ಸೋಮವಾರ, ಏಪ್ರಿಲ್ 28, 2025
HomeCrimeಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ಗಾಜುಪುಡಿ, ತಪ್ಪಿದ ಬಾರೀ ದುರಂತ

ಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ಗಾಜುಪುಡಿ, ತಪ್ಪಿದ ಬಾರೀ ದುರಂತ

- Advertisement -

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ (DK Shivakumar helicopter disaster)ತುರ್ತು ಭೂಸ್ಪರ್ಶವಾಗಿದೆ. ಬೆಂಗಳೂರಿನ ಎಚ್‌ಎಎಲ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆಯಲ್ಲಿ ರಣಹದ್ದು ಹೆಲಿಕಾಫ್ಟರ್‌ ಗಾಜಿಗೆ ಬಡಿದಿದೆ. ಇದರಿಂದಾಗಿ ಗಾಜು ಒಡೆದು ಹೋಗಿದ್ದು, ಫೈಲೆಟ್‌ ಸಮಯ ಪ್ರಜ್ಞೆಯಿಂದ ಹೆಲಿಕಾಫ್ಟರ್‌ ಅನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಎಚ್ಎಎಲ್‌ ವಿಮಾನ ನಿಲ್ದಾಣದಿಂದ ಮುಳಬಾಗಿಲಿಗೆ ಹೊರಟಿದ್ದರು. ಈ ವೇಳೆಯಲ್ಲಿ ಹೊಸಕೋಟೆಯ ಬಳಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಒಮ್ಮೆಲೆ ರಣಹದ್ದುಗಳು ಅಡ್ಡ ಬಂದಿವೆ. ಎರಡು ರಣಹದ್ದುಗಳನ್ನು ಫೈಲೆಟ್‌ ತಪ್ಪಿಸಿದ್ದಾರೆ. ಒಂದು ರಣಹದ್ದು ಬಂದು ಹೆಲಿಕಾಫ್ಟರ್‌ ಗಾಜಿಗೆ ಬಡಿದಿದೆ. ಈ ವೇಳೆಯಲ್ಲಿ ಡಿಕೆ ಶಿವಕುಮಾರ್‌ ಅವರು ವರದಿಗಾರರಿಗೆ ಸಂದರ್ಶನವನ್ನು ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಎನ್‌ಪಿಎಸ್‌ ರದ್ದು, ಹಳೆ ಪಿಂಚಣಿ ಯೋಜನೆ ಜಾರಿ

ಇದನ್ನೂ ಓದಿ : 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ 2,000ರೂ. ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಏನೇನಿದೆ ?

ನನ್ನ ಪಾಲಿಗೆ ದೇವರಿದ್ದಾನೆ. ನಾನು ನಂಬಿದ ಶಕ್ತಿ ನನ್ನ ಜೊತೆಗೆ ಇದೆ. ದೊಡ್ಡ ರಣಹದ್ದುಗಳು ಹೆಲಿಕಾಫ್ಟರ್‌ಗೆ ಬಂದು ಬಡಿದು ಈ ಘಟನೆ ಸಂಭವಿಸಿದೆ. ನಾನು ಇದೀಗ ಕಾರಿನ ಮೂಲಕ ಮುಳಬಾಗಿಲಿಗೆ ತೆರಳಲಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

ಕನಕಪುರ, ವರುಣಾ ಬಿಜೆಪಿ ಟಾರ್ಗೆಟ್: ಸಿದ್ದು, ಡಿಕೆಶಿ ಸೋಲಿಸಲು ಬಿಜೆಪಿ ಮಾಸ್ಟರ್‌ ಫ್ಲ್ಯಾನ್‌

ಬೆಂಗಳೂರು : ರಾಜ್ಯದಲ್ಲಿ ಮತಸಮರಕ್ಕೆ ರಣಾಂಗಣ ಸಿದ್ಧವಾಗಿದೆ. ಮೂರು ಪ್ರಮುಖ ಪಕ್ಷಗಳು ಅಧಿಕಾರಕ್ಕೇರುವ ಕನಸಿನಲ್ಲಿ ನೊರೆಂಟು ಲೆಕ್ಕಾಚಾರದ ರಾಜಕಾರಣ ಆರಂಭಿಸಿವೆ. ಈ ಮಧ್ಯೆ ಕಾಂಗ್ರೆಸ್ ನ್ನು ಕಟ್ಟಿಹಾಕಲು ಇನ್ನಿಲ್ಲದ ಸರ್ಕಸ್ ನಡೆಸಿರುವ ಪ್ರಮುಖ ಪಕ್ಷ ಬಿಜೆಪಿ ಕೈಪಡೆಯ ಇಬ್ಬರು ನಾಯಕರನ್ನು (DK Sivakumar – Siddaramaiah) ಮೊದಲ ಟಾರ್ಗೆಟ್ ಮಾಡಿದ್ದು, ಅವರ ವಿರುದ್ಧ ಪ್ರಮುಖಾಸ್ತ್ರಗಳನ್ನೇ ಬಳಸುತ್ತಿದೆ.

ರಾಜ್ಯ ಸೇರಿದಂತೆ ದೇಶದಲ್ಲಿ ಘನ ಇತಿಹಾಸ ಹೊಂದಿರೋ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವದ ಕೊರತೆ ಇದೆ. ಕೈಪಡೆಯಲ್ಲಿ ನಾಯಕರೇ ಇಲ್ಲ ಅನ್ನೋದು ಸದಾಕಾಲ ಬಿಜೆಪಿಯ ವಾಗ್ದಾಳಿಯ ಅಂಶ. ಆದರೆ ರಾಜ್ಯದಲ್ಲಿ ಡಿಕೆಶಿ,ಸಿದ್ಧರಾಮಯ್ಯ ಇಬ್ಬರೂ ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ಎಂಬುದರಲ್ಲಿ ಅನುಮಾನವಿಲ್ಲ.ಈಗ ಈ ಇಬ್ಬರೂ ನಾಯಕರನ್ನು ಬಿಜೆಪಿ ಸಖತ್ ಟಾರ್ಗೆಟ್ ಮಾಡಿದೆ. ಹೌದು ವರುಣಾದಲ್ಲಿ ಸಿದ್ಧರಾಮಯ್ಯನವರನ್ನು ಕಟ್ಟಿಹಾಕಲು ರಣತಂತ್ರ ರೂಪಿಸಿರುವ ಬಿಜೆಪಿ ಅದಕ್ಕಾಗಿ ಪ್ರಬಲ ಲಿಂಗಾಯತ್ ನಾಯಕ ಸೋಮಣ್ಣನವರನ್ನು ಕಣಕ್ಕಿಳಿಸಿದೆ. ಮಾತ್ರವಲ್ಲ ಮಾತಿನ ಮೋಡಿಗಾರ ಅಮಿತ್ ಶಾ ರನ್ನು ಪ್ರಚಾರದ ಅಸ್ತ್ರವಾಗಿ ಬಳಸುತ್ತಿದೆ.

ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಜೊತೆಗೆ ಬಿಜೆಪಿಯ ಹಿರಿಯ ಲಿಂಗಾಯತ್ ನಾಯಕ ಹಾಗೂ ಮಾಜಿಸಿಎಂ ಬಿಎಸ್ವೈ ರನ್ನು ಬಿಜೆಪಿ ವರುಣಾ ಪ್ರಚಾರದ ಪ್ರಮುಖರನ್ನಾಗಿ ಪರಿಗಣಿಸಿದೆ. ಹೀಗಾಗಿ ಬಿಎಸ್ವೈ ವರುಣಾದಲ್ಲಿ ಭರ್ಜರಿ ಪ್ರಚಾರ ನಡೆಸಿ , ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕವಾಗಿರೋ ಲಿಂಗಾಯತ್ ಮತಗಳನ್ನು ಸೆಳೆಯೋ ಕೆಲಸ ಮಾಡಿದ್ದಾರೆ. ಬಿಎಸ್ವೈ ವರುಣಾದಲ್ಲಿ ಸಿದ್ಧರಾಮಯ್ಯನವರನ್ನು ಸೋಲಿಸಿಯೇ ಸಿದ್ಧ ಎಂದು ಈಗಾಗಲೇ ಶಪಥ ಮಾಡಿದ್ದು, ಅದಕ್ಕಾಗಿ ಬಿಜೆಪಿ ಕೂಡ ಸರ್ಕಸ್ ನಡೆಸಿದೆ.

ಈ ಮಧ್ಯೆ ಸಿದ್ಧರಾಮಯ್ಯನವರಿಗೆ ಇದು ಕೊನೆಯ ಚುನಾವಣೆ ಹಾಗೂ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಚುನಾವಣೆಯ ಫಲಿತಾಂಶದ ಮೇಲೆ ಅವರ ಘನತೆ ಹಾಗೂ ಭವಿಷ್ಯ ನಿಂತಿದೆ‌ ಎಂದರೆ ತಪ್ಪಿಲ್ಲ. ಸೋಲು ಅವರನ್ನು ಕಂಗೆಡಿಸುವ ಹಾಗೂ ಸಿಎಂ ರೇಸ್ ನಿಂದ ಅವರನ್ನು ಹೊರಕ್ಕಿಡುವ ಸಾಧ್ಯತೆ ಇದೆ. ಇದರಿಂದ ಬಿಜೆಪಿಗೆ ಲಾಭವಿದೆ. ಇನ್ನೊಂದೆಡೆ ಕನಕಪುರದಲ್ಲಿ ಡಿಕೆಶಿ ಯಶಸ್ವಿ ಗೆಲುವಿನ ಹಾದಿಗೆ ಅಡ್ಡಗಾಲಾಗಿ ಆರ್.ಅಶೋಕ್ ರನ್ನು ಬಿಜೆಪಿ ಕಣಕ್ಕಿಳಿಸಿದೆ. ಆರ್.ಅಶೋಕ್ ಪರ ಈಗಾಗಲೇ ಘಟಾನುಘಟಿ ಬಿಜೆಪಿ ಪ್ರಮುಖರು ಕನಕಪುರದಲ್ಲಿ ಪ್ರಚಾರ ನಡೆಸಿದ್ದಾರೆ. ಇನ್ನೇನು ಮತದಾನಕ್ಕೆ ಕೆಲವೇ ದಿನ ಉಳಿದಿರುವಾಗ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಬಿಜೆಪಿಯ ಚುನಾವಣೆಯ ತಂತ್ರಗಳನ್ನು ರೂಪಿಸಿದ ಬಿ.ಎಲ್.ಸಂತೋಷ್ ಕೂಡ ಕನಕಪುರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬಿ.ಎಲ್.ಸಂತೋಷ್ ಆರ್.ಅಶೋಕ್ ಗೆಲುವಿಗೆ ಒಂದೊಂದೆ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿದ್ದು, ಇಂದು ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲಿರುವ ಬಿ.ಎಲ್.ಎಸ್ ಡಿಕೆಶಿ ಕಟ್ಟಿಹಾಕಲು ಅಗತ್ಯ ಪ್ಲ್ಯಾನ್ ಮಾಡಲಿದ್ದಾರಂತೆ. .ಒಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್ ನ ಎರಡೂ ಪ್ರಮುಖ ನಾಯಕರನ್ನೇ ಟಾರ್ಗೆಟ್ ಮಾಡಿರೋ ಬಿಜೆಪಿ ನಾಯಕರು ಹೊಸ ಹೊಸ ಪ್ಲ್ಯಾನ್ ಮೂಲಕ ಚುನಾವಣೆ ಗೆಲ್ಲಲು ಸರ್ಕಸ್ ನಡೆಸಿದ್ದು ಕಮಲಕಲಿಗಳ ತಂತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಅನ್ನೋದನ್ನು ಮೇ ೧೩ ಫಲಿತಾಂಶವೇ ಹೇಳಲಿದೆ.

DK Shivakumar helicopter : The helicopter in which DK Shivakumar was traveling crashed into glass, missed a disaster

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular