ಜಿನಿವಾ : ಡೆಡ್ಲಿ ಕೊರೊನಾ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಆದೇಶ ಜಾರಿ ಮಾಡಿವೆ. ಸಪ್ಟೆಂಬರ್ ವರೆಗೂ ಕೊರೊನಾ ತನ್ನ ಕರಾಳ ಛಾಯೆ ಬೀರಲಿದೆ. ಅದ್ರಲ್ಲೂ ಭಾರತದಲ್ಲಿ ಲಾಕ್ ಡೌನ್ ಆದೇಶವನ್ನು ಸಪ್ಟೆಂಬರ್ ವರೆಗೂ ಮುಂದುವರಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಮೇ 3ರ ವರೆಗೆ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದರೆ ಭಾರತದಲ್ಲಿ ಇನ್ನೂ 10 ವಾರಗಳ ಕಾಲ ಲಾಕ್ ಡೌನ್ ಆದೇಶ ಮುಂದುವರಿಸುವ ಅವಶ್ಯಕತೆಯಿದೆ ಎಂದು ವಿಶ್ವದ ಅತೀ ದೊಡ್ಡ ವೈದ್ಯಕೀಯ ಜನರಲ್ ದಿ ಲ್ಯಾನ್ಸೆಟ್ ನ ಸಂಪಾದಕ ರಿಚರ್ಡ್ ಹಾರ್ಟನ್ ಸಲಹೆ ನೀಡಿದ್ದಾರೆ.

ಒಂದೊಮ್ಮೆ ಭಾರತದಲ್ಲಿ ಲಾಕ್ ಡೌನ್ ಸಡಿಲಗೊಂಡರೆ, ಕೊರೊನಾ ಸೋಂಕಿನ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆ. ಈಗಿರುವ ಸ್ಥಿತಿಗಿಂತಲೂ ಗಂಭೀರ ಸ್ಥಿತಿಗೆ ಭಾರತ ತಲುಪಲಿದೆ ಎಂದು ಎಚ್ಚರಿಸಿದ್ದಾರೆ. ಚೀನಾದಲ್ಲಿ ಜನವರಿ 23 ರಿಂದ ಎಪ್ರಿಲ್ ವರೆಗೂ ಲಾಕ್ ಡೌನ್ ಮೊರೆಹೋಗಿತ್ತು. ಹೀಗಾಗಿಯೇ ಚೀನಾದಲ್ಲಿ ಕೊರೊನಾ ಒಂದು ಹಂತಕ್ಕೆ ಬಂದಿದೆ. ವಿಶ್ವದಲ್ಲಿಯೇ ಎರಡನೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಕೂಡ ಚೀನಾದ ಮಾದರಿಯನ್ನೇ ಅನುಸರಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ವಿಶ್ವದ ಸುಮಾರು 13 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದು, ನಂತರದಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆ ದುಪ್ಪಟ್ಟಾಗಲಿದೆ. 26 ಕೋಟಿಗೂ ಅಧಿಕ ಮಂದಿ ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಅದ್ರಲ್ಲೂ ಅಸಹಾಯಕ ಸರಕಾರಗಳಿರುವ ರಾಷ್ಟ್ರಗಳಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮವಾಗಲಿದೆ.

ಬದುಕಲು ನಿತ್ಯವೂ ಹೋರಾಟ ಮಾಡುತ್ತಿರುವವರು, ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವವರು ಅದನ್ನೂ ಕೂಡ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಆಹಾರ ಯೋಜನೆಯ ಆರ್ಥಿಕ ತಜ್ಞ ಆರೀಫ್ ಹುಸೇನ್ ತಿಳಿಸಿದ್ದಾರೆ. ಇದಕ್ಕಾಗಿ ಎಲ್ಲ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಇದಕ್ಕಾಗಿ ಭಾರಿ ಬೆಲೆಯನ್ನೇ ತೇರಬೇಕಾಗುತ್ತದೆ ಜಾಗತಿಕವಾಗಿ ಇದರಿಂದಾಗುವ ನಷ್ಟ ಇನ್ನೂ ಹೆಚ್ಚಿನದು ಎಂದು ಎಚ್ಚರಿಕೆ ನೀಡಿದೆ..