ಬುಧವಾರ, ಏಪ್ರಿಲ್ 30, 2025
HomeCrimeನಟಿ ತುನೀಶಾ ಶರ್ಮಾ ಶವವಾಗಿ ಪತ್ತೆಯಾದ ಸ್ಟುಡಿಯೋದಲ್ಲಿ ಬೆಂಕಿ

ನಟಿ ತುನೀಶಾ ಶರ್ಮಾ ಶವವಾಗಿ ಪತ್ತೆಯಾದ ಸ್ಟುಡಿಯೋದಲ್ಲಿ ಬೆಂಕಿ

- Advertisement -

ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇತ್ತೀಚೆಗೆ ನಟಿ ತುನಿಶಾ ಶರ್ಮಾ ಸಾವಿನ ನಂತರ (Actress Tunisha Sharma Death Place)‌ ಸುದ್ದಿಯಾಗಿದ್ದ ಫಿಲ್ಮ್ ಸ್ಟುಡಿಯೊದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಅಲಿ ಬಾಬಾ ದಸ್ತಾನ್-ಇ-ಕಾಬೂಲ್ ಎಂಬ ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ತುನಿಶಾ ಡಿಸೆಂಬರ್ 24 ರಂದು ವಸಾಯಿ ಬಳಿಯ ಕಾರ್ಯಕ್ರಮದ ಸೆಟ್‌ನಲ್ಲಿ ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಶೀಜಾನ್ ತನ್ನ ಮಗಳನ್ನು ವಂಚಿಸಿದ್ದಾರೆ ಮತ್ತು ಬಳಸಿಕೊಂಡಿದ್ದಾರೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಮುಂಬೈನ ಹೊರವಲಯದಲ್ಲಿರುವ ಕಮಾನ್‌ನಲ್ಲಿರುವ ಭಜನ್‌ಲಾಲ್ ಸ್ಟುಡಿಯೋದಲ್ಲಿ ಶುಕ್ರವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿಯನ್ನು ನಂದಿಸಲಾಗಿತ್ತು ಎಂದು ವಸಾಯಿ-ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ರೈಲ್ವೇ ಕ್ವಾರ್ಟರ್ಸ್‌ನಲ್ಲಿ ಮಹಿಳಾ ಆರ್‌ಪಿಎಫ್ ಕಾನ್‌ಸ್ಟೆಬಲ್ ಆತ್ಮಹತ್ಯೆ

ಇದನ್ನೂ ಓದಿ : ಸುರತ್ಕಲ್‌ : ಕೆಎಸ್‌ಆರ್‌ಟಿಸಿ ಬಸ್‌ಗೆ ಖಾಸಗಿ ಬಸ್‌ ಢಿಕ್ಕಿ 30 ಮಂದಿಗೆ ಗಂಭೀರ ಗಾಯ

ಡಿಸೆಂಬರ್ 24, 2022 ರಂದು ‘ಅಲಿ ಬಾಬಾ: ದಸ್ತಾನ್-ಇ-ಕಾಬೂಲ್’ ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ನಟಿ ತುನಿಶಾ ಶರ್ಮಾ (21) ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭಜನ್‌ಲಾಲ್ ಸ್ಟುಡಿಯೋದಲ್ಲಿ ಕಂಡುಬಂದಿದೆ. ಆಕೆಯ ಸಹನಟ ಮತ್ತು ಮಾಜಿ ಗೆಳೆಯ ಶೀಜಾನ್ ಖಾನ್ (28) ನನ್ನು ಮರುದಿನ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. ಮಾರ್ಚ್ 5 ರಂದು ಜಾಮೀನು ಪಡೆದು ಜೈಲಿನಿಂದ ಹೊರ ನಡೆದಿದ್ದರು. ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಖಾನ್ ಈಗ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ.

ಇದನ್ನೂ ಓದಿ : ಇಮ್ರಾನ್ ಖಾನ್ ಬಂಧನ ಕಾನೂನುಬಾಹಿರ ಎಂದ ಪಾಕಿಸ್ತಾನ ಸುಪ್ರೀಂ ಕೋರ್ಟ್

ಇದನ್ನೂ ಓದಿ : ಶಿವಮೊಗ್ಗ ಬಸ್‌ ಅಪಘಾತದಲ್ಲಿ ಇಬ್ಬರು ಸಾವು : 30 ಕ್ಕೂ ಅಧಿಕ ಮಂದಿಗೆ ಗಾಯ

Actress Tunisha Sharma Death Place : Actress Tunisha Sharma was found dead in a fire in the studio

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular