ದಕ್ಷಿಣ ಕನ್ನಡ : ಆ ವೃದ್ದ ತಾಯಿ ಹಲವು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಳು. ಇಳಿ ವಯಸ್ಸಿನ ತಾಯಿ ಆರೈಕೆ ಮಾಡಬೇಕಾಗಿದ್ದ ಮಗ ಮಾಡಿದ್ದು ಮಾತ್ರ ಅಮಾನವೀಯ ಕೃತ್ಯ. ಕುಡಿದು ಬಂದು ತನ್ನ ಮಗನೊಂದಿಗೆ ಸೇರಿ ಹಲ್ಲೆ ನಡೆಸಿದ್ದ ಪಾಪಿಗಳೀಗ ಪೊಲೀಸರ ಅತಿಥಿಯಾಗಿದ್ದಾರೆ.

ಅಷ್ಟಕ್ಕೂ ಇಂತಹ ಅಮಾನವೀಯ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ. ವೃದ್ಧೆ ಅಪ್ಪಿ ಶೆಟ್ಟಿ ಪುತ್ರ ಶ್ರೀನಿವಾಸ ಶೆಟ್ಟಿ ಹಾಗು ಪ್ರದೀಪ್ ಶೆಟ್ಟಿ ಹಲ್ಲೆ ನಡೆಸಿದ ದುರುಳರು. ಕಂಠಪೂರ್ತಿ ಕುಡಿದು ನೆಲದ ಮೇಲೆ ಮಲಗಿದ್ದ ಅಪ್ಪಿ ಶೆಟ್ಟಿಯನ್ನ ಅಮಾನುಷವಾಗಿ ಹಲ್ಲೆ ನಡೆಸಿ, ಎತ್ತಿ ಬಿಸಾಕಿದ್ದಾರೆ. ಇನ್ನು ಈ ದೃಶ್ಯವನ್ನ ಅಲ್ಲೇ ಇದ್ದ ಮತ್ತೋರ್ವ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ದುರುಳರ ದುಷ್ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಾರ್ವಜನಿಕವಾಗಿಯೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅಪ್ಪಿ ಶೆಟ್ಟಿ ಮೇಲೆ ಪುತ್ರ ಹಾಗು ಮೊಮ್ಮಗ ದಿನ ಹಲ್ಲೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಹಿರಿಯ ನಾಗರೀಕರ ಮೇಲೆ ದೌರ್ಜನ್ಯ ಹಾಗು ಹಲ್ಲೆ ಪ್ರಕರಣವನನ್ನ ಬೆಳ್ತಂಗಡಿ ಪೊಲೀಸರು ದಾಖಲಿಸಿಕೊಂಡು ಬಂಧಿಸಿದ್ದಾರೆ.