ಬೈಂದೂರು : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಆಳ ಸಮುದ್ರದ ಅಲೆಗೆ ಸಿಲುಕಿ ದೋಣಿ ಮುಳುಗಡೆಯಾಗಿರುವ (Deep sea boat Tragedy) ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ನಡೆದಿದೆ.
ಶಿರೂರು ಗ್ರಾಮದ ಮುಸ್ತಾಕ್, ಶಬ್ಬೀರ್, ರೋಜಿ ಅಬ್ಬೂಬಕ್ಕರ್, ತರಿಸಲ್ಲಾ ಅಶ್ರಫ್, ಭೂಂಭಾ ಮೀರಾ ಪ್ರಾಣಾಪಾಯದಿಂದ ಪಾರಾದ ಮೀನುಗಾರರು. ಇವರಲ್ಲರೂ ಶಿರೂರಿನ ಮುಸ್ತಾಕ್ ಮಾಲೀಕತ್ವದ ಬೇಬಿ ಅಮಿನಾ ಹೆಸರಿನ ಆಳ ಸಮುದ್ರದ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ತೆರಳಿದ್ದರು. ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ತಂಡ ಭೇಟಿ ಪರಿಶೀಲನೆಯನ್ನು ನಡೆಸಿದೆ. ಸ್ಥಳಿಯರ ಮೀನುಗಾರರ ನೆರವಿನಿಂದ ಮುಳುಗಡೆಯಾಗಿದ್ದ ದೋಣಿಯಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಕಳೆದ ವರ್ಷ ಕೂಡ ದೋಣಿ ದುರಂತದಲ್ಲಿ ಮೀನುಗಾರರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ ಕಳೆದ ವಾರದಿಂದಲೂ ಸುರಿದ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ದವಾಗಿದೆ.ಕೆಲವೇ ದಿನಗಳಲ್ಲಿ ಮೀನುಗಾರಿಕೆ ಅಂತ್ಯವಾಗಲಿದೆ. ಚಂಡ ಮಾರುತದ ಅಬ್ಬರದಿಂದ ಮೀನುಗಾರರಿಗೆ ಬಂಪರ್ ಲಾಭ ದೊರೆತಿದೆ. ಈ ನಡುವಲ್ಲೇ ದೋಣಿ ದುರಂತ ನಡೆದಿರುವುದು ಆತಂಕವನ್ನು ಮೂಡಿಸಿದೆ.
ಇದನ್ನೂ ಓದಿ : ಮರಕ್ಕೆ ಕ್ರೂಸರ್ ಢಿಕ್ಕಿ 7 ಮಂದಿ ಸಾವು, 6 ಮಂದಿ ಗಂಭೀರ : ನಿಶ್ಚಿತಾರ್ಥ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ದುರಂತ
ಇದನ್ನೂ ಓದಿ : Maharashtra Shocker: ಮನೆಗೆಲಸ ಮಾಡುವಂತೆ ಪೀಡಿಸಿದ್ದಕ್ಕೆ ರೂಮ್ಮೇಟ್ ಕೊಲೆ
Deep sea boat Tragedy Byndoor Shirur Save 5 fishermen