ಬೆಂಗಳೂರು : ಕೊರೋನಾ ಮೂರು ಅಲೆಗಳ ಪ್ರಭಾವದಿಂದ ಆದ ಸಾವು ನೋವಿನ ಸಂಖ್ಯೆ ಅಪಾರ. ಆದರೆ ಆ ಹೊತ್ತಿನಲ್ಲಿ ಆಕ್ಸಿಜನ್ ಸೇರಿದಂತೆ ಅನಾರೋಗ್ಯ ಪೀಡಿತರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿತ್ತು. ಈಗ ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗಿದೆ. ಆದರೆ ಈ ಪರಿಹಾರವನ್ನು ಹಲವು ಕುಟುಂಬಗಳು ತಿರಸ್ಕರಿಸಿವೆ. ಹೌದು, ಕರ್ನಾಟಕದ 893 ಕುಟುಂಬಗಳು ತಮಗೆ ಸರ್ಕಾರದಿಂದ ಮಂಜೂರಾದ ಕೋವಿಡ್ ಪರಿಹಾರ (Covid compensation) ತಿರಸ್ಕರಿಸಿದೆ.

ಕೋವಿಡ್ ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಪರಿಹಾರ ದನ ನೀಡಲಾಗುತ್ತಿದೆ. ಈ ಹಣವನ್ನು ಸ್ವೀಕರಿಸಲು ಕುಟುಂಬಗಳು ಹಿಂದೇಟು ಹಾಕುತ್ತಿವೆ. ಹಲವೆಡೆ ಸತ್ತವರ ಹಣ ಸ್ವೀಕರಿಸಿಲು ಕುಟುಂಬಸ್ಥರು ನಿರಾಕರಿಸಿದ್ದಾರೆ. APL ಮತ್ತು BPL ಕಾರ್ಡುದಾರರಿಗೆ ಕೇಂದ್ರ ಸರ್ಕಾರದಿಂದ ಕೊರೋನಾ ಪರಿಹಾರ ನೀಡುತ್ತಿದೆ. ಮೃತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಎಲ್ಲ ಸೇರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 1.5 ಲಕ್ಷ ರೂ. ಪರಿಹಾರ ಘೋಷಣೆಯಾದಂತಾಗಿದೆ.

ಆದರೆ ಇದನ್ನು ಸ್ವೀಕರಿಸಲು ಕೆಲವೆಡೆ ಕುಟುಂಬಸ್ಥರು ಮುಂದೇ ಬಂದಿಲ್ಲ. ರಾಜಧಾನಿ ಬೆಂಗಳೂರಿನ 521 ಕುಟುಂಬದವರಿಂದ ಕೋವಿಡ್ ಪರಿಹಾರ ನಿರಾಕರಣೆಯಾಗಿದ್ದು ಇನ್ನೂ ಒಟ್ಟು 1931 ಮೃತರ ಕುಟುಂಬಸ್ಥರು ಪತ್ತೆಯಾಗಿಲ್ಲ. ಯಾವ ಜಿಲ್ಲೆಯಲ್ಲಿ ಎಷ್ಟು ಜನರು ಸರ್ಕಾರದ ಪರಿಹಾರ ನಿರಾಕರಿಸಿದ್ದಾರೆ ಅನ್ನೋದನ್ನು ನೋಡೋದಾದರೇ,
- BBMP ವ್ಯಾಪ್ತಿಯಲ್ಲಿ – 481
- ಬೆಂಗಳೂರು ನಗರ – 40
- ಕೋಲಾರ – 55
- ಮೈಸೂರು – 29
- ಹಾಸನ – 26
- ದಕ್ಷಿಣ ಕನ್ನಡ – 24
- ಕಲಬುರಗಿ – 23
- ಕೊಪ್ಪಳ – 17
- ಮಂಡ್ಯ – 17
- ಶಿವಮೊಗ್ಗ – 16
- ಉತ್ತರಕನ್ನಡ- 14
- ಬಳ್ಳಾರಿ- 13
- ಚಿಕ್ಕಮಗಳೂರು- 12
- ಚಾಮರಾಜನಗರ – 11
- ಬಾಗಲಕೋಟೆ – 9
- ಉಡುಪಿ – 9
- ಬೆಳಗಾವಿ – 9
- ಚಿಕ್ಕಬಳ್ಳಾಪುರ ಮತ್ತು ವಿಜಯಪುರ ತಲಾ – 8
- ಬೀದರ ಮತ್ತು ತುಮಕೂರು ತಲಾ – 7
- ಹಾವೇರಿ – 6
- ಬೆಂಗಳೂರು ಗ್ರಾಮಾಂತರ & ಗದಗ ಹಾಗೂ ರಾಯಚೂರು – 5
- ಚಿತ್ರದುರ್ಗ -3
- ದಾವಣಗೆರೆ – 2
- ಯಾದಗಿರಿ – 1
ಇಷ್ಟು ಕುಟುಂಬಗಳು ಪರಿಹಾರ ನಿರಾಕರಿಸಿದ್ದು, ಸರ್ಕಾರದ ಮಟ್ಟದಲ್ಲಿ ಈ ಕುಟುಂಬಗಳನ್ನು ಮನವೊಲಿಸಿ ಪರಿಹಾರ ಸ್ವೀಕರಿಸುವಂತೆ ಮಾಡುವ ಅಗತ್ಯವಿದೆ.
ಇದನ್ನೂ ಓದಿ : ದೇಶದಲ್ಲೇ ಡೆಲ್ಟಾಕ್ರಾನ್ ಹಾಟ್ ಸ್ಪಾಟ್ ಆದ ಕರ್ನಾಟಕ : 221 ಪ್ರಕರಣ ದಾಖಲು
ಇದನ್ನೂ ಓದಿ : 12-18 ವಯಸ್ಸಿನವರಿಗೆ Novavax ತುರ್ತು ಬಳಕೆಗೆ ಅನುಮತಿ
Thousands of family members refuse to Covid compensation