ಸೋಮವಾರ, ಜೂನ್ 16, 2025
HomeCinemaಬೆಂಗಳೂರಲ್ಲಿ ಸೀಜ್ ಆಯ್ತು ಬಚ್ಚನ್ ಕಾರು! ಬಿಗ್ ಬೀ ಗೆ ಶಾಕ್ ಕೊಟ್ರಾ ಆರ್.ಟಿ.ಓ ಅಧಿಕಾರಿಗಳು?!

ಬೆಂಗಳೂರಲ್ಲಿ ಸೀಜ್ ಆಯ್ತು ಬಚ್ಚನ್ ಕಾರು! ಬಿಗ್ ಬೀ ಗೆ ಶಾಕ್ ಕೊಟ್ರಾ ಆರ್.ಟಿ.ಓ ಅಧಿಕಾರಿಗಳು?!

- Advertisement -

ಬೆಂಗಳೂರು : ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್ ಅವರ ೧೦ ಕೋಟಿ ಕಾರು ಬೆಂಗಳೂರು ಆರ್.ಟಿ.ಓ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲ ದುಬಾರಿ ರೋಲ್ಸ್ ರಾಯ್ಸೆ ಕಾರ್ ಸೀಜ್ ಮಾಡಲಾಗಿದೆ.

ಅರೇ ಬಿಗ್ ಬೀ ಬೆಂಗಳೂರಿಗೆ ಯಾಕೆ ಬಂದ್ರು? ಅವರ ಕಾರು ಯಾಕೇ ಸೀಜ್ ಆಯ್ತು ಅಂತ ನೀವು ತಲೆಕೆಡಿಸಿಕೊಳ್ತಿದ್ದೀರಾ. ಸೀಜ್ ಆಗಿರೋದು ಬಿಗ್ ಬೀ ಕಾರು. ಆದರೆ ಸೀಜ್ ಆಗೋದಿಕ್ಕೆ ಕಾರಣ ಅಮಿತಾಬ್ ಬಚ್ಚನ್ ಅಲ್ಲ.

ಬಿಗ್ ಬೀ ಅಮಿತಾಬ್ ಬಳಸಿದ ಈ ಬೆಲೆಬಾಳುವ ಕಾರನ್ನು ಎರಡು ವರ್ಷಗಳ ಹಿಂದೆ ಮಾರಾಟ ಮಾಡಿದ್ದು, ಬೆಂಗಳೂರಿನ ಉಮ್ರಾ ಡೆವಲ್ಪರ್ಸ್ ಮಾಲಿಕ ಬಾಬು ಖರೀಸಿದ್ದಾರೆ. ಆದರೆ ಡಾಕ್ಯುಮೆಂಟ್ ಬದಲಾವಣೆ ಇದುವರೆಗೂ ಮಾಡಿಕೊಂಡಿಲ್ಲ.

ಮಾತ್ರವಲ್ಲ ಕಳೆದ ಎರಡು ವರ್ಷಗಳಿಂದ ಇನ್ಸೂರೆನ್ಸ್ ಸೇರಿದಂತೆ ಹಲವು ನಿಯಮವನ್ನು ಉಲ್ಲಂಘಿಸಿ ಕಾರು ಬಳಕೆ ಮಾಡಲಾಗ್ತಿದೆ. ರವಿವಾರ ಯುಬಿ ಸಿಟಿ ಬಳಿ ಆರ್.ಟಿ.ಓ ಅಧಿಕಾರಿಗಳ ಪರಿಶೀಲನೆ ವೇಳೆ ಈ ಕಾರು ಅಧಿಕಾರಿಗಳಿಗೆ ಸಿಕ್ಕಿದೆ.

ಮಹಾರಾಷ್ಟ್ರ ನೋಂದಣಿಯ ಈ ಕಾರನ್ನು ಸದ್ಯ ಆರ್.ಟಿ.ಓ ವಶದಲ್ಲಿದೆ. ಕೇವಲ ಬಿಗ್ ಬೀ ಕಾರು ಮಾತ್ರವಲ್ಲದೇ ವಿಧಾನ್ ಪರಿಷತ್ತಿನ ಸದಸ್ಯ ಫಾರೂಕ್ ಅವರ ಎರಡು ಬೆಲೆ ಬಾಳುವ ಕಾರು ಸೇರಿದಂತೆ ದಾಖಲೆ ರಹಿತ ಕಾರು, ನೋಂದಣಿ ರಹಿತ ಕಾರು, ನಕಲಿ ನಂಬರ್ ಪ್ಲೇಟ್ ಹೊಂದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗೆ ೧೨ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಅರ್.ಟಿ.ಓ ಅಧಿಕಾರಿ ಮಾಹಿತಿ ನೀಡಿದ್ದಾರೆ.

RELATED ARTICLES

Most Popular