ಮಹಾರಾಷ್ಟ್ರ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದ ನಾಗರಿಕರ ಗುರುತಿಗಾಗಿ (Aadhar Card Scam) ಆಧಾರ್ ಕಾರ್ಡ್ ನೀಡಿದೆ. ಇದರಲ್ಲಿ ನಾಗರಿಕರ ಫೋಟೋ, ವಿಳಾಸ ಸೇರಿದಂತೆ 12-ಅಂಕಿಯ ಪರಿಶೀಲಿಸಬಹುದಾದ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ಇದೀಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆಗಿರುವ ದೇವೇಂದ್ರ ಫಡ್ನವೀಸ್ (Devendra Fadnavis) ಫೋಟೋ 8 ವರ್ಷದ ಮಗುವಿನ ಆಧಾರ್ ಕಾರ್ಡ್‌ನಲ್ಲಿ ಕಾಣಿಸಿಕೊಂಡಿದೆ. ಇದು ಆಧಾರ್ ಪ್ರಾಧಿಕಾರದ ಅಧಿಕಾರದ ನಿರ್ಲಕ್ಷವೋ, ತಾಂತ್ರಿಕ ದೋಷವೋ ತಿಳಿದಿಲ್ಲ. ಸದ್ಯ ಈ ಘಟನೆ ರಾಜ್ಯದಲ್ಲಿ ಅಪಹಾಸ್ಯಗೀಡಾಗಿದೆ.
ಮಗುವಿನ ತಾಯಿ “ನನಗೆ ಚಂದ್ರಾಪುರದಲ್ಲಿ ಒಬ್ಬ ಮಗನಿದ್ದಾನೆ. ಅವನು ದೇವೇಂದ್ರ ಫಡ್ನವಿಸ್‌ನಂತೆ ಕಾಣುತ್ತಾನೆ. ಇದರಲ್ಲಿ ವ್ಯತ್ಯಾಸವೆಂದರೆ ಅವನಿಗೆ ಕೇವಲ ಎಂಟು ವರ್ಷ. ಈ ಸುದ್ದಿ ಸುಳ್ಳು ಎಂದು ನೀವು ಭಾವಿಸಿದರೆ ಅವರ ಆಧಾರ್ ಕಾರ್ಡ್ ನೋಡಿ,” ಎಂದು ಜಿಗಲ್ ಜೀವನ್ ಸಾವಸಕಡೆ ಅವರ ತಾಯಿ ಹೇಳಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈ 8 ವರ್ಷದ ಬಾಲಕನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಚರ್ಚೆಗೆ ಮುಖ್ಯ ಕಾರಣ ಆತನ ‘ಆಧಾರ್ ಕಾರ್ಡ್’ ಆಗಿದೆ. ಆಧಾರ್ ಕಾರ್ಡ್‌ನಲ್ಲಿ ಮಗುವಿನ ಫೋಟೋ ಬದಲಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಫೋಟೋವನ್ನು ಮುದ್ರಿಸಲಾಗಿದೆ. ವಿಶೇಷವೆಂದರೆ ಆ ಮಗುವಿನ ಎಲ್ಲಾ ಸರಕಾರಿ ಕೆಲಸಗಳು ಈ ಗುರುತಿನ ಮೇಲೆ ನಡೆಯುತ್ತಿವೆ.
ಇದನ್ನೂ ಓದಿ : Uttar Pradesh Murder Case : ಚಿನ್ನಾಭರಣ ಕಳವು ಶಂಕೆ : ಮಹಿಳೆಯ ಕೊಲೆಗೈದ ಸಂಬಂಧಿಕರು
ರಾಜ್ಯಾಡಳಿತ ಸೃಷ್ಟಿಸಿರುವ ಈ ಗೊಂದಲ ಬಗೆಹರಿಸಲು ಅಪ್ರಾಪ್ತ ಬಾಲಕನ ತಾಯಿ ಹರಸಾಹಸ ಪಡುತ್ತಿದ್ದಾರೆ. ಆದರೆ ಫೋಟೋ ಇನ್ನೂ ಹಾಗೆಯೇ ಇದೆ. ಸಿಂಧೇವಾಹಿ ತಾಲೂಕಿನ ವಿರ್ವ ಗ್ರಾಮದಲ್ಲಿ ವಾಸವಾಗಿರುವ ‘ಜಿಗಳ ಜೀವನ ಸಾವಸಕಡೆ’ ಎಂಬುದಾಗಿ ಆಧಾರ್ ಕಾರ್ಡ್ ಹೊಂದಿರುವವರ ಹೆಸರು ಆಗಿದೆ.
Aadhar Card Scam : Deputy Chief Minister’s photo on Aadhaar card of an 8-year-old child