- Advertisement -
ಅಸ್ಸಾಂ : ದೇಶದಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರೊ ನಡುವಲ್ಲೇ ಅಸ್ಸಾಂನ ಎರಡು ಕಡೆ ಬಾಂಬ್ ಸ್ಪೋಟ ನಡೆದಿದೆ. ಅಸ್ಸಾಂ ರಾಜ್ಯದ ರಾಷ್ಟ್ರೀಯ ಹೆದ್ದಾರಿ 37ರ ಬಳಿಯಿರುವ ಗ್ರಹಮ್ ಬಜಾರ್ ಹಾಗೂ ಗುರುದ್ವಾರದ ದಿಬ್ರುಗರ್ ಎಂಬ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಪೋಟ ನಡೆಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.