ಚೆನ್ನೈ: (Chennai accident) ಸಾಫ್ಟ್‌ವೇರ್ ಇಂಜಿನಿಯರ್ ರಸ್ತೆಯ ಗುಂಡಿಯಿಂದಾಗಿ ಸ್ಕೂಟರ್‌ನ ನಿಯಂತ್ರಣ ತಪ್ಪಿ, ಟ್ರಕ್ ಅಡಿಯಲ್ಲಿ ಸಿಲುಕಿ ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ಚೆನ್ನೈ ಅಲ್ಲಿ ನಡೆದಿದೆ. ತನ್ನ ತಮ್ಮನನ್ನು ಶಾಲೆಗೆ ಬಿಡಲು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ಶೋಬನಾ(22 ವರ್ಷ) ಎನ್ನುವಾಕೆ ರಸ್ತೆ ಗುಂಡಿಗೆ ಬಲಿಯಾದ ಸಾಫ್ಟವೇರ್ ಇಂಜಿನಿಯರ್ ಯುವತಿ.
ಮೃತ ಎಸ್ ಶೋಬನಾ ಮಂಗಳವಾರ ಬೆಳಗ್ಗೆ 7.20ರ ಸುಮಾರಿಗೆ ತನ್ನ ಸಹೋದರನನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಳು. ಈ ವೇಳೆ ದುರದೃಷ್ಟವಶಾತ್ ರಸ್ತೆಯಲ್ಲಿದ್ದ ಗುಂಡಿಯ ಕಾರಣ ಸ್ಕೂಟರ್ ಸ್ಕಿಡ್ (Chennai accident) ಆಗಿ ಬಿದ್ದು ಆಕೆಯು ರಸ್ತೆಯ ಮೇಲೆ ಬಿದ್ದಿದ್ದಾಳೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟ್ರಕ್ ಆಕೆಯ ಮೇಲೆ ಹರಿದು ಹೋಗಿದೆ. ಇದರ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನೂ ಆಕೆಯ ಸಹೋದರ ಹರೀಶ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಾಹಿತಿ ಪಡೆದ ಸಂಚಾರ ತನಿಖಾ ದಳ ಸ್ಥಳಕ್ಕೆ ಧಾವಿಸಿ ಶೋಬನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದೆ. ಹರೀಶ್ ಮತ್ತು ಶೋಬನಾ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಶೋಬನಾ ಗುಡುವಂಚೇರಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರಿಂಗ್ ವೃತ್ತಿ ಮಾಡಿಕೊಂಡಿದ್ದರು. ಝೋಹೋ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಅವರು ಶೋಬನಾ ಅವರ ಸಾವಿಗೆ ಸಂತಾಪ ಸೂಚಿಸಿದ್ದು, ” ಚೆನ್ನೈನ ಹೊಂಡಗುಂಡಿಗಳಿರುವ ರಸ್ತೆಗಳು ಈ ಅಪಘಾತಕ್ಕೆ ಕಾರಣವಾಗಿವೆ. ಭಾರೀ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ನಮ್ಮ ಸಂಸ್ಥೆಯ ಒಬ್ಬರಾದ ಶೋಬನಾ ಅವರು ದುರಂತವಾಗಿ ಸಾವನ್ನಪ್ಪಿದ್ದಾರೆ. ಆಕೆಯ ಕುಟುಂಬಕ್ಕೆ ಕೆಟ್ಟ ರಸ್ತೆಗಳು ಬಾರೀ ನಷ್ಟವನ್ನುಂಟುಮಾಡಿವೆ.” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Delhi serial accident : ಕುಡಿದ ಅಮಲಿನಲ್ಲಿ ಸರಣಿ ಅಪಘಾತ: ಮೂವರಿಗೆ ಗಂಭೀರ ಗಾಯ, ಕಾರು ಚಾಲಕ ಅರೆಸ್ಟ್
Due to the pothole in the road, the scooter skidded and she fell on the road. At this time, a truck coming from behind ran over her. The young woman died on the spot