ಭಾನುವಾರ, ಏಪ್ರಿಲ್ 27, 2025
HomeCrimeDelhi serial accident : ಕುಡಿದ ಅಮಲಿನಲ್ಲಿ ಸರಣಿ ಅಪಘಾತ: ಮೂವರಿಗೆ ಗಂಭೀರ ಗಾಯ, ಕಾರು...

Delhi serial accident : ಕುಡಿದ ಅಮಲಿನಲ್ಲಿ ಸರಣಿ ಅಪಘಾತ: ಮೂವರಿಗೆ ಗಂಭೀರ ಗಾಯ, ಕಾರು ಚಾಲಕ ಅರೆಸ್ಟ್

- Advertisement -

ನವದೆಹಲಿ : ಕಾರು ಚಾಲಕನೊಬ್ಬ ಕುಡಿದ ಅಮಲಿನಲ್ಲಿ ನಿಯಂತ್ರಣವಿಲ್ಲದೇ ಬಹು ವಾಹನಗಳಿಗೆ ಗುದ್ದಿದ ಪರಿಣಾಮವಾಗಿ ಭಾರೀ ಹಾನಿ (Delhi serial accident) ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವಂತೆ ಕಾರು ಅತಿವೇಗದಿಂದ ಬಂದು ಹಲವಾರು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

ದಿಲ್ಲಿಯ ದ್ವಾರಕಾ ಮೋಡ್‌ನಲ್ಲಿ ಕುಡಿದು ಕಾರನ್ನು ಓಡಿಸಿದ್ದರಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ವಾಹನಗಳಿಗೆ ಢಿಕ್ಕಿ ಹೊಡೆದು ಇತರ 3 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಕುಡಿದು ಸ್ಕೂಟಿಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಕಾಲು ಸಿಲುಕಿಕೊಂಡ 20 ವರ್ಷದ ಯುವತಿಯನ್ನು ಕಾರು ಸುಮಾರು 12 ಕಿಲೋಮೀಟರ್ ಎಳೆದೊಯ್ದ ಕಂಝಾವಾಲಾ ಪ್ರಕರಣದ ನಂತರ ದೆಹಲಿಯಲ್ಲಿ ಈ ವರ್ಷ ನಡೆದ ರಸ್ತೆ ಅಪಘಾತದಲ್ಲಿ ಆಕ್ರೋಶದ ಎರಡನೇ ಪ್ರಕರಣ ಇದಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ : ಡೆತ್‌ನೋಟ್‌ನಲ್ಲಿ ಬಿಜೆಪಿ ಶಾಸಕರ ಹೆಸರು

ಇದನ್ನೂ ಓದಿ : Bus caught Fire: ಮಹಾರಾಷ್ಟ್ರದ ಥಾಣೆಯಲ್ಲಿ ಬಸ್‌ ಗೆ ಬೆಂಕಿ: 65 ಪ್ರಯಾಣಿಕರು ಪಾರು

ಇದನ್ನೂ ಓದಿ : Eastern Peripheral Expressway : ನೋಯ್ಡಾದ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇನಲ್ಲಿ ಮಹಿಳೆ ಶವ ಪತ್ತೆ

ಈ ಕಾರು ಚಾಲಕ ಕೂಡ ಕುಡಿದ ಅಮಲಿನಲ್ಲಿದ್ದು,ಅಪಘಾತದ ಸಮಯದಲ್ಲಿ ತಮ್ಮ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೆಹಲಿ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹೊರ ಜಿಲ್ಲೆಯ ಎಎಸ್‌ಐ ಪಿಸಿಆರ್ ವ್ಯಾನ್ ಸೇರಿದಂತೆ 6 ವಾಹನಗಳಿಗೆ ಡಿಕ್ಕಿ ಹೊಡೆದು ಇತರ 3 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಳುಗಳನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ರಕ್ತದಲ್ಲಿ ಆಲ್ಕೋಹಾಲ್ ಅಂಶ ವಿಶ್ಲೇಷಣೆಗಾಗಿ ಆತನ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

Delhi serial accident: Drunk serial accident: Three seriously injured, car driver arrested

RELATED ARTICLES

Most Popular