ಕೊಲ್ಕತ್ತಾ : ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಅದ್ರಲ್ಲೂ ಉಪಯೋಗದ ಬದಲು ಅನಾಹುತಗಳೇ ಹೆಚ್ಚಾಗಿ ನಡೆಯುತ್ತಿದೆ. ಇದೀಗ ಫೇಸ್ ಬುಕ್ ನಲ್ಲಿ ಮಹಿಳೆ ಯನ್ಜು ಪರಿಚಯ ಮಾಡಿಕೊಂಡ ವ್ಯಕ್ತಿ ಆಕೆಯನ್ನು ಕಿಡ್ನಾಪ್ ಮಾಡಿದ್ದಾನೆ.

ಪಶ್ಚಿಮ ಬಂಗಾಳದ ಬಿರ್ಭಮ್ ಎಂಬಲ್ಲಿ ನಡೆದಿದೆ. ಇಲ್ಲಿನ ನಲ್ಹಾತಿ ನಿವಾಸಿ ಮಹಿಳೆಗೆ 2019ರಲ್ಲಿ ವಿವಾಹವಾಗಿತ್ತು. ಪತಿಯ ಮನೆಯಲ್ಲಿ ವಾಸವಿದ್ದ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಮಹಿಳೆಗೆ ಫೇಸ್ಬುಕ್ನಲ್ಲಿ ರಾಕೇಶ್ ಕುಮಾರ್ ಪಾಂಡೆ ಎಂಬಾತನ ಜೊತೆಗೆ ಪರಿಚಯವಾಗಿತ್ತು. ಪರಿಚಯ ಸ್ನೇಹ, ಪ್ರೀತಿಗೆ ತಿರುಗಿತ್ತು. ಅಲ್ಲದೆ ಒಂದು ದಿನ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಾಳೆ.

ಮಹಿಳೆಯ ಪತಿ ಪತ್ನಿ ನಾಪತ್ತಯಾಗುತ್ತಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ರಾಕೇಶ್ ಪಾಂಡೆ ಮಹಿಳೆಯನ್ನು ಗುಜರಾತ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿದ್ದಾನೆ. ಅಲ್ಲದೇ ಮಹಿಳೆಯ ಮನೆಗೆ ಕರೆ ಮಾಡಿ 6 ಲಕ್ಷ ರೂಪಾಯಿ ಹಣವನ್ನು ನೀಡಬೇಕು. ಇಲ್ಲವಾದ್ರೆ ಮಹಿಳೆಯನ್ನು ಮಾರಾಟ ಮಾಡುವುದಾಗಿಯೂ ಬೆದರಿಕೆ ಯೊಡ್ಡಿದ್ದಾನೆ.

ಮಹಿಳೆಯ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅಪಹರಣಕಾರನ ಕರೆಯನ್ನು ಆಧರಿಸಿ ಪೊಲೀಸರು ರಾಕೇಶ್ ಕುಮಾರ್ ಪಾಂಡೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.