ಲಂಡನ್ : ಸಾಮಾನ್ಯವಾಗಿ ನೇಣು ಬಿಗಿದು, ಇಲ್ಲ ಸೇವಿಸಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚುತ್ತಿದೆ. ಆದ್ರೆ ಇಲ್ಲೊಬ್ಬ ಭೂಪ ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗವನ್ನು ತಾನೇ ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ. ಆತ 34 ವರ್ಷದ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಈ ವ್ಯಕ್ತಿ, ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ. ದೇಹದ ಹಲವು ಕಡೆಗಳಲ್ಲಿಯೂ ಗಾಯವಾಗಿದ್ದು, ವೈದ್ಯರು ಖಾಸಗಿ ಭಾಗವನ್ನು ಸೇರಿಸಿದ್ದಾರೆ. ಯುವಕನ ಶಿಶ್ನ ಮತ್ತೆ ಜೋಡಿಸಿರುವುದು ಪವಾಡವೆಂದಿದ್ದಾರೆಂದು ವೈದ್ಯರು ಹೇಳಿದ್ದಾರೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಎದುರಾದ ತೊಂದರೆಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ರೋಗಿ, ಖಾಸಗಿ ಭಾಗವನ್ನು ಬೇರ್ಪಡಿಸಿ ಸುಮಾರು 24 ಗಂಟೆಗಳಾಗಿತ್ತು. ಸುಮಾರು ಎರಡು ವಾರಗಳ ನಂತ್ರ ವ್ಯಕ್ತಿ ಮನೆಗೆ ತೆರಳಿದ್ದಾನೆ. ಖಾಸಗಿ ಭಾಗ ಬೇರ್ಪಟ್ಟು ಹಲವು ಗಂಟೆಗಳ ನಂತರವೂ, ಯಶಸ್ವಿಯಾಗಿ ಸೇರಿರುವುದು ಇದೇ ಮೊದಲ ಪ್ರಕರಣವೆಂದು ವೈದ್ಯರು ಹೇಳಿದ್ದಾರೆ.