಗಳಲ್ಲೊ ಕೊರೊನಾ ರೂಪಾಂತರಿ ತಳಿ ತಾಂಡವವಾಡುತ್ತಿರುವ ಬೆನ್ನಲ್ಲೇ ಇನ್ನೊಂದು ಉಪರೂಪಾಂತರಿ ತಳಿ ಕಾಲಿಟ್ಟಿದೆ. ಗುಜರಾತ್ನಲ್ಲಿ ಮೂರು ಕೇಸ್, ರಾಜಸ್ಥಾನದಲ್ಲಿ ಒಂದು ಕೇಸ್, ಹಾಗೇ ಕರ್ನಾಟಕದಲ್ಲಿ ಒಂದು ಕೇಸ್ ಇರುವುದು ದೃಢಪಟ್ಟಿದೆ.
ಅಮೇರಿಕಾದಲ್ಲಿ ವರದಿಯಾಗುತ್ತಿರುವ ಶೇಕಡಾ ನಲವತ್ತಕ್ಕಿಂಲೂ ಹೆಚ್ಚು ಪ್ರಕರಣಗಳಿಗೆ ಒಮಿಕ್ರಾನ್ XXB.1.5 ರೂಪಾಂತರಿ ತಳಿಯೇ ಕಾರಣ ಎಂದು ರೋಗ ನಿಯಂತ್ರ ಮತ್ತು ತಡೆ ಕಾಯ್ದೆ ಅಮೇರಿಕಾ ದೃಢಪಡಿಸಿದೆ. ಈ XXB.1.5 ರೂಪಾಂತರಿ ತಳಿ BQ ಮತ್ತು XBB ಗಿಂಗಲೂ ಅಪಾಯಕಾರಿಯಾಗಿದ್ದು, ಬಿಎಫ್.7 ಗಿಂತಲೂ ವೇಗವಾಗಿ ಹರಡುತ್ತದೆ. ಈ ಉಪರೂಪಾಂತರಿ ತಳಿಯೂ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದ್ದು, ಅತೀ ವೇಗವಾಗಿ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಪ್ರತಿರಕ್ಷಣಾ ವ್ಯವಸ್ಥೆಯನ್ನು ಮೀರಿ ಈ ವೈರಸ್ ವೇಗವಾಗಿ ಹರಡುತ್ತದೆ ಎನ್ನಲಾಗಿದೆ.
ಅಮೇರಿಕಾದಲ್ಲಿ ಅತಿಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಹೆಚ್ಚಿನ ಸೋಂಕಿತರಲ್ಲಿ XXB.1.5 ರೂಪಾಂತರಿ ಸೋಂಕು ದೃಢಪಟ್ಟಿದೆ. ಇದೀಗ ಅಮೇರಿಕಾದಲ್ಲಿ ತಾಂಡವವಾಡುತ್ತಿದ್ದ, ಹೊಸ ರೂಪಾಂತರಿ ತಳಿ ಭಾರತಕ್ಕೂ ಕಾಲಿಟ್ಟಿದ್ದು, ಗುಜರಾತ್ ನಲ್ಲಿ ಮೊದಲ ಕೇಸ್ ದೃಢಪಟ್ಟಿತ್ತು. ಇದೀಗ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕಕ್ಕೂ ಕಾಲಿಟ್ಟಿದೆ. ಇದರಿಂದಾಗಿ ಕೊರೊನಾ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : Udupi Co-vaccine mela: ಅವಳಿ ಜಿಲ್ಲೆಗಳಲ್ಲಿ ಕೋವಿಶೀಲ್ಡ್ ಲಸಿಕೆ ಕೊರತೆ: ಜ.4 ರಂದು ಉಡುಪಿಯಲ್ಲಿ ಕೋವ್ಯಾಕ್ಸಿನ್ ಮೇಳ
Another sub-mutant breed has emerged after the corona mutagen breed is making a splash in the country and abroad. Three cases have been confirmed in Gujarat, one in Rajasthan and one in Karnataka.