ಹಾಸನ : ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನ ಕಿಡ್ನಾಪ್ ಮಾಡಿ ಚಲಿಸುವ ಕಾರಿನಲ್ಲಿ ತಾಳಿ ಕಟ್ಟಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಯುವತಿಯ ಸೋದರ ಅತ್ತೆ ಮಗ ಮನು ಎಂಬ ಯುವಕನಿಂದ ಕೃತ್ಯ ನಡೆದಿದೆ. ಹಾಸನದ ಡೈರಿ ಸರ್ಕಲ್ ಬಳಿ ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನ ಸ್ನೇಹಿತನ ಸಹಾಯದಿಂದ ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ್ದಾನೆ.

ಅರಸೀಕೆರೆ ಮೂಲದ ಮನು ಯುವತಿಯನ್ನ ಪ್ರೀತಿಸುತ್ತಿದ್ದ, ಹಲವು ಬಾರಿ ಯುವತಿ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಯುವತಿ ಪ್ರೇಮ ನಿವೇದನೆಯನ್ನ ತಿರಸ್ಕರಿಸಿದಳು. ಇದಕ್ಕೆ ಒಪ್ಪದ ಮನು ಸ್ನೇಹಿತನೊಂದಿಗೆ ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿ ಕಾಣೆಯಾಗಿದ್ದ.

ಇನ್ನು ಈ ಬಗ್ಗೆ ಯುವತಿಯ ಪೋಷಕರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ ಪೊಲೀಸರು ರಾಮನಗರ ಜಿಲ್ಲೆಯಲ್ಲಿ ಯುವತಿಯನ್ನ ರಕ್ಷಿಸಿ ಮನು ಹಾಗೂ ಸ್ನೇಹಿತನನ್ನು ಬಂಧಿಸಿದ್ದಾರೆ.