ಚಿಕ್ಕಮಗಳೂರು : ತಾಯಿ ದೇವರ ಸ್ವರೂಪ ಅಂತಾರೆ, ಆದರೆ ಇಲ್ಲೊಬ್ಬ ಸುಪುತ್ರ ತನ್ನ ಹೆತ್ತ ತಾಯಿಯನ್ನೇ ಕೊಲೆ ಗೈದಿದ್ದಾನೆ. 48 ವರ್ಷದ ಸುಧಾ ಮೃತಪಟ್ಟವರು ಎಂದು ಹೇಳಲಾಗಿದೆ. ಸುಧಾ ಅವರ ಹಿರಿಯ ಪುತ್ರ ದುಶ್ಯಂತ್ (28ವರ್ಷ ) ಕೊಲೆ ಆರೋಪಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ ತಾಯಿಯನ್ನು ಹತ್ಯೆ ಮಾಡಿದ ಆರೋಪಿ ಸಂಜೆಯವರೆಗೂ ಶವದ ಜೊತೆಯಲ್ಲಿ ಕಾಲ ಕಳೆದಿದ್ದಾನೆ.
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಕಿರಿಯ ಪುತ್ರ ಸಂತೋಷ್ ಮನೆಯಲ್ಲಿ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಾನೆ. ಆದರೆ, ಈ ವೇಳೆಗಾಗಲೇ ಸುಧಾ ಮೃತಪಟ್ಟಿರುವುದು ಗೊತ್ತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಸವನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಯುವತಿಯ ಮದುವೆ ತಪ್ಪಿಸಲು ಅಶ್ಲೀಲ ವಿಡಿಯೋ ಹರಿಬಿಟ್ಟ ಕಿರಾತಕರು : ನಾಲ್ವರು ಅರೆಸ್ಟ್
ಸುಧಾ ಅವರ ಪತಿ ನಿಧನರಾಗಿದ್ದು, ಸುಧಾ ಪ್ರಾವಿಷನ್ ಸ್ಟೋರ್ ವೊಂದರಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿ ಸಲಹಿದ್ದಾರೆ. ಸಂತೋಷ್ ಇಂಜಿನಿಯರ್ ಓದಿದ್ದು, ತಾಯಿಗೆ ನೆರವಾಗ್ತಿದ್ದ. ದುಶ್ಯಂತ್ ಅಬ್ನಾರ್ಮಲ್ ವರ್ತನೆ ತೋರಿದ್ದು ಆಸ್ಪತ್ರೆ, ದೇವಾಲಯಗಳಿಗೆ ಸುಧಾ ಕರೆದುಕೊಂಡು ಹೋಗುತ್ತಿದ್ದರು. ನಿನ್ನೆ ಮಧ್ಯಾಹ್ನ ಕೆಲಸಕ್ಕೆ ಹೋಗದೆ ಆತನನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಮನೆಗೆ ಬಂದಿದ್ದಾರೆ. ನಂತರದಲ್ಲಿ ತಾಯಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Karkala : ನೀರು ಎಂದು ಆಸಿಡ್ ಕುಡಿದ ಯುವತಿ ! ಕ್ಯಾಶ್ಯೂ ಫಾಕ್ಟರಿ ಮಾಲೀಕನ ವಿರುದ್ದ ದಾಖಲಾಯ್ತು ದೂರು
(A son who murdered his own mother)