ಕುಂದಾಪುರ : ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ಪಾಲುದಾರ ಅನೂಪ್ ಶೆಟ್ಟಿ ಗೋವಾದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೈದ್ರಾಬಾದ್‌ನಲ್ಲಿ ಹುಟ್ಟಿದ್ದ ಸ್ನೇಹ ಹುಟ್ಟೂರಲ್ಲೇ ಅಂತ್ಯವಾಗಿದೆ. ಕೇವಲ 20 ಸಾವಿರ ಸ್ನೇಹಿತನನ್ನೇ ಬಾಲದ ಲೋಕಕ್ಕೆ ಕಳುಹಿಸಿಕೊಟ್ಟಿದ್ದಾನೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಳಾವರದಲ್ಲಿರುವ ಡ್ರೀಮ್ ಫೈನಾನ್ಸ್‌ನಲ್ಲಿ ನಡೆದಿದ್ದ ಪಾಲುದಾರ ಅಜೇಂದ್ರ ಶೆಟ್ಟಿ ಹತ್ಯೆ ಪ್ರಕರಣವನ್ನು ಪೊಲೀಸರು ಕೇವಲ ೨೪ ಗಂಟೆಗಳಲ್ಲಿ ಬೇಧಿಸಿದ್ದಾರೆ. ಅಜೇಂದ್ರ ಶೆಟ್ಟಿಯನ್ನು ಆತ್ಮೀಯ ಗೆಳಯ, ಪಾಲುದಾರ ಅನೂಪ್ ಶೆಟ್ಟಿ ಎಂಬಾತನೇ ಕೊಲೆ ಮಾಡಿರೋ ಆರೋಪದ ಹಿನ್ನೆಲೆಯಲ್ಲಿ ಗೋವಾದಲ್ಲಿ ಬಂಧಿಸಲಾಗಿದೆ.

ಹೈದ್ರಾಬಾದ್‌ನಲ್ಲಿ ಹುಟ್ಟಿದ್ದ ಸ್ನೇಹ : ಅಜೇಂದ್ರ ಶೆಟ್ಟಿ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಸಮೀಪದ ಕೂಡಾಲ ನಿವಾಸಿಯಾದ್ರೆ. ಅನೂಪ್ ಶೆಟ್ಟಿ ಮೊಳಹಳ್ಳಿಯ ನಿವಾಸಿ. ಇಬ್ಬರ ಮನೆಯೂ ಅಕ್ಕಪಕ್ಕದ ಊರಿನಲ್ಲಿಯೇ ಇದ್ದರೂ ಕೂಡ ಇಬ್ಬರ ಸ್ನೇಹ ಗಾಢವಾಗಿದ್ದು, ಹೈದ್ರಾಬಾದ್‌ನಲ್ಲಿ. ಅನೂಪ್ ಶೆಟ್ಟಿ ತಂದೆ ಹೈದ್ರಾಬಾದ್‌ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ರು. ಹೀಗಾಗಿ ಅನೂಪ್ ಶೆಟ್ಟಿ ಕೂಡ ತಂದೆಯ ಜೊತೆಗಿದ್ದ. ಇತ್ತ ಅಜೇಂದ್ರ ಶೆಟ್ಟಿ ಹೈದ್ರಾಬಾದ್‌ನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಇಬ್ಬರ ಪರಿಚಯ ನಂತರ ಸ್ನೇಹಕ್ಕೆ ತಿರುಗಿತ್ತು.

ಇಬ್ಬರ ಕನಸು ಡ್ರೀಮ್ ಫೈನಾನ್ಸ್ : ತಮ್ಮೂರಲ್ಲಿ ಏನಾದ್ರೂ ವ್ಯವಹಾರ ಮಾಡಬೇಕು ಅನ್ನೋದು ಇಬ್ಬರ ಕನಸು. ಇದೇ ಕಾರಣಕ್ಕೆ ಇಬ್ಬರೂ ಒಂದಾಗಿ ಡ್ರೀಮ್ ಅನ್ನೋ ಹೆಸರಲ್ಲಿ ಫೈನಾನ್ಸ್ ವ್ಯವಹಾರವನ್ನು ಆರಂಭಿಸಿದ್ದರು. ಎಲ್ಲವೂ ಇಬ್ಬರ ಎಣಿಕೆಯಂತೆಯೇ ನಡೆಯುತ್ತಿತ್ತು. ಆದ್ರೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವೂ ಆಗಿತ್ತಂತೆ. ಕೊಲೆ ಮಾಡುವ ಮುನ್ನ ಅನೂಪ್ ಶೆಟ್ಟಿ ಇಪತ್ತು ಸಾವಿರ ಹಣ ನೀಡುವಂತೆ ಕೇಳಿದ್ದಾನೆ. ಆದರೆ ಅಜೇಂದ್ರ ಶೆಟ್ಟಿ ಹಣ ನೀಡೋದಕ್ಕೆ ನಿರಾಕರಿಸಿದ್ದ.

ವೈಷಮ್ಯ ಹುಟ್ಟಿಸಿದ್ದ ಹೊಸ ಕಾರು ಖರೀದಿ, 20 ಸಾವಿರ ಹಣ : ಅಜೇಂದ್ರ ಶೆಟ್ಟಿ ಕಾರು ಅಪಘಾತವಾದ ಬೆನ್ನಲ್ಲೇ ಹೊಸ ಕಾರೊಂದನ್ನು ಖರೀದಿ ಮಾಡಿದ್ದ. ಈ ವಿಚಾರದಲ್ಲಿ ಅನೂಪ್ ಶೆಟ್ಟಿಗೆ ಅಸಮಾಧಾನವಿತ್ತು. ಅಜೇಂದ್ರ ಶೆಟ್ಟಿಯನ್ನು ಸಹಿಸೋದಕ್ಕೆ ರೆಡಿ ಇಲ್ಲದ ಅನೂಪ್ ಶೆಟ್ಟಿ ಹಣ ನೀಡದೇ ಇದ್ರೆ ಕೊಲೆ ಮಾಡೋದಕ್ಕೆ ರೆಡಿಯಾಗಿ ಬಂದಂತೆ ಕಾಣುತ್ತಿದೆ. ಡ್ರ್ಯಾಗನ್‌ನಿಂದ ಅನೂಪ್ ಶೆಟ್ಟಿ ಆತ್ಮೀಯ ಗೆಳಯ ಅಜೇಂದ್ರ ಶೆಟ್ಟಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ.
ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್ : ತಮ್ಮದೇ ಮಾಲೀಕತ್ವದ ಡ್ರೀಮ್ ಫೈನಾನ್ಸ್‌ನಲ್ಲಿ ಸ್ನೇಹಿತ ಪಾಲುದಾರ ಅಜೇಂದ್ರ ಶೆಟ್ಟಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಅನೂಪ್ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಯಾದ ಕ್ಷಣ ಮಾತ್ರದಲ್ಲಿಯೇ ಸತ್ತು ಮಲಗಿದ್ದ ಅಜೇಂದ್ರ ಶೆಟ್ಟಿಯ ಹೊಸ ಐಶಾರಾಮಿ ಕಾರಿನಲ್ಲಿ ಅನೂಪ್ ಶೆಟ್ಟಿ ಗೋವಾಕ್ಕೆ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ : Ajendra Shetty Murder : ಅಜೇಂದ್ರ ಶೆಟ್ಟಿ ಕೊಲೆ ಆರೋಪಿ ಬಂಧನ : ಪಾಲುದಾರನ ವಿರುದ್ದ ಆರೋಪ
ಗಾಂಜಾ ಮತ್ತಲ್ಲಿ ನಡೆದಿತ್ತಾ ಕೊಲೆ ? ಅಜೇಂದ್ರ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಹಲವು ವಿಚಾರಗಳು ಚರ್ಚೆಯಾಗುತ್ತಿವೆ. ಕೊಲೆಯಾಗುವ ದಿನ ಅನೂಪ್ ಶೆಟ್ಟಿ ಕುಡಿದು, ಗಾಂಜಾ ಸೇವಿಸಿ ಫೈನಾನ್ಸ್‌ಗೆ ಬಂದಿದ್ದ. ಬಂದು ಇಪತ್ತು ಸಾವಿರ ಹಣ ಕೇಳಿದ್ದಾನೆ. ಆದರೆ ಹಣ ಕೊಡಲು ಅಜೇಂದ್ರ ಶೆಟ್ಟಿ ನಿರಾಕರಿಸಿದ್ದಾನೆ. ಇದೇ ವಿಚಾರದಲ್ಲಿ ಇಬ್ಬರ ನಡುವಲ್ಲೇ ವೈಷಮ್ಯ ಮೂಡಿತ್ತು ಎನ್ನಲಾಗುತ್ತಿದೆ. ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ ಕೊಲೆ ನಡೆಯೋದಕ್ಕೆ ಗಾಂಜಾ ಮತ್ತು ಕಾರಣ ಅಂತಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಸೊಸೆಯೊಂದಿಗೆ ಸೆಕ್ಸ್‌ಗೆ ಮಾವನ ಒತ್ತಡ, ಪತಿಯಿಂದಲೂ ಕಿರುಕುಳ
ಲೆಕ್ಕಾಚಾರದ ವಿಚಾರದಲ್ಲೇ ಶುರುವಾಗಿತ್ತು ವೈಷಮ್ಯ : ಅಜೇಂದ್ರ ಶೆಟ್ಟಿ ಹಾಗೂ ಅನೂಪ್ ಶೆಟ್ಟಿ ಪಾಲುದಾರಿಕೆಯಲ್ಲಿ ಡ್ರೀಮ್ ಫೈನಾನ್ಸ್ ವ್ಯವಹಾರ ಚೆನ್ನಾಗಿಯೇ ನಡೆದುಕೊಂಡು ಬಂದಿತ್ತು. ಇಬ್ಬರ ಕೈಯಲ್ಲಿ ಒಂದಿಷ್ಟು ಹಣ ಓಡಾಡೋದಕ್ಕೂ ಶುರುವಾಗಿತ್ತು. ಆದರೆ ಅಜೇಂದ್ರ ಶೆಟ್ಟಿ ಲೆಕ್ಕಾಚಾರವನ್ನೆಲ್ಲಾ ಚೆನ್ನಾಗಿಯೇ ನಿಭಾಯಿಸುತ್ತಿದ್ದ. ಅನೂಪ್ ಶೆಟ್ಟಿ ಬಿಂದಾಸ್ ಲೈಫ್‌ಗೆ ಅಜೇಂದ್ರ ಶೆಟ್ಟಿ ಮುಳುವಾಗಿದ್ದ. ಅನೂಪ್ ಶೆಟ್ಟಿ ನಡವಳಿಕೆಯಿಂದ ಅಜೇಂದ್ರ ಶೆಟ್ಟಿ ತನ್ನ ಗೆಳೆಯನನ್ನು ವ್ಯವಹಾರದಿಂದ ದೂರ ಮಾಡಿಕೊಳ್ಳಲು ಚಿಂತಿಸಿದ್ದ. ಇದು ಅನೂಪ್ ಶೆಟ್ಟಿಯ ಕೋಪಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.