ಮಂಗಳೂರು : ಖಾಸಗಿ ಬಸ್ಸಿನ ಚಾಲಕರಿಬ್ಬರು ನಡುಬೀದಿಯಲ್ಲಿ ಬಸ್ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಮಧ್ಯೆ ಟೈಮ್ ಕೀಪಿಂಗ್ ಹೆಸರಲ್ಲಿ ಗಲಾಟೆ ನಡೆಯುವುದು ಕಾಮನ್. ನಗರದ ಬೆಂದೂರ್ ವೆಲ್ ಆಗ್ನೇಸ್ ಕಾಲೇಜಿನ ಎದುರಿನ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎರಡೂ ಬಸ್ ಗಳ ಚಾಲಕರು ಹೊಡೆದಾಡಿದ್ದಾರೆ.

ಈ ವೇಳೆ, ಟ್ರಾಫಿಕ್ ಜಾಮ್ ಆಗಿದ್ದು ಇತರೇ ವಾಹನಗಳ ಚಾಲಕರು ಬಸ್ ಚಾಲಕರಿಬ್ಬರಿಗೆ ದಬಾಯಿಸಿದ್ದಾರೆ. ಕಾರು ಚಾಲಕನೊಬ್ಬ ಇಬ್ಬರನ್ನೂ ಎಳೆದು ಜಗಳ ಬಿಡಿಸಿದ್ದಲ್ಲದೆ, ರಸ್ತೆಯಿಂದ ಬಸ್ ತೆಗೆಯುವಂತೆ ತಾಕೀತು ಮಾಡಿದ್ದಾನೆ. ನಂತರ ಚಾಲಕರಿಬ್ಬರೂ ಬಸ್ ಚಲಾಯಿಸಿದ್ದಾರೆ. ಚಾಲಕರು ಹೊಡೆದಾಡುತ್ತಿದ್ದರೆ, ಬಸ್ ನಿರ್ವಾಹಕರಿಬ್ಬರು ನಿಂತು ಜಗಳವನ್ನು ನೋಡುತ್ತಿದ್ದರು.

ಚಾಲಕರ ಹೊಡೆದಾಟವನ್ನು ಕಾರಿನಲ್ಲಿದ್ದ ಪ್ರಯಾಣಿಕರು ಮೊಬೈಲಿನಲ್ಲಿ ಸೆರೆ ಹಿಡಿದಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಖಾಸಗಿ ಬಸ್ ಡ್ರೈವರ್ ಗಳ ರಂಪಾಟ ಬೀದಿಗೆ ಬಂದಂತಾಗಿದೆ.