ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಗೆ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪಣಂಬೂರಿನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಾಂಬರ್ ಆದಿತ್ಯ ರಾವ್ ನನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಮಂಗಳೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಪೊಲೀಸರು ಬಾಂಬ್ ತಯಾರಿಕೆಗೆ ಬಳಸಿರೋ ವಸ್ತುಗಳು, ಆತ ದುಷ್ಕೃತ್ಯಕ್ಕೆ ನಡೆಸಿದ ಸಿದ್ದತೆ, ಬಾಂಬ್ ತಯಾರಿಕೆಗೆ ಬಳಸಿದ ಕಚ್ಚಾ ವಸ್ತುಗಳ ಸಂಗ್ರಹ ಜಾಗ ಪತ್ತೆಯ ಕುರಿತು ಹೆಚ್ಚಿನ ವಿಚಾರಣೆಯ ಅಗತ್ಯವಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾಗಿರೋ ಕಿಶೋರ್ ಕುಮಾರ್ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.
ಬಾಂಬರ್ ಆದಿತ್ಯರಾವ್ 10 ದಿನ ಪೊಲೀಸ್ ವಶಕ್ಕೆ
- Advertisement -
RELATED ARTICLES