ಮುಂಬೈ : ಜೀವನದಲ್ಲಿ ಖುಷಿಯಿಲ್ಲ ಎಂಬ ಕಾರಣಕ್ಕೆ ವೈದ್ಯೆಯೋರ್ವಳು ತನ್ನ ಪತಿ ಹಾಗೂ ತನ್ನಿಬ್ಬರು ಮಕ್ಕಳನ್ನು ಕೊಲೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ವೈದ್ಯಯಾಗಿರುವ ಡಾ.ಸುಷ್ಮಾರಾಣಿ (41ವರ್ಷ) ಹಾಗೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಧೀರಜ್ (42 ವರ್ಷ) ದಂಪತಿಗಳು ನಾಗ್ಪುರದ ಕೊರಡಿ ಪ್ರದೇಶದ ಓಂ ನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಆದರೆ ವೈದ್ಯೆಯಾಗಿರುವ ಡಾ.ಸುಷ್ಮಾರಾಣಿ ಪತಿ ಹಾಗೂ ಮಕ್ಕಳನ್ನು ಕೊಲೆ ಗೈದಿದ್ದಾಳೆ.

ನಂತರ ತಾನೂ ಕೂಡ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಮೃತ ದೇಹದ ಬಳಿಯಲ್ಲಿ 2 ಸಿರಿಂಜ್ ಹಾಗೂ ಡೆತ್ ನೋಟ್ ಪತ್ತೆಯಾಗಿದೆ. ಜೀವನದಲ್ಲಿ ಖುಷಿಯಿರಲಿಲ್ಲ. ಹೀಗಾಗಿ ನಾನು ಈ ಕೃತ್ಯವನ್ನೆಸಗಿದ್ದೇನೆ ಎಂದು ಬರೆದುಕೊಂಡಿದ್ದಾಳೆ.

ವೈದ್ಯೆಯಾಗಿರುವ ಡಾ.ಸುಷ್ಮಾರಾಣಿ ಪತಿ ಹಾಗೂ ಮಕ್ಕಳಿಗೆ ಆರಂಭದಲ್ಲಿ ಮಂಪರು ಬರುವ ಔಷಧನ್ನು ನೀಡಿ, ನಂತರ ಇಂಜೆಕ್ಷನ್ ಚುಚ್ಚಿ ಸಾಯಿಸಿರಬಹುದೆಂಬ ಅನುಮಾನಗಳು ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.