ಸೋಮವಾರ, ಏಪ್ರಿಲ್ 28, 2025
HomeCoastal NewsCoastal Crime News : ಮಂಗಳೂರು : ಕ್ಷುಲಕ ವಿಚಾರಕ್ಕೆ ಕಾರ್ಮಿಕನಿಗೆ ಬೆಂಕಿ ಹಚ್ಚಿ ಕೊಲೆ,...

Coastal Crime News : ಮಂಗಳೂರು : ಕ್ಷುಲಕ ವಿಚಾರಕ್ಕೆ ಕಾರ್ಮಿಕನಿಗೆ ಬೆಂಕಿ ಹಚ್ಚಿ ಕೊಲೆ, ಮಾಲೀಕ ಅರೆಸ್ಟ್‌

- Advertisement -

ಮಂಗಳೂರು : ಕ್ಷುಲಕ ವಿಚಾರಕ್ಕೆ ಕಾರ್ಮಿಕನಿಗೆ ಬೆಂಕಿ ಹಚ್ಚಿ ನಂತರ ವಿದ್ಯುತ್‌ ಶಾಕ್‌ (Coastal Crime News) ಎಂದು ನಾಟಕವಾಡಿದ್ದ ಮಾಲೀಕನ ಕಳ್ಳಾಳ ಕೊನೆಗೂ ಬಯಲಾಗಿದೆ. ಸದ್ಯ ಮಂಗಳೂರು ಪೊಲೀಸರು ಮಾಲೀಕನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ತೌಸಿಫ್‌ ಹುಸೇನ್‌ ಎಂಬಾತನೇ ಬಂಧಿತ ಕೊಲೆ ಆರೋಪಿ. ಉತ್ತರ ಭಾರತ ಮೂಲದ ಕಾರ್ಮಿಕ ಗಜ ಎಂಬಾತನೇ ಕೊಲೆಯಾಗಿರುವಾತ. ಅಂಗಡಿ ಮಾಲೀಕ ತೌಸಿಫ್‌ ಹುಸೇನ್‌ ಕಾರ್ಮಿಕ ಗಜ ಎಂಬಾತನ ಮೇಲೆ ಕ್ಷುಲಕ ಕಾರಣಕ್ಕೆ ಕೋಪಗೊಂಡು ಬೆಂಕಿ ಹಚ್ಚಿದ್ದಾನೆ. ನಂತರ ವಿದ್ಯುತ್‌ ಶಾಕ್‌ ಎಂದು ಸುಳ್ಳು ಹೇಳಿ ಸ್ಥಳೀಯರನ್ನು ನಂಬಿಸಿದ್ದ. ಅಲ್ಲದೇ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಇದನ್ನೂ ಓದಿ : Jammu and Kashmir rains : ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ : ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಸೈನಿಕರು

ಇದನ್ನೂ ಓದಿ : Jain Muni murder case : ಜೈನಮುನಿ ಹತ್ಯೆ ಪ್ರಕರಣ, ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ದತೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಅನುಮಾನಗೊಂಡ ಪೊಲೀಸರು ಆರೋಪಿ ತೌಸಿಫ್‌ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಆರೋಪಿ ಸ್ಪೋಟಕ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಯ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಮಂಗಳುರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌ ಜೈನ್‌ ತಿಳಿಸಿದ್ದಾರೆ.

Coastal Crime News : Mangalore : Worker set on fire for trivial matter, owner arrested

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular