ನವದೆಹಲಿ : ದೇಶದ ರಾಜಧಾನಿಯಲ್ಲಿ ಒಂದಲ್ಲೊಂದು ಕೊಲೆ ಪ್ರಕರಣ (Double Murder In Delhi) ಬೆಳಕಿಗೆ ಬರುತ್ತಿದೆ. ಇದೀಗ ಫ್ಲಾಟ್‌ವೊಂದರಲ್ಲಿ ತಾಯಿ, ಮಗಳು ಇಬ್ಬರು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ತಾಯಿ ಮತ್ತು ಮಗಳ ದೇಹದಲ್ಲಿ ಗಾಯದ ಗುರುತುಗಳು ಇರುವುದರಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮತೃಪಟ್ಟ ತಾಯಿ ಮತ್ತು ಮಗಳನ್ನು ಆಕಾಶವಾಣಿಯ ನಿವೃತ್ತ ಅಧಿಕಾರಿ ರಾಜರಾಣಿ ಲಾಲ್ ಮತ್ತು ಅವರ ಪುತ್ರಿ ಗಿನ್ನಿ ಕರಾರ್ (36) ಎಂದು ಗುರುತಿಸಲಾಗಿದೆ. ಕೃಷ್ಣನಗರದ ಇ ಬ್ಲಾಕ್‌ನಲ್ಲಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ನೆರೆಹೊರೆಯವರು ಪಿಸಿಆರ್‌ಗೆ ಕರೆ ಮಾಡಿ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ರೋಹಿತ್ ಮೀನಾ, ಡಿಸಿಪಿ ಶಹದಾರ, “ಕೃಷ್ಣನಗರ ಇ ಬ್ಲಾಕ್‌ನಲ್ಲಿರುವ ಮೊದಲ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ರಾತ್ರಿ 8 ಗಂಟೆಗೆ ದುರ್ವಾಸನೆ ಬರುತ್ತಿರುವ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು 65 ವರ್ಷದ ಮಹಿಳೆ ಮತ್ತು ಆಕೆಯ 36 ವರ್ಷದ ಮಗಳ ಶವಗಳನ್ನು ಫ್ಲಾಟ್‌ನಿಂದ ಹೊರತೆಗೆದಿದೆ. ಮೇಲ್ನೋಟಕ್ಕೆ, ಮೃತರಿಗೆ ತಿಳಿದಿರುವ ಮೂರನೇ ವ್ಯಕ್ತಿ ಅಪಾರ್ಟ್ಮೆಂಟ್ ಒಳಗೆ ಇದ್ದಿರಬಹುದು ಎಂದು ತೋರುತ್ತದೆ. ನಾವು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ” ಮೃತದೇಹಗಳು ಹೆಚ್ಚು ಕೊಳೆತ ಸ್ಥಿತಿಯಲ್ಲಿದ್ದು, ಹುಳುಗಳು ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : NIA – Lokayukta attack in Karnataka : ಕರ್ನಾಟಕದಲ್ಲಿ ಎನ್ಐಎ ದಾಳಿಯ ಬೆನ್ನಲ್ಲೇ ಲೋಕಾಯುಕ್ತ ದಾಳಿ
ಪೋಲೀಸರ ಪ್ರಕಾರ, ಫ್ಲಾಟ್‌ನ ಪ್ರವೇಶದ್ವಾರವು ಎರಡು ಲಾಕಿಂಗ್ ವ್ಯವಸ್ಥೆಯನ್ನು ಹೊಂದಿತ್ತು. ಒಂದು ಮುಖ್ಯ ಪ್ರವೇಶ ದ್ವಾರದಲ್ಲಿ ಮತ್ತು ಇನ್ನೊಂದು ಮುಖ್ಯ ಬಾಗಿಲಿನಲ್ಲಿ ಅದನ್ನು ಅಧಿಕೃತಗೊಳಿಸಿದ ನಂತರವೇ ತೆಗೆಯು ವ್ಯವಸ್ಥೆಯನ್ನು ಹೊಂದಿತು. ಸದ್ಯ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕವಾಗಿ ಇದು ಸ್ನೇಹಪೂರ್ವಕ ಪ್ರವೇಶದಂತೆ ತೋರುತ್ತಿದೆ. ತನಿಖೆ ನಡೆಯುತ್ತಿದೆ ಮತ್ತು ಕೆಲವು ಸುಳಿವುಗಳನ್ನು ಪಡೆಯಲಾಗಿದೆ. ಆರೋಪಿಯನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
Double Murder In Delhi: Decomposed bodies of mother and daughter were found in the flat