ಸೋಮವಾರ, ಏಪ್ರಿಲ್ 28, 2025
HomeCrimeGanja inside chicken meat : ಚಿಕನ್​ ಪೀಸ್​ನಲ್ಲಿ ಗಾಂಜಾವನ್ನಿಟ್ಟು ಕೈದಿಗಳಿಗೆ ಪೂರೈಕೆ : ಖದೀಮನನ್ನು...

Ganja inside chicken meat : ಚಿಕನ್​ ಪೀಸ್​ನಲ್ಲಿ ಗಾಂಜಾವನ್ನಿಟ್ಟು ಕೈದಿಗಳಿಗೆ ಪೂರೈಕೆ : ಖದೀಮನನ್ನು ಬಂಧಿಸಿದ ಖಾಕಿ ಪಡೆ

- Advertisement -

ವಿಜಯಪುರ : Ganja inside chicken meat : ಸಮಾಜದಲ್ಲಿ ತಪ್ಪು ಕೆಲಸ ಮಾಡಿದವರು ಬುದ್ಧಿ ಕಲೀಲಿ ಅಂತಾ ಜೈಲಿಗೆ ಹಾಕಲಾಗುತ್ತೆ. ಆದರೆ ಕೆಲವರು ಜೈಲಿಗೆ ಹೋದರೂ ತಮ್ಮ ಖಯಾಲಿ ಬದಲಾಯಿಸಿಕೊಳ್ಳುವುದೇ ಇಲ್ಲ. ಜೀವನ ಬದಲಾಯಿಸಿಕೊಳ್ಳಲಿ ಅಂತಾ ಶಿಕ್ಷೆ ಕೊಟ್ಟರೆ ಕಾರಾಗೃಹದಲ್ಲಿ ಪೊಲೀಸರ ಹದ್ದಿನ ಕಣ್ಣಿನ ನಡುವೆಯೇ ಕಳ್ಳಾಟ ಮಾಡಲು ಹೋಗಿ ವಿಜಯಪುರ ಜೈಲಿನ ಕೈದಿಗಳು ಸಿಕ್ಕಿ ಬಿದ್ದಿದ್ದಾರೆ. ಇವರಿಗೆ ಸಾಥ್​ ನೀಡಿದ್ದ ದುಷ್ಕರ್ಮಿಯನ್ನೂ ಬಂಧಿಸುವ ಮೂಲಕ ಪೊಲೀಸರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ.

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಚಿಕನ್​ ಪೂರೈಕೆ ಮಾಡುತ್ತಿದ್ದ ಪ್ರಜ್ವಲ್​ ಲಕ್ಷ್ಮಣ ಮಾಬರುಖಾನೆ ಜೈಲು ಪಾಲಾದ ಆರೋಪಿ. ಈತ ಕೇವಲ ಜೈಲಿಗೆ ಚಿಕನ್​​ ಪೂರೈಕೆ ಮಾಡಿದ್ದರೆ ಎಲ್ಲವೂ ಸರಿಯಾಗಿ ಇರ್ತಿತ್ತು .ಆದರೆ ಈತ ಚಿಕನ್ ಪೀಸ್​ನ ಒಳಗಡೆ ಗಾಂಜಾವನ್ನಿಟ್ಟು ಅದಕ್ಕೆ ಹೊಲಿಗೆ ಹಾಕಿ ಕೈದಿಗಳಿಗೆ ಸರಬರಾಜು ಮಾಡುತ್ತಿದ್ದ. ಪ್ಲಾಸ್ಟಿಕ್​ನಲ್ಲಿ ಗಾಂಜಾವನ್ನು ತುಂಬುತ್ತಿದ್ದ ಈತ ಚಿಕ್ಕ ಸಂದೇಹವೂ ಬಾರದಂತೆ ಇದನ್ನು ಕೋಳಿ ಮಾಂಸದ ಒಳಗಡೆ ಇಟ್ಟು ಮಾಂಸಕ್ಕೆ ಹೊಲಿಗೆ ಹಾಕುತ್ತಿದ್ದ ಎನ್ನಲಾಗಿದೆ .

ಕೈದಿಗಳ ನಡೆ ಬಗ್ಗೆ ಅನುಮಾನಗೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಪ್ರಜ್ವಲ್​ ಲಕ್ಷ್ಮಣ ಮಾಬರುಖಾನೆ ಹಾಗೂ ಕೈದಿಗಳ ಕಳ್ಳಾಟ ಬೆಳಕಿಗೆ ಬಂದಿದೆ. ಈ ಖದೀಮನನ್ನು ಬಂಧಿಸಿರುವ ಪೊಲೀಸರು ದೊಡ್ಡ ದೊಡ್ಡ ಕೋಳಿ ಮಾಂಸದೊಳಗಿದ್ದ 2 ಗ್ರಾಂನಷ್ಟು ಗಾಂಜಾವನ್ನು ತುಂಬಿಡಲಾಗಿದ್ದ 18 ಗಾಂಜಾ ಚೀಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆದರ್ಶನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Priyank Kharge : ಕಾಂಗ್ರೆಸ್ಸಿಗರ ಗುಪ್ತ ಸಿಡಿಗಳು ನಮ್ಮ ಬಳಿ ಇದೆ : ಮಂಚದ ಹೇಳಿಕೆ ನೀಡಿದ ಪ್ರಿಯಾಂಕ್​ ಖರ್ಗೆಗೆ ಬಿಜೆಪಿ ಟಾಂಗ್​​

ಇದನ್ನೂ ಓದಿ : Chenab Railway Bridge : ಉದ್ಘಾಟನೆಯಾಯ್ತು ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆ

ಇದನ್ನೂ ಓದಿ : Laal Singh Chaddha : ಲಾಲ್​ ಸಿಂಗ್​ ಛಡ್ಡಾ : ತನ್ನ ಸಿನಿ ಕರಿಯರ್​ನಲ್ಲಿ ಹಿಂದೆಂದೂ ಕಾಣದ ಸೋಲನ್ನುಂಡ ಆಮೀರ್ ಖಾನ್​

ಇದನ್ನೂ ಓದಿ : there is no change of CM : ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಬೊಮ್ಮಾಯಿಯೇ ನಮ್ಮ ಸಿಎಂ : ಯಡಿಯೂರಪ್ಪ ಸ್ಪಷ್ಟನೆ

Ganja inside chicken meat and supply to prisoners: Accused arrested

RELATED ARTICLES

Most Popular