ಸೋಮವಾರ, ಏಪ್ರಿಲ್ 28, 2025
HomeCrimeಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಚರಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಚರಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

- Advertisement -

ದೆಹಲಿ : ದ್ವಿತೀಯ ಪಿಯುಸಿಯ ಎರಡು ವಿಷಯಗಳಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಚರಂಡಿಗೆ ಹಾರಿ ಆತ್ಮಹತ್ಯೆ (Suicide by jumping into drain) ಮಾಡಿಕೊಂಡಿದ್ದಾಳೆ. ಆಕೆ ಆತ್ಮಹತ್ಯೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದು, ಮೇ 12 ರಿಂದ ನಾಪತ್ತೆಯಾಗಿದ್ದಾಳೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯ ಪೋಷಕರು ಅಮನ್ ವಿಹಾರ್ ಪೊಲೀಸ್ ಠಾಣೆ ಬಳಿ ದೂರು ದಾಖಲಿಸಿದ್ದಾರೆ. ಮೇ 14 ರಂದು ಆಕೆಯ ದೇಹವು ಚರಂಡಿಯಲ್ಲಿ ಅರ್ಧ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೆಕ್ಷನ್ 174 ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮೇ 12ಕ್ಕೆ ಮಧ್ಯಾಹ್ನ 3.30 ರಿಂದ ನಾಪತ್ತೆಯಾಗಿದ್ದಳು ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. “ತನ್ನ ಮಗಳು 12 ನೇ ತರಗತಿಯಲ್ಲಿ ಎರಡು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಅಂದಿನಿಂದ, ಅವಳು ಖಿನ್ನತೆಗೆ ಒಳಗಾಗಿದ್ದಳು ಮತ್ತು ಆತ್ಮಹತ್ಯೆ ಪತ್ರವನ್ನು ಬರೆದಿಟ್ಟು ಮನೆಯಿಂದ ಹೊರ ಹೋಗಿದ್ದಾಳೆ” ಎಂದು ಪೊಲೀಸರು ಹೇಳಿದರು.

ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಬಾಲಕಿಯ ಪತ್ತೆಗೆ ತಂಡ ರಚಿಸಲಾಗಿದೆ. ಪೊಲೀಸರು ಕೂಡ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಅಲ್ಲದೆ, ಪೊಲೀಸ್ ಕಂಟ್ರೋಲ್ ರೂಮ್‌ಗೆ ತಿಳಿಸುವ ಮೂಲಕ ಅವಳನ್ನು ಪತ್ತೆಹಚ್ಚಲು ವಿಳಂಬವಿಲ್ಲದೆ ಎಲ್ಲಾ ಇತರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಾಣೆಯಾದ ಹುಡುಗಿಯ ವಿವರಣೆಯನ್ನು ನೀಡುವ ಮೂಲಕ ದೆಹಲಿಯ ಎಲ್ಲಾ ಎಸ್‌ಎಚ್‌ಒಗಳು ಮತ್ತು ಭಾರತದ ಎಲ್ಲಾ ಡಿಸಿಪಿಗಳು / ಎಸ್‌ಎಸ್‌ಪಿಗಳಿಗೆ ವೈರ್‌ಲೆಸ್ ಸಂದೇಶಗಳನ್ನು ರವಾನಿಸಲಾಯಿತು.” ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಇದನ್ನೂ ಓದಿ : ತ್ರಿವಳಿ ನರಹತ್ಯೆ ಪ್ರಕರಣ, ನಾಲ್ಕನೇ ಶವ ಪತ್ತೆ : ಪೊಲೀಸರಿಂದ ತನಿಖೆ ಚುರುಕು

ಕೊನೆಗೂ ಇಂದು ಮೇ 14 ಭಾನುವಾರರಂದು ಚರಂಡಿಯಲ್ಲಿ ಬಿದ್ದಿರುವ ಬಾಲಕಿಯ ಶವದ ಬಗ್ಗೆ ಪೊಲೀಸರಿಗೆ ಪಿಸಿಆರ್ ಕರೆ ಬಂದಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸ್ ಸಿಬ್ಬಂದಿ, ಶವ ಚರಂಡಿಯಲ್ಲಿ ಭಾಗಶಃ ಮುಳುಗಿರುವುದು ಪತ್ತೆಯಾಗಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಚರಂಡಿಯಿಂದ ಹೊರತೆಗೆದು ಸಂಜಯ್ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಬಾಲಕಿಯನ್ನು ನಾಪತ್ತೆಯಾಗಿರುವ ಬಾಲಕಿ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಮೃತದೇಹವನ್ನು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಕೆಯ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A student committed suicide by jumping into the drain after failing the exam

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular