ಮುಂಬೈ; Escort service website: ಸೋಶಿಯಲ್ ಮೀಡಿಯಾಗಳು ಎಷ್ಟು ಬೇಗ ಅಪ್ಡೇಟ್ ಆಗುತ್ತವೋ ಈಗಿನ ಜನರೇಶನ್ ಅದಕ್ಕಿಂತ ಬೇಗನೇ ಅಪ್ಡೇಟ್ ಆಗುತ್ತವೆ. ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದು ಕೂಡಲೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋದು ಈಗಿನ ಜನರಿಗೆ ರೂಢಿ ಆಗಿದೆ. ಆದರೆ ಆ ಫೋಟೋಗಳು ದುರುಪಯೋಗ ಆಗುವ ಘಟನೆಗಳು ತುಂಬಾ ನಡೆಯುತ್ತವೆ. ಮುಂಬೈನಲ್ಲೂ ಅಂಥದ್ದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ತನ್ನ ಪತ್ನಿ, ತಂಗಿ ಫೋಟೋ ನೋಡಿ ಬೆಚ್ಚಿಬಿದ್ದಿದ್ದಾನೆ.
ಮುಂಬೈನ ಖಾರ್ ಪ್ರದೇಶದ 31 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಮಸಾಜ್ ಮಾಡುವವರಿಗಾಗಿ (ಮ್ಯಾಸಾ) ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ಹುಡುಕಾಟ ನಡೆಸಿದ್ದಾನೆ. ಅಲ್ಲಿ ಅಚಾನಕ್ಕಾಗಿ ಆತನಿಗೆ ಪತ್ನಿಯ ಹಾಗೂ ತಂಗಿಯ ಫೋಟೋ ಕಾಣಿಸಿದೆ. ಅದನ್ನು ಕಂಡು ಹೌಹಾರಿದ ಆತ ತಕ್ಷಣ ಪತ್ನಿಗೆ ಫೋಟೋ ಕಳಿಸಿ ವೆಬ್ ಸೈಟ್ ನಲ್ಲಿ ಫೋಟೋ ಹೇಗೆ ಬಂತು ಎಂದು ವಿಚಾರಿಸಿದ್ದಾನೆ. ಅದಕ್ಕೆ ಆಕೆ ಆ ಫೋಟೋಗಳನ್ನು 4 ವರ್ಷದ ಹಿಂದೆ ತೆಗೆಸಿದ್ದಾಗಿಯೂ ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾಗಿಯೂ ತಿಳಿಸಿದ್ದಾಳೆ. ಪತ್ನಿ ಈ ವಿಚಾರಗಳನ್ನು ಹೇಳುತ್ತಿದ್ದಂತೆ ಪತಿ ಎಸ್ಕಾರ್ಟ್ ವೆಬ್ ಸೈಟ್ ನಲ್ಲಿದ್ದ ಬುಕಿಂಗ್ ನಂಬರ್ ಗೆ ಫೋನ್ ಮಾಡಿದ್ದಾನೆ.
ಆ ಕಡೆಯಿಂದ ಮಹಿಳೆಯೊಬ್ಬಳು ಕರೆ ಸ್ವೀಕರಿಸಿದ್ದಾಳೆ. ಆತನ ಮಸಾಜ್ ಮಾಡುವ ನೆಪದಲ್ಲಿ ಮಹಿಳೆಯನ್ನು ಖಾರ್ ಪಶ್ಚಿಮ ಭಾಗದಲ್ಲಿರುವ ಹೋಟೆಲೊಂದಕ್ಕೆ ಬರುವಂತೆ ತಿಳಿಸಿದ್ದಾನೆ. ಈತ ತನ್ನ ಪತ್ನಿ ಹಾಗೂ ತಂಗಿಯನ್ನು ಅದೇ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾನೆ. ಕರೆ ಸ್ವೀಕರಿಸಿದ ಮಹಿಳೆಯೂ ಆ ಹೋಟೆಲ್ ಗೆ ಬಂದಿದ್ದು, ಪತಿ ತನ್ನ ಪತ್ನಿ, ಸಹೋದರಿಯ ಫೋಟೋ ಅಪ್ ಲೋಡ್ ಆದ ಬಗ್ಗೆ ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸದ ಆಕೆ ವ್ಯಕ್ತಿಯೊಂದಿಗೆ ಜಗಳವಾಡಿದ್ದಲ್ಲದೇ ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಅವಳನ್ನು ಹಿಡಿದಿಟ್ಟ ವ್ಯಕ್ತಿ ಮತ್ತವನ ಪತ್ನಿ, ತಂಗಿ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆಕೆ ಹೆಸರು ರೇಷ್ಮಾ ಯಾದವ್ ಅನ್ನೋದಾಗಿ ತಿಳಿದುಬಂದಿದೆ.
ಇದನ್ನೂ ಓದಿ: Dehli acid attack: 17 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ : ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ
ಅಂದಹಾಗೆ, ಅಂದವಾದ ಯುವತಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಕದ್ದು ಅವುಗಳನ್ನು ಎಸ್ಕಾರ್ಟ್ ಹಾಗೂ ಮಸಾಜ್ ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡುವುದೇ ಆಕೆಯ ಕೆಲಸ ಎಂದು ತಿಳಿದುಬಂದಿದೆ. ಪೊಲೀಸರು ಆಕೆಯ ವಿರುದ್ಧ ಕೇಸ್ ದಾಖಲಿಸಿಕೊಂಡು ಕೋರ್ಟ್ ಗೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
Escort service website: Do you know why a man was shocked to see a photo of his wife and sister on an escort website