ಭಾನುವಾರ, ಏಪ್ರಿಲ್ 27, 2025
HomeCrimeಕಟ್ಟಡ ಕುಸಿತ ಎರಡನೇ ಮಹಡಿಯಲ್ಲಿ ಸಿಕ್ಕಿಬಿದ್ದ 7 ಮಂದಿ : 2ನೇ‌ ದಿನವೂ ಮುಂದುವರಿದ ಕಾರ್ಯಾಚರಣೆ

ಕಟ್ಟಡ ಕುಸಿತ ಎರಡನೇ ಮಹಡಿಯಲ್ಲಿ ಸಿಕ್ಕಿಬಿದ್ದ 7 ಮಂದಿ : 2ನೇ‌ ದಿನವೂ ಮುಂದುವರಿದ ಕಾರ್ಯಾಚರಣೆ

- Advertisement -

ನವದೆಹಲಿ : ಮಹಾರಾಷ್ಟ್ರದ ಭಿವಂಡಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು (Bhiwandi Building Collapse) ಸತತ ಎರಡು ದಿನದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ಏಳು ಮಂದಿ ಅವಶೇಷಗಳೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಈವರೆಗೆ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಎರಡು ಅಂತಸ್ತಿನ ಗೋಡೌನ್ ಕುಸಿದು ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಕನಿಷ್ಠ 14 ಮಂದಿಯನ್ನು ಅವಶೇಷಗಳಿಂದ ರಕ್ಷಿಸಲಾಗಿದೆ.

ಮಂಕೋಳಿಯ ವಾಲ್ಪಾಡದ ವರ್ಧಮಾನ್ ಕಾಂಪೌಂಡ್‌ನಲ್ಲಿರುವ ಗ್ರೌಂಡ್-ಪ್ಲಸ್-ಎರಡು ಅಂತಸ್ತಿನ ಗೋಡೌನ್ ಮಧ್ಯಾಹ್ನ 1.45 ಕ್ಕೆ ಕುಸಿದಿದೆ. ನಾಲ್ಕು ಕುಟುಂಬಗಳು ಮೇಲಿನ ಮಹಡಿಯಲ್ಲಿ ವಾಸವಾಗಿದ್ದು, ಕಾರ್ಮಿಕರು ನೆಲ ಅಂತಸ್ತಿನಲ್ಲಿ ಇದ್ದರು ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಅವಿನಾಶ್ ಸಾವಂತ್ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾತ್ರಿ ಭಿವಂಡಿ ಕಟ್ಟಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದರು. ಶಿಂಧೆ ಸಂತಾಪ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ.

ಇದನ್ನೂ ಓದಿ : ಸಿಗರೇಟ್‌ ಸೇದುವುದನ್ನು ನೋಡಿದ್ದಕ್ಕೆ 12 ವರ್ಷದ ಬಾಲಕನ ಕೊಲೆಗೈದ ಸಹಪಾಠಿಗಳು !

ಇದನ್ನೂ ಓದಿ : ಇಂದು ಆಫ್ತಾಬ್ ಪೂನಾವಾಲಾ ವಿರುದ್ಧದ ಆರೋಪದ ಕುರಿತು ಮಹತ್ವದ ಆದೇಶ ನೀಡಲಿದೆ ದೆಹಲಿ ಕೋರ್ಟ್

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಹತ್ತು ಅಗ್ನಿಶಾಮಕ ವಾಹನಗಳು ಹಾಗೂ ಭಿವಂಡಿ ಮತ್ತು ಥಾಣೆಯ ವಿವಿಧ ಏಜೆನ್ಸಿಗಳ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಿವಂಡಿಯ ಲೋಕಸಭಾ ಸಂಸದರಾಗಿರುವ ಕೇಂದ್ರ ಸಚಿವ ಕಪಿಲ್ ಪಾಟೀಲ್ ಅವರ ಸಮ್ಮುಖದಲ್ಲಿ ಥಾಣೆ ಕಲೆಕ್ಟರ್ ಅಶೋಕ್ ಶಿಂಗಾರೆ ಸೇರಿದಂತೆ ಹಿರಿಯ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು.

ಇದನ್ನೂ ಓದಿ : Zia Khan Suicide Case : ಕುಮ್ಮಕ್ಕು ನೀಡಿದ ಆರೋಪದಿಂದ ಸೂರಜ್ ಪಾಂಚೋಲಿಗೆ ಖುಲಾಸೆಗೊಳಿಸಿದ ಸಿಬಿಐ ಕೋರ್ಟ್

Bhiwandi Building Collapse: 7 people trapped on second floor of building collapse: Operation continues for 2nd day

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular