ಭಾನುವಾರ, ಜೂನ್ 15, 2025
HomeCrimeAssault on student: ವಿದ್ಯಾರ್ಥಿನಿಗೆ ಕತ್ತರಿಯಿಂದ ಹಲ್ಲೆ ನಡೆಸಿ, ಶಾಲಾ ಮಹಡಿಯಿಂದ ಎಸೆದ ಶಿಕ್ಷಕಿ ಅರೆಸ್ಟ್

Assault on student: ವಿದ್ಯಾರ್ಥಿನಿಗೆ ಕತ್ತರಿಯಿಂದ ಹಲ್ಲೆ ನಡೆಸಿ, ಶಾಲಾ ಮಹಡಿಯಿಂದ ಎಸೆದ ಶಿಕ್ಷಕಿ ಅರೆಸ್ಟ್

- Advertisement -

ದೆಹಲಿ: (Assault on student) ಶಿಕ್ಷಕರೊಬ್ಬರು 5 ನೇ ತರಗತಿಯ ವಿದ್ಯಾರ್ಥಿಗೆ ಪೇಪರ್ ಕತ್ತರಿಸುವ ಕತ್ತರಿಯಿಂದ ತಲೆಗೆ ಹೊಡೆದು ನಂತರ ಆಕೆಯನ್ನು ಶಾಲೆಯ ಮೊದಲ ಮಹಡಿಯಿಂದ ಎಸೆದ ಘಟನೆ ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ಆಫ್ ದೆಹಲಿ (MCD) ಶಾಲೆಯಲ್ಲಿ ನಡೆದಿದೆ.ಆರೋಪಿ ಶಿಕ್ಷಕಿ ಗೀತಾ ದೇಶ್ವಾಲ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ವಂದನಾ ಎಂಬ ಸಂತ್ರಸ್ತ (Assault on student) ವಿದ್ಯಾರ್ಥಿನಿಯೇ ಶಿಕ್ಷಕಿಯಿಂದ ಹಲ್ಲೆಗೆ ಒಳಗಾದವಳು. ಶಿಕ್ಷಕರ ನಡುವೆ ಜಗಳ ಉಂಟಾಗಿತ್ತು. ಈ ವೇಳೆಯಲ್ಲಿ ತನ್ನ ಕೋಪದ ಭರದಲ್ಲಿ ಶಿಕ್ಷಕಿ ವಂದನಾಳಿಗೆ ಕತ್ತರಿಯಿಂದ ಹೊಡೆದಿದ್ದಾಳೆ. ನಂತರ ಮೊದಲ ಮಹಡಿಯಿಂದ ವಿದ್ಯಾರ್ಥಿನಿಯನ್ನು ಎಸೆದಿದ್ದಾಳೆ. ಸದ್ಯ ವಿದ್ಯಾರ್ಥಿನಿಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದ್ರೆ ತೀವ್ರ ಸ್ವರೂಪದ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹಿಂದೂ ರಾವ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ತಪ್ಪಿತಸ್ಥ ಶಿಕ್ಷಕಿ ಗೀತಾ ದೇಶ್ವಾಲ್ ಎಂಬಾಕೆಯನ್ನು ಬಂಧಿಸಿದ್ದಾರೆ. ಸದ್ಯ ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಯನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿನಿ ಹಿಂದೂರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : 5 year boy died: ನೀರಿನ ಸಂಪ್‌ ಗೆ ಬಿದ್ದು ಐದು ವರ್ಷದ ಬಾಲಕ ಸಾವು

ಇದನ್ನೂ ಓದಿ : ವರದಕ್ಷಿಣೆ ಕಿರುಕುಳ ಹಾಗೂ ಕಳ್ಳರು ಕದ್ದ ಬಂಗಾರ ಖರೀದಿ ಆರೋಪ: ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲಿಕ ಬಾಬು ಅರೆಸ್ಟ್‌

ಇದನ್ನೂ ಓದಿ : Man trapped in Cave: 30 ಗಂಟೆಗಳ ಕಾಲ ಗುಹೆಯೊಳಗೆ ಸಿಲುಕಿದ್ದ ಯುವಕನ ರಕ್ಷಣೆ; 15 ಗಂಟೆಗಳ ರಕ್ಷಣಾ ಕಾರ್ಯ ಸಕ್ಸಸ್

(Assault on student) An incident took place in a Municipal Corporation of Delhi (MCD) school in Delhi where a teacher hit a 5th class student on the head with paper scissors and then threw her from the first floor of the school. The accused teacher Geeta Deshwal has been arrested by the police.

RELATED ARTICLES

Most Popular