ಸೋಮವಾರ, ಏಪ್ರಿಲ್ 28, 2025
HomeCorona UpdatesOmicron : ಓಮಿಕ್ರಾನ್​ ಸೋಂಕಿಗೆ ಇತ್ತೀಚಿಗೆ ಒಳಗಾದ ರಾಷ್ಟ್ರಗಳು ಯಾವುವು ಗೊತ್ತಾ..? ಸಾವಿನ ಪ್ರಮಾಣದ ಬಗ್ಗೆ...

Omicron : ಓಮಿಕ್ರಾನ್​ ಸೋಂಕಿಗೆ ಇತ್ತೀಚಿಗೆ ಒಳಗಾದ ರಾಷ್ಟ್ರಗಳು ಯಾವುವು ಗೊತ್ತಾ..? ಸಾವಿನ ಪ್ರಮಾಣದ ಬಗ್ಗೆ ವಿಶ್ವಸಂಸ್ಥೆ ಹೇಳಿದ್ದೇನು..? ಇಲ್ಲಿದೆ ಮಾಹಿತಿ

- Advertisement -

ಕೊರೊನಾದ ಅಪಾಯ ದೂರವಾಯ್ತು ಎಂದುಕೊಳ್ಳುತ್ತಿರುವಾಗಲೇ ವಿಶ್ವದಲ್ಲಿ ಓಮಿಕ್ರಾನ್ ( Omicron )​ ಭಯ ಮನೆ ಮಾಡಿದೆ. ಓಮಿಕ್ರಾನ್​ ಸೋಂಕಿನಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮೂರು ಮಿಲಿಯನ್​ ದಾಟಿದೆ. ವಿಶ್ವದ ಮೂವತ್ತಕ್ಕೂ ಅಧಿಕ ದೇಶಗಳಲ್ಲಿ ಇದೀಗ ಓಮಿಕ್ರಾನ್‌ ದೃಢಪಟ್ಟಿದೆ. ಅದ್ರಲ್ಲೂ ಭಾರತ, ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲೂ ಇತ್ತೀಚಿಗೆ ಕೊರೊನಾ ಪ್ರಕರಣಗಳು ದೃಢೀಕರಿಸಲಾಗಿದೆ. ಆಫ್ರಿಕಾದ ರಾಷ್ಟ್ರಗಳಲ್ಲಿ ಕಂಡು ಬಂದ ಓಮಿಕ್ರಾನ್‌ ಹೊಸ ಪ್ರಬೇಧ ಇದೀಗ ವಿಶ್ವದ ಹಲವು ರಾಷ್ಟ್ರಗಳಿಗೆ ತಲೆನೋವು ತರಿಸಿದೆ. ಇನ್ನು ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಜೊತೆಯಲ್ಲೇ ಓಮಿಕ್ರಾನ್‌ ಸೋಂಕು ಕೂಡ ತೀವ್ರವಾಗಿ ಹರಡುತ್ತಿದೆ.

ಹೊಸ ರೂಪಾಂತರಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು ಓಮ್ರಿಕಾನ್​ ಗಂಭೀರ ಪ್ರಮಾಣದ ಲಕ್ಷಣಗಳನ್ನು ಹೊಂದಿದೆ ಹಾಗೂ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ. ಅಲ್ಲದೇ ಲಸಿಕೆಗಳು ಮತ್ತು ಸೂಕ್ತ ಚಿಕಿತ್ಸೆ ಮಾತ್ರ ಕೋವಿಡ್​ ಸೋಂಕಿನಿಂದ ನಿಮ್ಮನ್ನು ಕಾಪಾಡಬಲ್ಲದು ಎಂದು ಹೇಳಿದೆ.
ಅಂದಹಾಗೆ ಇಲ್ಲಿಯವರೆಗೆ ಯಾವುದೇ ಓಮಿಕ್ರಾನ್​ ಸಾವುಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ. ಆದರೆ ಹೊಸ ರೂಪಾಂತರಿಯು ಹರಡುತ್ತಿರುವ ವೇಗವನ್ನು ನೋಡ್ತಿದ್ರೆ ಕೆಲವೇ ದಿನಗಳಲ್ಲಿ ಇದು ಯುರೋಪ್​ ರಾಷ್ಟ್ರಗಳಲ್ಲಿ ಅರ್ಧದಷ್ಟು ಕೋವಿಡ್ ಪ್ರಕರಣಗಳಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ದಕ್ಷಿಣ ಆಫ್ರಿಕಾದ ವೈದ್ಯರೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ಓಮಿಕ್ರಾನ್​ನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚಾಗಿದ್ದಾರೆ. ಇದು ಚಿಕ್ಕಮಕ್ಕಳಿಗೆ ಓಮಿಕ್ರಾನ್​ನಿಂದ ಅಪಾಯ ಹೆಚ್ಚು ಕಾದಿದೆಯೇ ಎಂಬ ಮಾತನ್ನು ಚರ್ಚಿಸುವಂತೆ ಮಾಡುತ್ತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ ಎಂದು ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಫಾರ್​ ಕಮ್ಯುನಿಕೇಬಲ್​ ಡಿಸೀಸ್​​ನ ವಾಸಾಲಿಯಾ ಜಸ್ಸಟ್​ ಹೇಳಿದ್ದಾರೆ.

ಅಮೆರಿಕದಲ್ಲಿ ಪತ್ತೆಯಾದ ಎರಡು ಓಮಿಕ್ರಾನ್​ ಕೇಸುಗಳು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲದೇ ಇರೋದು ಕಳವಳಕ್ಕೆ ಕಾರಣವಾಗಿದೆ.
ಇತ್ತ ಆಸ್ಟ್ರೇಲಿಯಾದಲ್ಲಿ ಸಿಡ್ನಿಯ ಮೂವರು ವಿದ್ಯಾರ್ಥಿಗಳು ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಎಲ್ಲಾ ವಿಮಾನಗಳನ್ನು ರದ್ದು ಮಾಡಿದ ಬಳಿಕವೂ ಈ ದೇಶದಲ್ಲಿ ಓಮಿಕ್ರಾನ್​ ವಕ್ಕರಿಸಿದೆ. ಇತ್ತ ಭಾರತದಲ್ಲೂ ಕೂಡ ಕರ್ನಾಟಕದಲ್ಲಿ ಇಬ್ಬರಿಗೆ ಹಾಗೂ ಗುಜರಾತ್​ನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಒಮಿಕ್ರಾನ್​ ಸೋಂಕಿಗೆ ಒಳಗಾಗಿರುವ ವೈದ್ಯ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲ.

ಇದನ್ನು ಓದಿ : OMICRON :ಭಾರತದಲ್ಲಿ ಪತ್ತೆಯಾಯ್ತು ಮೂರನೇ ಒಮಿಕ್ರಾನ್​ ಪ್ರಕರಣ: ಗುಜರಾತ್​​ನ ನಿವಾಸಿಗೆ ಸೋಂಕು ಧೃಡ

ಇದನ್ನು ಓದಿ : Omicron Meeting : ಓಮಿಕ್ರಾನ್‌ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Home Quarantine : ಹೋಂ ಕ್ವಾರಂಟೈನ್​ಗೆ ಚಕ್ಕರ್​, ಹೋಟೆಲ್​ಗೆ ಹಾಜರ್​​..! ದ.ಆಫ್ರಿಕಾದಿಂದ ಮರಳಿದ ಮಹಿಳೆಯಿಂದ ಮಹಾ ಯಡವಟ್ಟು

Omicron variant of COVID-19 present in 38 countries, no deaths reported yet: WHO

RELATED ARTICLES

Most Popular